ಸಮಸ್ಯೆ ಪರಿಹಾರ
ಸಮಸ್ಯೆ ಪರಿಹಾರ
ಇದಾದದ್ದು ಅಮೇರಿಕಾದ ವ್ಯೋಮ
ವಿಜ್ಞಾನಿಗಳಿಗೆ ಹಿಂದೊಮ್ಮೆ,
ರಷ್ಯಾ ,ಅಮೇರಿಕಾ ಮಧ್ಯೆ
ವ್ಯೋಮ ಯಾನದ ಪೈಪೋಟಿಯಿದ್ದ ಕಾಲ
ಸಮಸ್ಯೆಯಾದದ್ದು ಬರೆಯಲು
ಖಗೋಲ ಯಾತ್ರಿಗಳಿಗೆ ನಿರ್ವಾತದ,
ಗುರುತ್ವಾಕರ್ಷಣೆಯಿಲ್ಲದ ಸ್ಥಳದಲ್ಲಿ
ಶಾಯಿ ಕೆಳಗಿಳಿದರೆ ತಾನೇ
ಮೂಡುವುದು ಅಕ್ಷರ ಲೆಕ್ಕಣಿಕೆಯಿಂದ
ಅನೇಕಾನೇಕ ಸಮಸ್ಯೆಗಳು, ವಿಚಾರಗಳು
ಹೀಗೆ ಸಂಶೋಧನೆಯೇ ಮೊದಲಾಯ್ತು
ಒತ್ತಿದ ಕೂಡಲೇ ಶಾಯಿಯನ್ನು ಹೂರ
ದೂಡುವ ಸ್ವಯಂ ಚಾಲಿತ ಲೆಕ್ಕಣಿಕೆಗಳ
ತಯಾರು ಮಾಡಲು ಲೆಕ್ಕಾಚಾರ ಶುರುವಾಯ್ತು
ಇವೆಲ್ಲ ತಯಾರಾಗಲೂ ಸಾಕಷ್ಟು
ಸಮಯವೇ ಹಿಡಿದಿತ್ತು ಪಾಪ
ಇಷ್ಟೆಲ್ಲಾ ಆಗುವಷ್ಟು ಹೊತ್ತಿಗೆ
ಅತ್ತ ರಷ್ಯಾದಲ್ಲಿ ಗಗನ ಯಾತ್ರಿಗಳು
ಮುಗಿಸಿಯೇ ಬಂದಿಳಿದಿದ್ದರು ತಮ್ಮ ಯಾತ್ರೆ
ಧಾವಿಸಿತು ಈ ತಂಡ ಅವರತ್ತ
ವಾತವರಣವೇ ಇಲ್ಲದ
ಗುರುತ್ವವೂ ಇಲ್ಲದ ಅವಕಾಶದಲ್ಲಿ
ಹೇಗೆ ಬರೆದಿರಿ, ಬಳಸಿದಿರಿ
ಯಾವ ಲೇಖನಿ ?
ನಕ್ಕು ಆ ತಂಡ ನುಡಿಯಿತು
ನಿಮ್ಮಷ್ಟೆಲ್ಲಾ ಯೋಚಿಸಿಯೂ ಇರಲಿಲ್ಲ ನಾವು
ಬದಲಿಗೆ ಉಪಯೋಗಿಸಿದೆವು ಪೆನ್ಸಿಲ್ ಗಳನ್ನ
ಸಮಸ್ಯೆಗಳ ನಾವೇ ಹಲಕ್ಕೆಲವೊಮ್ಮೆ
ಮಾಡಿಕೊಳ್ಳುವೆವು ಗುರುತರವಾಗಿ ಅವುಗಳ ಗಾತ್ರ,
ಯೋಚಿಸದೇ ಸರಳವಾಗಿ
ಅವುಗಳ ಪರಿಹಾರದ ಸಲುವಾಗಿ
ಆಗೆಲ್ಲಾ ಬೇಕಾಗಿದ್ದುದು ಯೋಚಿಸೋ ಶಕ್ತಿ
ಪರಿಹಾರ ಕಂಡುಕೊಳ್ಳೋ ಮನಸು ಮಾತ್ರ
Comments
ಉ: ಸಮಸ್ಯೆ ಪರಿಹಾರ
In reply to ಉ: ಸಮಸ್ಯೆ ಪರಿಹಾರ by partha1059
ಉ: ಸಮಸ್ಯೆ ಪರಿಹಾರ
ಉ: ಸಮಸ್ಯೆ ಪರಿಹಾರ
In reply to ಉ: ಸಮಸ್ಯೆ ಪರಿಹಾರ by venkatb83
ಉ: ಸಮಸ್ಯೆ ಪರಿಹಾರ
In reply to ಉ: ಸಮಸ್ಯೆ ಪರಿಹಾರ by Shreekar
ಉ: ಸಮಸ್ಯೆ ಪರಿಹಾರ
In reply to ಉ: ಸಮಸ್ಯೆ ಪರಿಹಾರ by venkatb83
ಉ: ಸಮಸ್ಯೆ ಪರಿಹಾರ
ಉ: ಸಮಸ್ಯೆ ಪರಿಹಾರ
In reply to ಉ: ಸಮಸ್ಯೆ ಪರಿಹಾರ by makara
ಉ: ಸಮಸ್ಯೆ ಪರಿಹಾರ