ಚಾರಣದ ಸಂಭ್ರಮ

ಚಾರಣದ ಸಂಭ್ರಮ

ಚಾರಣ ಹೋಗೋಣ  ಅಂದರೆ ಈಗ ಯಾರೂ ಬರುತ್ತಿಲ್ಲ. ಯುವಕರಿಗೆ ಬರುವ ಮನಸ್ಸಿದ್ದರೂ ಅವರ ತಂದೆ-ತಾಯಿ ಬಿಡುತ್ತಿಲ್ಲ.  ಯಾರೂ ಬರದಿದ್ದರೇನಂತೆ ನಾನು ಹೋಗುವುದು ಹೋಗೋದೇ ಅಂದು, ಮೊನ್ನೆ ಒಂದು ದಿನ ಬೆಳ್ಳಂಬೆಳಗ್ಗೆ ಯಾವ ತಯಾರಿಯೂ ಇಲ್ಲದೇ ಹೊರಟೆನು. ಮಣ್ಣಿನ ದಾರಿ -



******************


ಕಲ್ಲಿನ ಗುಡ್ಡೆಯ ಸಮೀಪ ಬಂದಾಗ ಅಲ್ಲೊಂದು ದೇವಸ್ಥಾನ ಕಾಣಿಸಿತು- 


*******************


ಎಡಬದಿಯಲ್ಲಿ ಕಡಿದಾದ ಬಂಡೆಗಲ್ಲುಗಳು- 



*************ಅದನ್ನು ಹತ್ತಬೇಕಾಗಿಲ್ಲ.


 ಮೆಟ್ಟಲುಗಳ ದಾರಿ ಪಕ್ಕದಲ್ಲಿಯೇ ಇದೆ-


******************


ದೇವಾಲಯಕ್ಕೆ ಬೀಗ. ಹೊರಗಿನಿಂದಲೇ ನಮಸ್ಕರಿಸಿದೆ.


***********************


ಬಂಡೆಗಲ್ಲಿನ ಮೇಲೆ ಕುಳಿತು ದಣಿವಾರಿಸಿಕೊಂಡೆ- 


****************


ಬಂಡೆಗಲ್ಲಿನಿಂದ ಇಳಿದುಕೊಂಡು ಬರುವಾಗ ಪಕ್ಕದಲ್ಲಿ ಒಂದು ಕೊಳವೂ ಕಾಣಿಸಿತು-



ಕೊನೆಯ ಚಿತ್ರ ನೋಡುವಾಗ ನಿಮಗೆ ಗೊತ್ತಾಗಿರಬಹುದು. ಚಾರಣವೂ ಇಲ್ಲ. ಏನೂ ಇಲ್ಲ- ಬೆಂಗಳೂರಿನಲ್ಲೇ ಸಂಭ್ರಮ ಇಂಜಿನಿಯರಿಂಗ್ ಕಾಲೇಜ್ ಸಮೀಪ ಇರುವ ಒಂದು ಚಿಕ್ಕ ಕಲ್ಲು ಬಂಡೆ. ಅದರಲ್ಲೊಂದು ಪುಟಾಣಿ ದೇವಾಲಯ. ಟಿ.ವಿಯವರ ಕಣ್ಣಿಗೆ ಬಿದ್ದು, ಅವರು ಕೆಲವು ಪವಾಡಗಳನ್ನು ಸೃಷ್ಠಿಸಿದರೆ ಜನಸಾಗರವೇ ಹರಿದು ಬರಬಹುದು :) ಟಿ.ವಿಯವರು ಬರುವುದಾದರೆ ನನ್ನದೊಂದು ಕತೆ ಹೇಳುವೆ- ದೇವಸ್ಥಾನದೊಳಗೆ ಹೋಗಿಲ್ಲ,ದೇವರಲ್ಲೂ ಬೇಡಿಲ್ಲ, ಅದೇ ದಿನ ಮಗಳು ಎಂಬಿಬಿಎಸ್ ಪಾಸ್ ಎಂದು ರಿಸಲ್ಟ್ ಬಂತು.


-ಗಣೇಶ.


 


 


 

Rating
No votes yet

Comments