ಅಂತರಂಗ

ಅಂತರಂಗ

ಕವನ



ಓ ನನ್ನ ಕನಸೇ
ನನ್ನ ಮೇಲೆ ಮುನಿಸೆ?

ಓ ನನ್ನ ಒಲವೆ
ನನ್ನೊಡನೆಯೂ ಛಲವೇ?

ಮೀಟಿದೆ ಮನವು ಮೌನ ತರಂಗ
ಅರಿಯದಾದೆ ನೀ ನನ್ನಂತರಂಗ !!

ಕಾದಿದೆ ತನುಮನ ನಿನಗಾಗಿ
ಬರಲಾರೆಯಾ ನೀ ನನಗಾಗಿ ?

ಕಾಡುತಿದೆ ಕಣ್ಣ ಕುಡಿಯಂಚಿನ ನೋಟ
ಇಬ್ಬನಿಯ ರಾತ್ರಿಯ ಮಧುರ ಮಬ್ಬಿನಾಟ !!

ಕಾಯುತಿಹೆ ಕೇಳಲು ನಿನ್ನ ಸವಿ ಸೊಲ್ಲು
ನೀನೆ ತುಂಬಿರುವೆ ನನ್ನುಸಿರ ಕಣ ಕಣದಲ್ಲೂ ...

Comments