ಮನದ ಪ್ರಶ್ನೆ
ಕವನ
ಒಬ್ಬನೇ ಹೊರಟಿಹೆನು
ದೂರದ ಕಡೆಗೆ;
ಕಾಣದೇ ಹೊರಟಿಹೆನು
ಗುರಿಯ ಬಳಿಗೆ;
ಜೊತೆಗಿಲ್ಲ ಯಾರೂ!
ಸಂಗಾತಿ;
ತಂದೆ-ತಾಯಿ;
ಅಣ್ಣ-ತಮ್ಮ;
ಅಕ್ಕ-ತಂಗಿ;
ಬಂಧು-ಬಳಗ;
ಸ್ನೇಹಿತರು......
ಮನದಲ್ಲಿ ಎಲ್ಲರೂ ಇಹರು
ಎಲ್ಲರ ಹಾರೈಕೆಗಳೂ
ನಲ್ಮೆಯ ಹಿತವಚನಗಳೂ
ಎಲ್ಲವೂ ಜೊತೆಗಿರಲು
ಆದದ್ದಾಗಲಿ
ಆಗುವುದೆಲ್ಲಾ ಓಳ್ಳೆಯದೇ ಆಗಲಿದೆ
ಎಂಬ ಭಾವ ಮನದಲ್ಲಿ ಅಲೆ ಎದ್ದಿದೆ;
ಗುರಿಯ ತಲುಪುವೆ ಖಾತರಿಯಿದೆ;
ಬಳಿಕ ಏನು? ಪ್ರಶ್ನೆ ಮನದಲಿ ಕಾಡಿದೆ;
Comments
ಉ: ಮನದ ಪ್ರಶ್ನೆ
In reply to ಉ: ಮನದ ಪ್ರಶ್ನೆ by hvravikiran
ಉ: ಮನದ ಪ್ರಶ್ನೆ
ಉ: ಮನದ ಪ್ರಶ್ನೆ
In reply to ಉ: ಮನದ ಪ್ರಶ್ನೆ by venkatb83
ಉ: ಮನದ ಪ್ರಶ್ನೆ
ಉ: ಮನದ ಪ್ರಶ್ನೆ