ಈ ರಾತ್ರಿ ನನ್ನನಣಗಿಸುವಂತಿದೆ...!
ಕವನ
ಈ ರಾತ್ರಿ ನನ್ನನಣಗಿಸುವಂತಿದೆ!
ನನ್ನ ಕನಸುಗಳೆಲ್ಲ
ಮುಖ ಮುಚ್ಚಿ ಅಳುತ್ತಿರುವಾಗ
ದುಃಖ ದುಮ್ಮಾನಗಳೆಲ್ಲ
ಹೊರಬರಲು ತವಕಿಸುವಾಗ
ಕಣ್ಣಂಚಿಂದ ಹನಿಯಾಗಿ
ಪನ್ನೀರ ಮುತ್ತುದುರುವಾಗ
ಘಳಿಗೆಗಳೆಲ್ಲ ಭಾರವಾದ
ಯುಗಗಳಾಗಿ ತೋರುತ್ತಿರುವಾಗ
ನೆನಪೆಲ್ಲ ಬೆನ್ನತ್ತಿ
ಬೇಟೆಯಾಡಿ ಕೊಲ್ಲುತ್ತಿರುವಾಗ
ಉಸಿರಿನ ಕಣಕಣವೂ
ನಿನ್ನನ್ನೇ ಜಪಿಸುತ್ತಿರುವಾಗ
ತನ್ನ ಚಂದ್ರಮನ ಸಂಗದಲಿ
ಬೆಚ್ಚಗಿನ ಬೆಳುದಿಂಗಳ ನಡುವಿನಲಿ
ಪ್ರೇಮನಶೆಯಲ್ಲಿ ಮಿಂದು
ಸುಖನಿದಿರೆಯ ತೆಕ್ಕೆಗೆ ಜಾರುತಿರುವ
ಈ ರಾತ್ರಿ ನನ್ನನಣಗಿಸುವಂತಿದೆ!!
Comments
ಉ: ಈ ರಾತ್ರಿ ನನ್ನನಣಗಿಸುವಂತಿದೆ...!
In reply to ಉ: ಈ ರಾತ್ರಿ ನನ್ನನಣಗಿಸುವಂತಿದೆ...! by Praveen.Kulkar…
ಉ: ಈ ರಾತ್ರಿ ನನ್ನನಣಗಿಸುವಂತಿದೆ...!
In reply to ಉ: ಈ ರಾತ್ರಿ ನನ್ನನಣಗಿಸುವಂತಿದೆ...! by Usha Bhat
ಉ: ಈ ರಾತ್ರಿ ನನ್ನನಣಗಿಸುವಂತಿದೆ...!
ಉ: ಈ ರಾತ್ರಿ ನನ್ನನಣಗಿಸುವಂತಿದೆ...!
In reply to ಉ: ಈ ರಾತ್ರಿ ನನ್ನನಣಗಿಸುವಂತಿದೆ...! by gurudutt_r
ಉ: ಈ ರಾತ್ರಿ ನನ್ನನಣಗಿಸುವಂತಿದೆ...!