ತ್ಯಾಂಪನ ಇಲಿಯ ಪ್ರಹಸನ 2
ತ್ಯಾಂಪನ ಇಲಿಯ ಪ್ರಹಸನ ( ಮುಂದುವರಿದ ಭಾಗ) 2
ಏನು ಜ್ಯೂಸ್ ಬಗ್ಗೇನಾ ನಿನ್ನ ಫ್ರೆಂಡ್ ಬಗ್ಗೇನಾ?
"ಎರಡೂ ಅಲ್ಲ ನೀನೇನೋ ನನಗಾಗಿ ತಂದೆ ಎಂದೆಯಲ್ಲಾ ಅದರ ಬಗ್ಗೆ"
ಏನದು..??
"ನೀನು ಹೇಳಬೇಕು ಅದನ್ನ" ಅಂದೆ ನಾನು ಮತ್ತೆ ಮರೆವು ಬಂತಾ ಹೇಗೆ ಇವನಿಗೆ.
ಮೊದಲು ಬಂದಾಗ ನಾನೂ ಸೀನನೂ ಕಡಿಮೆ ಅಧ್ವಾನ ಪಡಲಿಲ್ಲ ಅವನನ್ನು ಸರಿ ಮಾಡಲು , ನಿಮ್ಹಾನ್ಸ್ ಗೆ ಬೇರೆ ಹೋಗಿದ್ದೆವು.
ಇಲ್ಲ ಹಾಗೇನೂ ಆಗಿರಲಿಕ್ಕಿಲ್ಲ. ಪುನಃ ಯಾಕೆ ... ಕೋಲು ಕೊಟ್ಟು...ತಿನ್ನಬೇಕು..??
ಅಷ್ಟರಲ್ಲಿ ಕಿಸೆಯಿಂದ ಕಪ್ಪಗಿನದ್ದೇನೋ ಹೊರತೆಗೆದ
ಅದೊಂದು ಕಪ್ಪನೆಯ ವಯರ್.
ಈ ವಯರಲ್ಲಿ...??
ಅಲ್ಲಪ್ಪಾ ಇದು ಇಲಿ" ಎಂದ
ಇಲಿಯಾ...??
ಹೌದು ಇಲಿ
ಇದು ಹೇಗೋ ಇಲ್ಲ..... ಇಲ್ಲಿ ಬೆಕ್ಕಿಲ್ಲವಾ..
ಅಷ್ಟರಲ್ಲಿ ಪೂರ್ತಿ ಹೊರತೆಗೆದ
ಅದೊಂದು ಮೌಸ್
ಇದರಲ್ಲಿ...??
ಹೌದು ಇದೆ
ಅಂದರೆ ಹೇಗೆ..?
ನಮ್ಮ ಅಫೀಸಿನ ಕಂಪ್ಯೂಟರಿನಿಂದ ಫೇಸ್ ಬುಕ್ ಸೆಲೆಕ್ಟ್ ಮಾಡಿ ಕಾಪಿ ಮಾಡಿಕೊಂಡು ತಂದಿದ್ದೇನೆ. ಎಲ್ಲಾ ಇದರಲ್ಲಿ ಇದೆ ಬಿಡು. ಅದನ್ನ ನಿನ್ನ ಕಂಪ್ಯೂಟರಿನಲ್ಲಿ ಅಂಟಿಸಿಕೋ. ಎಲ್ಲಾ ಬರತ್ತೆ. ಯಾರಾದರೂ ಬಂದರೆ ಈ ಇಲಿಯನ್ನು ತೆಗೆದು ಪಕ್ಕಕ್ಕೆ ಇಡು ಯಾರಿಗೂ ಗೊತ್ತಾಗಲ್ಲ.
ನಗಬೇಕೋ ಅಳಬೇಕೋ ಗೊತ್ತಾಗ್ಲಿಲ್ಲ
ಇವನನ್ನ ಹರಿಪ್ರಸಾದ ನಾಡಿಗರ ಹತ್ತಿರ ಹಳುಹಿಸಿದರೆ..??
ಬೇದವೇ ಬೇಡ ಪಾಪ ಮೊದಲೇ ಅವರಿಗೆ ಜಾಸ್ತೀ ಬ್ಯೂಸಿ, ಮತ್ತೆ ಇವ ಏನಾದರೂ ಅಲ್ಲಿಗೆ ಹೋದರೆ ಸಂಪದದ ಲಗಾಡಿ ತೆಗೆದಾನು.
ಮತ್ತೆ ಪ್ರಸನ್ನ ಶಂಕರ ಪುರರ ಹತ್ತರಾನೋ ಶ್ರೀಧರ ಬಂಡ್ರಿಯವ ಹತ್ರಾನೋ ಕಳುಹಿಸೋಣವೇ ಅಂದ್ಕೊಂಡೆ.
ಆದರೆ ನನ್ನ ತಲೆ ತಿಂದ ಹಾಗೆ ಅವರ ತಲೆ ನೂ ತಿಂದ್ರೆ ಕಷ್ಟ ಅನ್ನಿಸಿತು.
ಸರಿ ಅಲ್ಲೇ ಇಡು ಎಂದೆ.
ಇವನ್ನೇನ್ರೀ ಮಾಡೋಣ..???
ತ್ಯಾಂಪನ ಇಲಿಯ ಪ್ರಹಸನ 1
http://sampada.net/%E0%B2%A4%E0%B3%8D%E0%B2%AF%E0%B2%BE%E0%B2%82%E0%B2%AA%E0%B2%A8-%E0%B2%87%E0%B2%B2%E0%B2%BF%E0%B2%AF-%E0%B2%AA%E0%B3%8D%E0%B2%B0%E0%B2%B9%E0%B2%B8%E0%B2%A8
Comments
ಉ: ತ್ಯಾಂಪನ ಇಲಿಯ ಪ್ರಹಸನ 2
In reply to ಉ: ತ್ಯಾಂಪನ ಇಲಿಯ ಪ್ರಹಸನ 2 by venkatb83
ಉ: ತ್ಯಾಂಪನ ಇಲಿಯ ಪ್ರಹಸನ 2