ಒಮ್ಮೊಮ್ಮೆ ಅನ್ಸುತ್ತೆ.....2

ಒಮ್ಮೊಮ್ಮೆ ಅನ್ಸುತ್ತೆ.....2

ಒಮ್ಮೊಮ್ಮೆ ಅನ್ಸುತ್ತೆ
ಈ ದೇವರ ಪೂಜೆ , ಹಬ್ಬ ಹರಿದಿನ ಇದೆಲ್ಲ ಮನುಷ್ಯ ಮಾಡ್ಕೊಂಡಿರೋದು ಅಂತ,
ಪೂಜೆ ಮುಗಿದು ಮದ್ಯಾನ ಎಲೆಯಲ್ಲಿ ಒಬ್ಬಟ್ಟು ಕಡುಬು ಇಂತವೆಲ್ಲ ಬಿದ್ದಾಗ ಅನ್ಸುತ್ತೆ
ನಿಜವಾಗ್ಲು ಇಂತದನ್ನೆಲ್ಲ ಆ ದೇವರೆ ಮಾಡಿರೋದು ಅಂತ !.

ಒಮ್ಮೊಮ್ಮೆ ಅನ್ಸುತ್ತೆ...
ಈ ಮನುಷ್ಯ ಯಾವತ್ತು ಸುಖವಾಗಿರೊಲ್ಲ ಅಂತ, ಸದಾ ಗೊಣಗಾಟನೆ
ಯಾವತ್ತು ಕೇಳಿದ್ರು ನಿನ್ನೆ ಸುಖವಾಗಿದ್ದೆ ಅಂತಾನೆ!

ಒಮ್ಮೊಮ್ಮೆ ಅನ್ಸುತ್ತೆ
ಈ ಸೆಲ್ ಫೋನು, ನೆಟ್ , ಫೇಸ್ ಬುಕ್ಕು, ಇವೆಲ್ಲ ಇಲ್ದೆ ಪಾಪ ಆ ಕಾಡ್ಜನ
ಶಿಲಾಯುಗ್ದಲ್ಲಿ ಹೇಗೆ ಬದ್ಕಿದ್ರೊ ಅಂತ!

 

Rating
No votes yet

Comments