ನೀನಾಗು...

ನೀನಾಗು...

ಕವನ

 

ನೀನಾಗು......

ಅಮ್ಮ ನಾನು
ಬೆಳೆದ ಮೇಲೆ ಏನು ಆಗಲಿ?
ಬೆಳೆದ ಮೇಲೆ ಜಗದೊಳಗೆ
ಏನು ಮಾಡಲಿ?

ಕಂದ ನಿನಗೆ
ಅಮ್ಮನಾಗಿ ಏನು ಹೇಳಲಿ
ಏನೇ ಆಗು ಬೆರಗಿನಿಂದ
ಜನರು ನೋಡಲಿ.

ಮರವು ಆಗಿ ನಿಲ್ಲು ನೀನು
ರಸ್ತೆ ಬದಿಯಲಿ
ಬಂದು ನಿಂತ ಜನರ
ದಣಿವು ಸ್ವಲ್ಪ ತಣಿಯಲಿ
ಬಾಯ ತುಂಬ ಹರಸಲಿ //ಅಮ್ಮ//

ಜ್ಞಾನಿಯಾಗು ವಿಜ್ಞಾನಿಯಾಗು
ಹಕ್ಕಿಯಂತೆ ಭೂಮಿಯಿಂದ ಮೇಲೆ ಹಾರುತ
ವಿಸ್ಮಯದಿಂದ ಜಗವ ನೀನು ಹಾಗೇ ನೋಡುತಾ
ಬದುಕ ಪಾಠ ಕಲಿಯುತ //ಅಮ್ಮ//

ಹಳ್ಳಿ ಮೀರಿ, ರಾಜ್ಯ ಮೀರಿ, ದೇಶದೆಲ್ಲೆ ಮೀರುತ
ಜಗಕೆ ರಾಯಭಾರಿಯಾಗು
ವಿಶ್ವ ಶಾಂತಿ ಸಾರುತ
ಶಾಂತಿ ಮಂತ್ರ ಪಠಿಸುತಾ //ಅಮ್ಮ//

ಗುರುವೆ ದೈವವೆಂದು ತಿಳಿದು
ಶಾಲೆಗೋಗು ನೀ
ಏನೇ ಆಗು ಅದಕು ಮೊದಲು
ನೀನು ಆಗು ನೀ, ನೀನು ಆಗು ನೀ, ನೀನು ಆಗು ನೀ //ಅಮ್ಮ//

Comments