.ಅಮ್ಮಾ: ನಾ ನಿನಗೆ ಧನ್ಯವಾದಗಳನ್ನು ಅರ್ಪಿಸಲು ಮರೆತಿದ್ದೆ...

.ಅಮ್ಮಾ: ನಾ ನಿನಗೆ ಧನ್ಯವಾದಗಳನ್ನು ಅರ್ಪಿಸಲು ಮರೆತಿದ್ದೆ...

ಚಿತ್ರ

 

 

 

 

 

 

 

ಆಗಸ್ಟ್ ೧ ನೇ ತಾರೀಖು  ನೀ ನನ್ನನ್ನ 

ನಿನ್ನ ಮೃದುವಾದ ಕೈಗಳಿಂದ ಎತ್ತಿ

 ಎದೆಗಾನಿಸಿಕೊಂಡು ಅಪ್ಪಿ ಮುದ್ದಾಡಿದಾಗ 

ನಾ ನಿನಗೆ ಧನ್ಯವಾದ ಅರ್ಪಿಸಲು ಮರೆತಿದ್ದೆ,

 

ನನ್ನ ಕಾಲುಗಳ ಮೇಲೆ ನಾ ನಿಲ್ಲಲು- ನಡೆದಾಡಲು ಕಲಿಸಿದ

ಮೊದಲ -ತೊದಲ ನುಡಿ ನುಡಿಯಲು ಸಹಾಯ ಮಾಡಿದ  ನೀ

ಈ ಸುಂದರ ಜಗತ್ತಿಗೆ ಪ್ರವೇಶಿಸಲು  ನನಗೆ ಮಾರ್ಗದರ್ಶಿಯಾದೆ,

ಆಗ ನಾ ನಿನಗೆ ಧನ್ಯವಾದ ಅರ್ಪಿಸಲು ಮರೆತಿದ್ದೆ

 

ದಿನಂಪ್ರತಿ ಶಾಲೆಗೆ ಹೋಗ್ವಾಗ 

ರಚ್ಚೆ ಹಿಡಿದು ಅತ್ತು ಒಲ್ಲೆ -ಒಲ್ಲೆ ಎಂದ ನನಗೆ

 ನನ್ನ ಬಟ್ಟೆ ತೊಡಿಸಿ ತಲೆ ಬಾಚಿ ಹಣೆಗೆ ಮುತ್ತನಿಟ್ಟು

ಶಾಲೆವರೆಗೆ ಬಂದು ಕೈ ಬೀಸಿ ಒಲ್ಲದ ಮನಸಿಂದ ಹೊರಟ ನೀ

ನನ್ನ ಶಾಲೆಯ ದಿನಚರಿ ತಪ್ಪದೇ ನೋಡಿ

 ನಾ  ಸಮಯ ಪರಿಪಾಲಕನಾಗಲು ಕಾರಣ ನೀ

ಈ ಜಗವನ್ನೆದುರಿಸಲು ಧೈರ್ಯ ಸಾಹಸ ತುಂಬಿ -ದೇಶಪ್ರೇಮ ಬಿತ್ತಿದ 

ನಿನಗೆ ಧನ್ಯವಾದ ಅರ್ಪಿಸಲು ಮರೆತಿದ್ದೆ

 

ನಾಟ್ಯ-ಸಂಗೀತ-ಕರಾಟೆ ತರಗತಿಗೆ ನನ್ನೊಯ್ದು ಬಿಟ್ಟ ನೀ

ಅಪೂರ್ಣನಾದ  ನನ್ನ ಪರಿಪೂರ್ಣ ವ್ಯಕ್ತಿಯಾಗಿಸಲು 

ಹಗಲಿರುಳು ಶ್ರಮಿಸಿದ  ನಿನಗೆ

ನಾ ಧನ್ಯವಾದ ಅರ್ಪಿಸಲು ಮರೆತಿದ್ದೆ

 

ನನ್ನ ಡೆಂಟಿಸ್ಟ್-ಸ್ಕಿನ್ ಸ್ಪೆಷಾಲಿಸ್ಟ 

 ಜೊತೆ ತಾಳ್ಮೆಯಿಂದ ಚರ್ಚಿಸಿ

ನನ್ನ ದಂತ-ಚರ್ಮ ರಕ್ಷಣೆ ಆರಿಕೆ ಮಾಡಿದ ನೀ 

ಸದಾ ಶುಚಿಯಾಗಿದ್ದು ಆರೋಗ್ಯವಂತನಾಗಿರುವುದರ ಕುರಿತು 

ಜಾಗೃತಿ ಮೂಡಿಸಿದ 

ನಿನಗೆ ಧನ್ಯವಾದ ಅರ್ಪಿಸಲು ಮರೆತಿದ್ದೆ

 

