ಮಾತು ಮಧುರ ಮೌನ ಅಮರ

ಮಾತು ಮಧುರ ಮೌನ ಅಮರ

ಕವನ

 

 

ನೆನಹು ಹಾಡಿತು.. ಮನವ ಕದಡಿತು..
ಮಾತು ಹೊರಳದೆ ನಿಂತಿತು..
ಹರುಷ ಮೂಡಿಸಿ ಹೃದಯ ತೆರೆದಿತು..
ಮರೆತ ಹಾಡದು ಉಲಿಯಿತು…..

ಕಳೆದು ತೀರದ ಮಧುರ ಕ್ಷಣವದು..
ಪ್ರೀತಿ, ಬದುಕಲಿ ಕಲೆತಿತು..
ಅವಳ ನೋಡಿದ ಮೊದಲ ದಿನವದು..
ಒಲವು ಮಿಂಚಿಸಿ ಬೆಸೆದಿತು.....

ಬರೆದು ಗೀಚಿದ ಪ್ರೇಮ ಕವನದಿ..
ಭಾವ ಹೊಸಯಿಸಿ ಹಾಡಲು..
ನಗುತ ಮೀದಳು ಹಾರಿ ಗಗನದಿ..
ಸುಖದ ಸೆಲೆಯಲಿ ತೇಲಲು.....

ಎಂದೋ ಮೀಟಿದ ನಾದ ಸುಸ್ವರ-
-
ವಂದು ನಾಟಿದ ಘಳಿಗೆಗೆ..
ಮಿಂದು ನಾಕದಿ ನಿಂದು ಮಾಮರ-
-
ದಂದು ಶಿಂಜಿತ ಕೂಗಿಗೆ.....

ಹಕ್ಕಿ ಹಾರಿತು ಮರಳಿ ಗೂಡಿಗೆ..
ಋತುಗಳುರುಳುತ ಬಾಳ್ವೆಗೆ..
ಪ್ರೀತಿ ಹುದುಗಿತು ಮನದಿ ಮೂಲೆಗೆ..
ನೆನಹು ಉಳಿದಿತು ನಾಳೆಗೆ.....

ಕಲೆತು ಹಾಡಿದ ಅಮರ ಗೀತೆಯು ..
ಗುನುಗಿ ಕಾಡುತಲಿಂದಿಗು..
ಬೆರೆತು ಸುಖಿಸಿದ ದಿನಗಳೆರಡವು..
ಜಿನುಗಿ ಮನದೊಳಗೆಂದಿಗು.....

ಬಾ ವಸಂತವೆ ಮರಳಿ ಬಾ - ಕವಿ..
ಮಿಡಿತ ನುಡಿಯೊಳಗೊಲವ ತಾ..
ಹರುಷ ತಾ ಮನದಣಿಸ ಬಾ - ಕವಿ..
ಹೃದಯ ಸ್ಪರ್ಷಿಸಿ ಹರಸುತ....

 


      

 

Comments