ಕನಸುಗಾರ...
ಚಿನ್ನದ ಛಾವಣಿಯ ಮೇಲೆ, ಹುಯ್ದಿದೆ ಮುತ್ತು ರತ್ನಗಳ ಮಳೆ...
ಹರಿದು ನೆಲ ಸೇರಿತದು, ಇಲ್ಲಿ ನಿನ್ನ ನಗುವಿಗೊ೦ದೆ ಬೆಲೆ...
ದ೦ತದ ಮನೆಯ೦ಗಳದಲ್ಲಿ, ಕುಳಿತು ಕಾದಿಹ ಚ೦ದ್ರ ಅಳಿಸಿ ತನ್ನ ಕಪ್ಪು ಕಲೆಯ...
ಮಿ೦ಚಾಗಿ ಮೆರೆವ ನಿನ್ನ ಹಿಡಿಯಲು, ಹಾಸಿಹ ನಕ್ಶತ್ರಗಳಲ್ಲಿ ನೇಯ್ದ ಬಲೆಯ...
ಇದು ಕನಸಿನ ಲೋಕ ಚೆಲುವೆ...
ಇಲ್ಲಿ ಎಲ್ಲೆಲ್ಲೂ ನೀನೇ ಇರುವೆ...
ಆ ಸೂರ್ಯ ವೈರಾಗಿ, ಲೋಕದ ತುದಿಯಲ್ಲಿ ನ೦ದಿಹನು, ಸಿಗದೆ ನಿನ್ನ ಹೊಗಳಲು ಪದಗಳು...
ಈ ಬೆ೦ಕಿ ನಿನ್ನ ಬೈರಾಗಿ, ಶಿಸ್ತಾಗಿ ಕುಳಿತಿಹನು ಈ ಇರುಳಲ್ಲಿ ನಿನ್ನ೦ದವ ಬೆಳಗಲು...
ಬೆರಗಾಗಿ ಮತ್ತೆ ಮತ್ತೆ ಬರುತಿರೆ, ನಿನ್ನ ನೋಡಲು ಆ ಸಿಡಿಲು...
ಕಾದಿಹೆ ಇಡೀ ಲೋಕವು ನಿನಗಾಗಿ, ಬರಿದು ಮಾಡಿ ತನ್ನ ಒಡಲು...
ಇದು ಕನಸಿನ ಲೋಕ ಚೆಲುವೆ...
ಈ ಲೋಕಕ್ಕೆ ನೀನೇ ಒಡವೆ...
ರಾತ್ರಿ ನೆರೆದಿದೆ, ಗಾಳಿಯ ಹಸಿವಿ೦ಗದೆ, ಬ೦ದಿದೆ ಮತ್ತೆ ನಿನ್ನ ಚು೦ಬಿಸಲು...
ಕಲ್ಲು ಹೃದಯದ, ಬೆಟ್ಟ ಕರಗಿದೆ, ನದಿಗಳ ಮಾಲೆ ಹಿಡಿದು ನಿನ್ನ ಒಲಿಸಲು...
ವಿಷ, ತ್ಯಜಿಸಿ ಸರ್ಪ, ಸುಳ್ಳುಗಳ ಕ೦ತೆ ತ೦ದಿದೆ, ಸಿಹಿ ಮಾತಲ್ಲಿ ನಿನ್ನ ನ೦ಬಿಸಲು...
ಹುಲಿ, ಸಿ೦ಹಗಳು, ವಾದ್ಯ ಹಿಡಿದು ನುಡಿಸಿವೆ, ಸಿಹಿ ಗಾನದ ಅಲೆಯಲ್ಲಿ ನಿನ್ನ ಒಲಿಸಲು...
ಇದು ಕನಸಿನ ಲೋಕ ಚೆಲುವೆ...
ಪ್ರತಿ ಜೀವಕ್ಕೂ ಇಲ್ಲಿ ನಿನ್ನ ಮೇಲೆ ಒಲವೇ...
ಕಲ್ಲು ಕವಿಯಾಗಿದೆ, ಮರವು ಬಿಲ್ಲಾಗಿದೆ, ಸೆಟೆದು ನಿ೦ತಿದೆ ಹೂಡಿ ಬಯಕೆಗಳ ಹೂಬಾಣ...
ಒಲಿದು ದೂರಾದೀಯೇ, ನನ್ನ ಹೃದಯ ಮುರಿದೀತು, ಹೂವ೦ತೆ ಹಗುರ ಈ ಕನಸು, ಜೋಪಾನ...
ಕಳೆದ೦ತೆ ಈ ಇರುಳು, ಸಿಹಿಯಾಗಿ ಹಾಡಿವೆ ನೂರು ಹಕ್ಕಿಗಳು ಹಾಡು...
ಬೆಳಗಾಗಿ ನೀ ಹೊರಟಾಗ, ಇಲ್ಲಿ ಉಳಿಯುವುದು ಖಾಲಿ ಇರುವ ಹಕ್ಕಿ ಗೂಡು...
ಇದು ಕನಸಿನ ಲೋಕ ಚೆಲುವೆ...
ಮತ್ತೆ ನಿನಗೆ ತೋರಿಸಲು ನಾ ಬರುವೆ...
Comments
ಉ: ಕನಸುಗಾರ...
In reply to ಉ: ಕನಸುಗಾರ... by gurudutt_r
ಉ: ಕನಸುಗಾರ...