ಕೆಕುಲೆಯ ಕನಸು
ಫೆಡ್ರಿಕ್ ಆಗಸ್ಟ್ ಕೆಕುಲೆ (7 ಸಪ್ಟೆಂಬರ್ 1829–13 ಜುಲೈ 1896) :
ಕನಸಿನಲ್ಲೇ ನೆನಸಿದೆ ಎಂಬ ಸತ್ಯವ ಜಗಕೆ ಸಾರಿದವನೀತ
ಜೈವಿಕ ರಾಸಾಯನಿಕ ಮಹತ್ವದ ಅಣುವಿನ್ಯಾಸವ ರಚಿಸುತ
ಬೆನ್ಜೀನ್ ನಂತ ಸಂಯುಕ್ತ ಅಣು ವಿನ್ಯಾಸ ದ ರಚಯಿತ
ಇವನೇ ವಿಜ್ಞಾನಿ ಆಗಸ್ಟ್ ಕೆಕುಲೆ ಎಂಬ ಜರ್ಮನ್ ಸುತ
ಜರ್ಮನ್ ನ ಅದ್ವಿತೀಯ ವಿಜ್ಞಾನಿ ಜೈವಿಕ ರಸಾಯನ ಶಾಸ್ತ್ರದಲ್ಲಿ. ಈತನ ಪಡಿನುಡಿ ಗೊತ್ತೇ...?? "ನಾವು ಕಲಿಯೋಣ ಕನಸು ಕಾಣಲು , ಮಹನೀಯರೇ ಮತ್ತು ಪ್ರಾಯಷಃ ಆಗಲೇ ನಾವು ಅರಿಯುವೆವು ಸತ್ಯವನ್ನು"
ಬೆನ್ಜೀನ್ ನ ಅಣು ವಿನ್ಯಾಸ ರಚಿಸಿದ ಕೀರ್ತಿ ಇವನ ಪಾಲಿಗಿದೆ. ಸಾಮಾನ್ಯವಾಗಿ ನೇರ ವಿನ್ಯಾಸದಲ್ಲಿದ್ದ ಅಣು ವಿನ್ಯಾಸ ಬಂಧ ಈ ಬೆನ್ಜೀನ್ ಗೆ ಅನ್ವಯಿಸುತ್ತಲಿರಲಿಲ್ಲ. ಯಾಕೆಂದರೆ ಬೆನ್ಜೀನ್ ನ ರಾಸಾಯನಿಕ ಸೂತ್ರದಲ್ಲಿ ಆರು ಇಂಗಾಲದ ಮತ್ತು ಆರು ಜಲಜನಕದ ಅಣುಗಳಿದ್ದವು. ಅವುಗಳನ್ನು ಹೇಗೆ ಬರೆಯ ಬಹುದು ಎನ್ನುವುದನ್ನು ಕಂಡು ಹಿಡಿಯುವುದೇ ಈತನ ಮುಖ್ಯ ಉದ್ದೇಶವಾಗಿದ್ದಾಗ ........................................ಅವನಿಗೊಂದು ಕನಸು ಬಿತ್ತು..
ಕೆಕುಲೆಯ ಕನಸು
ಯೋಚಿಸುತ್ತ ಹಣ್ಣಾದ ಕೆಕುಲೆ,
ನೇರವಲ್ಲದ ಆರಾರಣುವಿನ ಇಂಗಾಲ ಜಲಜನಕದ
ಸಂಯುಕ್ತ ವಸ್ತು ಬೆನ್ಜೀನ್ ನ ಬಂಧ ಹುಡುಕುತ್ತ
ಹೊಸ ವಿನ್ಯಾಸದ ಅನ್ವೇಷಣೆಯಲ್ಲಿ
ದಣಿವಲ್ಲೆ ಅನ್ಯ ಮನಸ್ಕನಾಗಿದ್ದ
ಮೈ ಮನ ಬೇಡಿ ವಿಶ್ರಾಂತಿ
ಅಂಗಿಸ್ಟಿಕೆಯತ್ತ ತಿರುಗಿ
ಆರಾಮಾಸನದಲ್ಲೇ ಅಡ್ಡಾಗಿದ್ದ,
ಆಗಲೇ ಅವನೊಂದು ಕನಸು ಕಂಡ
ಕಣ್ಣೆದುರಲ್ಲೇ ನರ್ತಿಸುತ್ತಿದ್ದವು
ಚಿಕ್ಕ ದೊಡ್ಡ ಸಾಲಿನ
ಅಣುಗಳು ಗುಂಪಿನ ಸಂಕಲೆಯಲ್ಲಿ
ಬೆಂಕಿಯ ಜ್ವಾಲೆಯಲ್ಲಿ ಸ್ಪಷ್ಟವಾಗಿ ಗೃಹಿಸಿದ್ದ
ಕೆಕುಲೆ ಆ ಪರಮಾಣುಗಳ ತಮ್ಮದೇ ಆದ
ಗಿರಿಕೀ ಹೊಡೆಯುವ ಚಂಚಲ ಗತಿಯ
ಕೆಲವೊಮ್ಮೆ ನಿಬಿಡವಾಗಿ ದೊಡ್ಡ ಅಣುಗಳು
ತನ್ನಂತಾನೇ ಮಡಿಸಿಕೊಂಡು ಹಾವಿನಂತೆ
ನರ್ತಿಸುತ್ತಿದ್ದವು ಬಂಧದಲ್ಲೆ
ಆಗಲೇ ನೋಡನೋಡುತ್ತಿದ್ದಂತೆ
ಒಂದು ಹಾವು ತನ್ನ ಬಾಲವನ್ನೇ ಕಚ್ಚಿಕೊಂಡು
ತಾನು ಗಿರಕೀ ಹೊಡೆಯುತ್ತಿತ್ತು
ಕಣ್ಣ ಮುಂದೆಯೇ ತೀರಾ ಸ್ಪಷ್ಟವಾಗಿ ಸುತ್ತುತ್ತ .
ಆಗಲೇ ಮಿಂಚು ಮಿಂಚಿತು ಮನದ ಕತ್ತಲೆಗೆ ಕೆಕುಲೆಗೆ
ಹೊಳೆಯಿತು ನಿದ್ದೆಯಿಂದೆದ್ದಾಗ ಬೆಂಜಿನ್ ನ ಅಣು ಆವರ್ತ ಸೂತ್ರ
ನೇರವಲ್ಲವದು ಬೆಂಜೀನ್ ನ ಅಣು ವಿನ್ಯಾಸ ವರ್ತುಲ ಮಾತ್ರ
Comments
ಉ: ಕೆಕುಲೆಯ ಕನಸು
In reply to ಉ: ಕೆಕುಲೆಯ ಕನಸು by makara
ಉ: ಕೆಕುಲೆಯ ಕನಸು
ಉ: ಕೆಕುಲೆಯ ಕನಸು
In reply to ಉ: ಕೆಕುಲೆಯ ಕನಸು by ಗಣೇಶ
ಉ: ಕೆಕುಲೆಯ ಕನಸು
ಉ: ಕೆಕುಲೆಯ ಕನಸು
In reply to ಉ: ಕೆಕುಲೆಯ ಕನಸು by santhosh_87
ಉ: ಕೆಕುಲೆಯ ಕನಸು