ಚಳಿಯು ಮರುಕಳಿಸುತ್ತಿದೆ ನಿನ್ನದೇ ನೆನಪು
ಕವನ
ಚಳಿಯು ಮರುಕಳಿಸುತ್ತಿದೆ ನಿನ್ನದೇ ನೆನಪು
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಚಳಿಗಾಲದ ನಡುಕ ನಿನ್ನ ಆಲಿಂಗನದ ಬಿಸಿಯ ನೆನಪನ್ನು ಬೇಡುತ್ತದೆ
ಬಳಿ ಬಂದು ಕೆರಳಿಸು, ಹರಿಸು ಬಿಸಿ, ಬಿಸಿ, ರಕ್ತದ ಪ್ರವಾಹ ಹರಿವಂತೆ
ಮರೆತುಹೊದಂತೆ ಆಗ ಬಾರದು ಬಿಸಿಯುಸಿರು ಎನ್ನುಸಿರಲಿ ಬೆರೆಯಲಿ
ಹೊರತು ಆಗದಿರಲಿ ಸನಿಹದ ಸವಿಯೂಟ; ನಿತ್ಯ ಸಂತರ್ಪಣೆಯಾಗಲಿ
ಎನಗೂ ಚಳಿಯೇನು ಚೆಂದವಲ್ಲ; ನಿನಗೂ ನಡುಗುವ ಬಾಧಕ ಬೇಕೇಕೆ?
ಸನಿಹದ ಮಹಿಮೆಯಿಂದಾಗಲಿ; ಚಳಿಯಿದ್ದರೂ ಕಿಡಿ ಹೊತ್ತಿಸಲಿ ಅಗ್ಗಿಷ್ಟಿಕೆ
Comments
ಉ: ಚಳಿಯು ಮರುಕಳಿಸುತ್ತಿದೆ ನಿನ್ನದೇ ನೆನಪು