ಬೀchi ಜೋಕುಗಳು (೨)

ಬೀchi ಜೋಕುಗಳು (೨)

                                                             ಆಕಳು ಬೇನೆ ಬಿದ್ದಾಗ!

    ತಿಮ್ಮನ ಹಸುವಿಗೊಮ್ಮೆ ಒಂದು ರೀತಿಯ ಖಾಯಿಲೆ ಬಂದಿತ್ತು; ಅದಕ್ಕೇನು ಮಾಡಬೇಕೆಂದು ತಿಳಿಯಲು  ಅವನು ಪಶುವೈದ್ಯರ ಬಳಿಗೆ ಹೋದ.  ತಿಮ್ಮ , "ಸ್ವಾಮಿ ನಮ್ಮ ಆಕಳು ನಿನ್ನೆಯಿಂದ ಹುಲ್ಲು ಮೇಯುತ್ತಿಲ್ಲಾ, ನೀರು ಸಹಾ ಸರಿಯಾಗಿ ಕುಡಿಯುತ್ತಿಲ್ಲಾ" ಎಂದೆಲ್ಲಾ ಮುಂತಾಗಿ ತನ್ನ ಹಸುವಿನ ಬೇನೆಯ ಬಗ್ಗೆ ತಿಳಿಸಿದ. ರೋಗದ ಗುಣ ಲಕ್ಷಣಗಳನ್ನು  ತಿಮ್ಮನಿಂದ  ಕೇಳಿ ತಿಳಿದುಕೊಂಡ ವೈದ್ಯರು ಅವನಿಗೆ ಹೇಳಿದರು, " ನಾನು ನಿನಗೊಂದು ಮಾತ್ರೆಯನ್ನು ಕೊಡುತ್ತೇನೆ, ಅದನ್ನು ಹಸುವಿಗೆ ನುಂಗಿಸಿದರೆ ಅದರ ಕಾಯಿಲೆ ವಾಸಿಯಾಗುತ್ತೆ". ಆದರೆ ಹಸುವಿಗೆ ಮಾತ್ರೆಯನ್ನು ನುಂಗಿಸುವ ಕ್ರಮ ಹೇಗೆಂದು ಪುನಃ ಪಶುವೈದ್ಯರನ್ನು ಕೇಳಿದ ತಿಮ್ಮ. ಆಗ ಅವರೆಂದರು, "ಮಾತ್ರೆಯನ್ನು *ಗೊಟ್ಟದಲ್ಲಿಟ್ಟು, ಗೊಟ್ಟವನ್ನು ಹಸುವಿನ ಬಾಯಿಯಲ್ಲಿ ಇಡು, ನಂತರ ನಿನ್ನ ಬಾಯಿಂದ ಜೋರಾಗಿ ಗಾಳಿಯನ್ನು ಊದು, ಆಗ ಮಾತ್ರೆ ಸೀದಾ ಹಸುವಿನ ಹೊಟ್ಟೆ ಸೇರುತ್ತದೆ". ಸರೆ ಎಂದು  ತಲೆಯಾಡಿಸಿದ ತಿಮ್ಮ. ಸ್ವಲ್ಪ ಹೊತ್ತಿನಲ್ಲೇ ಗಾಭರಿಯಾಗಿ ತಿರುಗಿ ಓಡೋಡಿ ಬಂದ ತಿಮ್ಮನನ್ನು ಕಂಡು ಕಾರಣವೇನೆಂದು ಪಶುವೈದ್ಯರು ಕೇಳಿದರು. ತಿಮ್ಮನೆಂದ, "ಸ್ವಾಮಿ, ನನಗಿಂತಲೂ ಹಸುವೇ ಜೋರಾಗಿ ಗಾಳಿ ಊದಿಬಿಟ್ಟಿತು!!!!!"

(*ಗೊಟ್ಟವೆಂದರೆ ನಮ್ಮ ಬಳ್ಳಾರಿಯ ಆಡು ಭಾಷೆಯಲ್ಲಿ ಬೊಂಬಿನ ಕೊಳವೆ)

                                                    ದೇಶದ ಸಮಸ್ಯೆಗೆ ಪರಿಹಾರ....?!!

ಗುರುಗಳು ತಮ್ಮ ಶಿಷ್ಯ ತಿಮ್ಮನನ್ನು ಪ್ರಶ್ನಿಸಿದರು ನಮ್ಮ ದೇಶದ ಸಮಸ್ಯೆಗಳಿಗೆಲ್ಲಾ ಏನು ಕಾರಣ? "ನಮ್ಮ ರಾಜಕೀಯ ನೇತಾರರು", ಉತ್ತರಿಸಿದ ತಿಮ್ಮ. "ಸರಿ, ಈ ಸಮಸ್ಯೆಗೆ ಪರಿಹಾರವೇನಾದರು ಇದೆಯಾ?" ಕೇಳಿದರು ಗುರುಗಳು. "ಬಹಳ ಸರಳ ಉಪಾಯವಿದೆ ಗುರುಗಳೆ" ಹೇಳಿದ ತಿಮ್ಮ. ಆದೇನೆಂದು ಬೊಗಳು ಎಂದರು ಗುರುಗಳು."ಏನಿಲ್ಲಾ ಗುರುಗಳೆ, ನಮ್ಮ ನೇತಾರರೆನ್ನೆಲ್ಲಾ ಮೂರು ಬಾರಿ ನೀರಿನಲ್ಲಿ ಅದ್ದಿ ಎರಡು ಸಾರಿ ಮಾತ್ರ ಹೊರಗೆ ತೆಗೆಯಬೇಕು" ಥಟ್ಟನೆ ಹೇಳಿದ ತಿಂಮ್ಮ ಬ್ರಹ್ಮ.
(ಈ ಜೋಕನ್ನು ರವಿಯವರು ಬರೆದ "ಒಂದು ಭಯಾನಕ ಜೋಕ್" ಗೆ ಪ್ರತಿಕ್ರಿಯೆಯಾಗಿ ಬರೆದಿದ್ದೆ. ಆದರೆ ಇದು ಬೀchiಯವರ ಜೋಕಾಗಿದ್ದರಿಂದ ಇದನ್ನು ಪುನಃ ಕೊಡುತ್ತಿದ್ದೇನೆ)


 

Comments