ಚಿಗರೆಗಣ್ಣಿಯ ಸಿಟ್ಟು

ಚಿಗರೆಗಣ್ಣಿಯ ಸಿಟ್ಟು

ಗೆಳತಿ! ನನ್ನೆದೆ ಒಡೆದರೂ ಸರಿ ; ಎನ್ನೊಡಲ ಆ ಮದನ ಸೊರಗಿಸಿದರೂ ಸರಿ ; ಒಂದೆಡೆ ನಿಲ್ಲದವನಲ್ಲಿ ನಾನದೆಂತು ಒಲವನಿಡಲೇ? ಹೀಗೆಂದು ಸಿಟ್ಟಿನಲಿ ಸೆಡವಿನಲಿ ನುಡಿಯುತ್ತಲೇ ನಲ್ಲನ ದಾರಿಯ ಕಳವಳದಲಿ ಬಿಡದೇ ನೋಡಿದಳು ಚಿಗರೆಗಣ್ಣಿ! ಸಂಸ್ಕೃತ ಮೂಲ (ಅಮರುಕನ ಅಮರು ಶತಕದಿಂದ): ಸ್ಫುಟತು ಹೃದಯಂ ಕಾಮಃ ಕಾಮಂ ಕರೋತು ತನುಮ್ ತನುಮ್ ನ ಸಖಿ ಚಪಲಪ್ರೇಮ್ನಾ ಕಾರ್ಯಮ್ ಪುನರ್ದಯಿತೇನ ಮೇ | ಇತಿ ಸರಭಸಂ ಮಾನಾಟೋಪಾದ್ ಉದೀರ್ಯ ವಚಸ್ತಯಾ ರಮಣಪದವೀ ಸಾರಂಗಾಕ್ಷ್ಯಾ ಸಶಂಕಿತ*ಮೀಕ್ಷಿತಾ || -ಹಂಸಾನಂದಿ ಕೊ: ಕಡೆಯ ಸಾಲಿನಲ್ಲಿ ಸಶಂಕಿತಮೀಕ್ಷಿತಾ ಎಂಬುದಕ್ಕೆ ನಿರಂತರಮೀಕ್ಷಿತಾ ಎಂಬ ಪಾಠಾಂತರವೂ ಇರುವಂತೆ ತೋರುತ್ತದೆ. ಅನುವಾದದಲ್ಲಿ ಎರಡೂ ಅರ್ಥಗಳನ್ನು ತಂದಿದ್ದೇನೆ. ಕೊ.ಕೊ: ಮೂಲದಲ್ಲಿ, ನಲ್ಲನು ಒಂದೆಡೆ ನಿಲ್ಲುವನಲ್ಲ, ಹಾಗೇ ಒಬ್ಬಳಲ್ಲೇ (ಪದ್ಯದ ನಾಯಕಿಯೊಬ್ಬಳಲ್ಲೇ)ಮನವನ್ನಿಡುವನಲ್ಲ ಎನ್ನುವ ಎರಡೂ ಭಾವಗಳು ಕಂಡುಬರುತ್ತಿವೆ. ಅನುವಾದದಲ್ಲಿ ಅದು ಅಷ್ಟು ಚೆನ್ನಾಗಿ ತೋರಿಬಂದಿಲ್ಲದಿದ್ದರೆ ಅದು ನನ್ನ ಅನುವಾದದ ಮಿತಿ ಅಷ್ಟೇ.
Rating
No votes yet

Comments