ಹಿಂಗೆ ಆದ್ರೆ ಮುಂದ ಹೆಂಗ

ಹಿಂಗೆ ಆದ್ರೆ ಮುಂದ ಹೆಂಗ

ಸ್ನೇಹಿತರೆ,


 
ಇವತ್ತು ಟ್ರೈನ್ ಅಲ್ಲಿ ಬರೋವಾಗ ಕೆಲವೊಂದು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ವಿ . ಏನಂದರೆ ಒಂದು ವೇಳೆ ಹಳ್ಳಿಯಲ್ಲಿ ಇರೋರೆಲ್ಲ ಸಿಟಿಗೆ ಬಂದರೆ ಏನು ಗತಿ ಅಂತ.ನಾವು ಇವತ್ತು ಧಾನ್ಯ ಬೆಳೆಯೋ ರೈತರನ್ನ ತುಂಬಾ ಕೀಳಾಗಿ ನೋಡ್ತಾ ಇದ್ದಿವಿ,ಇದರಿಂದ ಮುಂದಿನ ಮಕ್ಕಳು ಯಾರು ರೈತರು ಆಗೋ ಒಲವು ತೋರದೆ ಇದ್ದರೆ ಮುಂದೆ ನಾವು ತಿನ್ನೋ ಅನ್ನಕ್ಕೆನು ಮಾಡುವುದು.ಈಗಾಗಲೇ ವ್ಯವಸಾಯ ಮಾಡೋರನ್ನು ಕಂಡರೆ ಹುಡಗಿರು ಮೂಗು ಮುರಿತಾ ಇದಾರೆ.ಇದು ಹಿಂಗೆ ಮುಂದುವರೆದರೆ ನಮ್ಮ ರೈತರು ಮಾಡುವೆ ಆಗೋದು ಯಾರನ್ನ,ಅಥವಾ ಮದುವೆಗೋಸ್ಕರ ವ್ಯವಸಾಯ ಬಿಟ್ಟು ಬಂದ್ರೆ ರೈತರೆಲ್ಲಿ,ಹೊಲಗಲೆಲ್ಲಿ ಸಿಗೋದು.ಇದರ ಬಗ್ಗೆ ಯಾವತ್ತಾದರೂ ನಾವು ಯೋಚನೆ ಮಾಡಿದ್ದಿವಾ?ನಮ್ಮ ದೇಶ ರೈತ ಪ್ರಧಾನ ದೇಶ.ಆದರೆ ನಾವು ರೈತರನ್ನ ಪ್ರೋತ್ಸಾಹಿಸೋದನ್ನ ಬಿಟ್ಟು ಅವರ ಬಗ್ಗೆ ಕೀಳರಿಮೆ ಬೆಳೆಸಿಕೊಂಡಿದಿವಿ.

  ಹಣದಿಂದ ಏನಾದರೂ ಖರಿದಿಸಬಹುದೇ ಹೊರತು ಅದನ್ನೇ ತಿನ್ನೋಕಾಗುತ್ತಾ?ಹಣದ ವ್ಯಾಮೋಹದಿಂದ ಈಚೆ ಬಂದು ನೋಡಬೇಕಾಗಿದೆ.ಇರೋ ರೈತರೆಲ್ಲ ಇಂಜಿನಿಯರ್/ಡಾಕ್ಟರ ಆದ್ರೆ ಹೊಟ್ಟೆಗೆ ಬರಿ tablets /computers ತಿನ್ನಬೇಕಾಗುತ್ತೆ .ನಮ್ಮ ಭೂಮಿನ ಮಾರದೆ ನಮ್ಮ ಮಕ್ಕಳಲ್ಲಿ ಒಬ್ಬರಿಗಾದ್ರು ರೈತರನ್ನಾಗಿ ಮಾಡಬೇಕು,ಅದರ ಮಹತ್ವ ತಿಳಿಸಿ ಕೊಡಬೇಕು.ರೈತ ದೇವರಿಗೆ ಸಮಾನ,ಆತ ಅನ್ನ ಕೊಡೊ ದೇವರು.ಅವರನ್ನ ಕೀಳಾಗಿ ಕಾಣೋದು ಬಿಟ್ಟು ನಮ್ಮ ಮಕ್ಕಳನ್ನು ರೈತರನ್ನಾಗಿ ಮಾಡೋ ಕನಸು ಹೆತ್ತವರು ಕಾಣಬೇಕಾಗಿದೆ.ಇವತ್ತಿಗೆ ನನ್ನ ಮಾತು ಬಾಲಿಶ ಅನ್ನಿಸಬಹುದು ಆದರೆ ಮುಂದೆ ಈ ಪರಿಸ್ಥಿತಿ ಬಂದಾಗ ಸರ್ಕಾರವೆ ಮನೆಗೊಬ್ಬ ರೈತ ಇರಲೇ ಬೇಕು ಅಂದರೂ ಆಶರ್ಯವಿಲ್ಲ.ನಿವೇನಂತಿರಾ.........?
ಚುಕ್ಕಿ.
(ಪ್ರವೀಣ್.ಎಸ.ಕುಲಕರ್ಣಿ)

Comments