ಅಗಣಿತ ಸ್ಪರ್ಧೆಗಳಿಗೆ ನನ್ನ ಜೊತೆಯಾಗಿ ಬಂದು

 ಚಪ್ಪಾಳೆ ತಟ್ಟಿ ಹುರಿದುಂಬಿಸಿ

ನನ್ನ ಗೆಲುವಿಗೆ ಕಾರಣಳಾದೆ

ಹೊಸತನ್ನ ಅನ್ವೇಷಿಸಲು-ಅನುಕರಿಸಲು ಪ್ರಯತ್ನಿಸಲು

ನನಗೆ ಉತ್ಸಾಹ ತುಂಬಿದ ನೀ

ಸದೃಢ ಸಂಪನ್ನ ಸರಳ ವ್ಯಕ್ತಿಯನ್ನಾಗಿ ಮಾಡಿದೆ 

ಅಮ್ಮ ಆಗ ನಾ ನಿನಗೆ ಧನ್ಯವಾದ ಅರ್ಪಿಸಲು ಮರೆತಿದ್ದೆ

 

ಶಾಲೆಗೊಗುವಾಗ ಮುದ್ದು ಕಂದನ ಆಹಾರಕ್ಕಾಗಿ 

ವಿಶೇಷ ಅಸ್ಥೆ ವಹಿಸಿ

ತಿಂಡಿ ಬಾಕ್ಸಿಗೆ ಇಡ್ಲಿ-ವಡೆ  ದೋಸೆ

ಕೇಸರಿ ಬಾತು ಹಾಕಿ ಉದರ ತುಂಬಿಸಿದ ನೀ

ಓದಿನ ತಯಾರಿಯಲ್ಲಿ ಹಗಲಿರುಳು ಓದಿ 

ಬೆವರಿ ಜ್ವರ ಬಂದು ಮಲಗಿದಾಗ ಧೈರ್ಯ ಹೇಳಿ 

 ಉತ್ಸಾಹ ಹುಮ್ಮಸ್ಸು ತುಂಬಿದೆ -ಜೊತೆಗಿದ್ದೆ

ಅಮ್ಮಾ ನಿನಗೆ ಧನ್ಯವಾದ ಅರ್ಪಿಸಲು ಮರೆತಿದ್ದೆ

 

ಹಲವರು ಹುಬ್ಬೇರಿಸಿದ - ನಾ ಆಯ್ಕೆ ಮಾಡಿದ

ಕಲಾ ವಿಭಾಗವನ್ನು ನೀ ಬೆಂಬಲಿಸಿದ್ದೆ

ಹಲವರು ಕನಸು ಅಂದಿದ್ದನ್ನ ನಾ ನನಸಾಗಿಸಲು 

ನನ್ನ  ಕನಸುಗಳಿಗೆ ಬಣ್ಣ ತುಂಬಿದ ನೀ

ಅಲೆಗಳಿಗೆದುರಾಗಿ ಈಜಲು ಕಲಿಸಿದ ನೀ

ನನ್ನ ಗುರಿ ಮುಟ್ಟಲು -ವಿಜಯಿಯಾಗಲು 

ನಿಸ್ವಾರ್ಥಿಯಾಗಿ ನೆರವಾದ 

 ಅಮ್ಮಾ  ನಿನಗೆ ನಾ ಧನ್ಯವಾದ  ಅರ್ಪಿಸಲು ಮರೆತಿದ್ದೆ 

 

ನನ್ನ ಭವ್ಯ ಭವಿತವ್ವ್ಯಕ್ಕಾಗಿ  ನಿದ್ರೆ- ನೀರಡಿಕೆ

ಲೆಕ್ಕಿಸದೆ ಹಗಲಿರುಳು ನನ್ ಸಾಕಿ ಸಲಹಿ

ನನ್ನ ಶ್ರೇಯೋಭಿಲಾಶೆಯಾಗಿ  ಸದಾ ನನ್ನೊಡನಿದ್ದ 

ಅಮ್ಮಾ ನಿನಗೆ  ನಾ ಧನ್ಯವಾದ ಅರ್ಪಿಸಲು ಮರೆತಿದ್ದೆ

 

ಆದರೆ

 

ಇಂದು ಎಲ್ಲ ನೆನಪಾಗುತ್ತಿದೆ

ಅಂದು ಅರ್ಪಿಸದ ಧನ್ಯವಾದಗಳನ್ನ

ಇಂದು ಅರ್ಪಿಸುತ್ತಾ

ನಿನ್ನ ಮುದ್ದಿನ ಮಗನಾಗಿದ್ದಕ್ಕೆ  ಖುಷಿ ಪಡುತ್ತಾ

ಆಮಾ ನಿನಗಿದೋ ನನ್ನ ಧನ್ಯವಾದ ಅರ್ಪಿಸುತ್ತಿರುವೆ....

 

============================================================= 

 

ಜಗದ ಸಮಸ್ತ ತಾಯಿಯರೂ ಸದಾ ಸುಖ -ಶಾಂತಿ ನೆಮ್ಮದಿಯಿಂದ ಇರಲಿ  ಎಂದು ಹಾರೈಸುತ್ತಾ ...

 

 

ಚಿತ್ರ ಮೂಲ : 

http://1.bp.blogspot.com/_Bopl9F3NAcM/TJC94Ii_3rI/AAAAAAAAB8o/egS84GqXNyY/s1600/Baby-Krishna-with-mother-Yashoda.jpg

 

 

 

 

 

 

 

 

 

Rating
No votes yet

Comments