ಸಲಿಂಗ ಸಂಬಂಧಗಳು
ಭಾರತದಲ್ಲಿ ಅಂದಾಜು ೨೫ ಲಕ್ಷ ಸಲಿಂಗ ಸಂಬಂಧದ ಪುರುಷರಿ(gays)ದ್ದಾರೆ; ಅವರಲ್ಲಿ ಶೇಕಡಾ ೭ರಷ್ಟು - ಅಂದರೆ ೧.೭೫ ಲಕ್ಷ ಮಂದಿ - HIV ಸೋಂಕಿತರು ಎಂದು PTI ಸಂಸ್ಥೆ ವರದಿ ಮಾಡಿದೆ. [ನಿನ್ನೆಯ (೧೪ ಮಾರ್ಚ್ ೧೨) ಡೆಕ್ಕನ್ ಹೆರಲ್ಡ್] ಇದು ಮಾನವನ ಅಜ್ಞಾನ ಮತ್ತು ಮೂರ್ಖತನದ ಸಮ್ಮಿಲನಕ್ಕೆ ಒಂದು ಸಾಕ್ಷಿ!
ನಿಸರ್ಗದ ನಿಯಮಗಳಲ್ಲಿ ಗಂಡು-ಹೆಣ್ಣಿನ ಸಮ್ಮಿಲನದಿಂದ ಉಂಟಾಗುವ ಜೈವಿಕ ಪುನರುತ್ಪತ್ತಿ ಒಂದಾಗಿದೆ. ಕೆಲವೇ ಕೆಲವು ಜೀವಿಗಳನ್ನು ಹೊರತುಪಡಿಸಿ, ಈ ನಿಯಮ ಸಾಮಾನ್ಯವಾಗಿದೆ. ಅವುಗಳೆಲ್ಲಾ ಇದು ಒಂದು ಸ್ವಾಭಾವಿಕ ಪ್ರಕ್ರಿಯೆಯಾಗಿದೆ. ಆದರೆ ಮನುಷ್ಯನಲ್ಲಿ ಮಾತ್ರ ಈ ಸಾಮಾನ್ಯ ಪ್ರಕ್ರಿಯೆಯನ್ನು ಇತ್ತೀಚೆಗೆ ಒಂದು ಮನೋರಂಜನಾ ಕ್ರೀಡೆಯಾಗಿ ರೂಪುಗೊಂಡಿದೆ. ಕಾಮಕ್ರೀಡೆಯೆಂದು ಇದನ್ನು ಪರಿಗಣಿಸುತ್ತಾರೆ. ಇತ್ತೀಚೆಗೆ ಎಂದರೆ ಒಂದೆರಡು ದಶಕ ಅಥವಾ ಶತಮಾನಗಳಿಂದಲ್ಲ; ಬಹುಶಃ, ಭಾರತದಲ್ಲಿ ವಾತ್ಸಾಯನನ ಕಾಲದ ಆಸುಪಾಸಿನಲ್ಲಿಂದ ಎನ್ನಬಹುದೆನೋ. ಅವನ ಸೂತ್ರಗಳನ್ನು ಸರಿಯಾದ ಕ್ರಮದಲ್ಲಿ ಬಳಸಿದವರು ಇತರ ಶಾಸ್ತ್ರಗಳನ್ನು ತಿಳಿದಿರುವವರಂತೆ ಕೆಲವೇ ಕೆಲವರಿರಬಹುದು. ಅದರಿಂದ ಸುಖಾನಂದಗಳನ್ನು ಪಡೆದಿರುವುದು ತೀರಾ ವೈಯಕ್ತಿಕವಾಗಿರಬಹುದು.
ಸಮಾಜದ ಆಯಕಟ್ಟಿನಲ್ಲಿ ಈ ಸಂತಾನ ಪುನರುತ್ಪತ್ತಿಯ ಕಾರ್ಯವನ್ನು ಅಂಕೆಯಲ್ಲಿಡಲು ಮನುಧರ್ಮದಲ್ಲಿ ಕೆಲವು ನಿಯಮಗಳನ್ನು ತರಲಾಯಿತು. ಮದುವೆ ಎಂಬೊಂದು ವ್ಯವಸ್ಥೆಯಡಿಯಲ್ಲಿ ಪತಿ-ಪತ್ನಿಯೆಂಬ ಸಂಬಂಧವನ್ನು ಕಲ್ಪಿಸಲಾಯಿತು. ಮನುವಿನಕಾಲದಿಂದಲೇ ಬಂದ ಈ ವ್ಯವಸ್ಥೆ ಶತಶತಮಾನಗಳ ಬಳಿಕವೂ ಇನ್ನೂ ಬೆಳೆಯುತ್ತಿರುವ ಮತ್ತು ರೂಪಾಂತರಗೊಳ್ಳುತ್ತಿರುವ ಆಯಾಮಗಳ ಸಮಾಜದಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆಯೆಂದು ಹೇಳಲಾಗದು. ಇದು ನಮ್ಮ ದೇಶದಲ್ಲಿ ಮಾತ್ರವಲ್ಲ; ಇಡೀ ಮಾನವ ಸಮಾಜದಲ್ಲಿರುವ ಸಮಸ್ಯೆ. ಇದನ್ನು ಬಗೆಹರಿಸಲು ಸತತ ಪ್ರಯತ್ನಗಳು ನಡೆಯುತ್ತಲೇ ಇವೆ. ಮದುವೆಯ ಪರ್ಯಾಯ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ, ಮದುವೆಯ ಕಾಂಟ್ರಾಕ್ಟ್, ಲಿವಿಂಗ್ ಟುಗೆದರ್, ಇತ್ಯಾದಿಗಳು ಹುಟ್ಟಿಕೊಂಡರೂ ಇವು ಯಾವುವೂ ನಿರ್ಣಾಯಕವಾದ ಅತ್ಯುತ್ತಮ ಬದಲಿ ಏರ್ಪಾಡಾಗಲಿಲ್ಲ.
ಇವೆಲ್ಲಾ ಎಲ್ಲರೂ ಅರಿತಿರುವ ವಿಷಯವೇ ಆಗಿದೆ.
ಮದುವೆಯಾದ ಮೇಲೆ ಗಂಡ-ಹೆಂಡಿರು ಪರಸ್ಪರ ಪ್ರೀತಿಸುವುದು ಒಂದು ಸಾಮಾಜಿಕ ಅವಶ್ಯಕತೆ. ಪ್ರೀತಿಸಿ ಮದುವೆಯಾಗುವುದು ವೈಯಕ್ತಿಕ ಅವಶ್ಯಕತೆ. ಪ್ರೀತಿಯೆನ್ನುವುದು ಗಂಡು-ಹೆಣ್ಣುಗಳಲ್ಲಿರುವಂತೆ ಗಂಡು-ಗಂಡುಗಳಲ್ಲೂ, ಹೆಣ್ಣು-ಹೆಣ್ಣುಗಳಲ್ಲೂ ಇರಬಹುದು. ಪ್ರೀತಿಯು ಆಕರ್ಷಣೆಯಿಂದ ಹುಟ್ಟುತ್ತದೆ; ಆಕರ್ಷಣೆ ಜೈವಿಕ ಪುನರುತ್ಪತ್ತಿಗಾಗಿ ಉಂಟಾಗುತ್ತದೆ. ಜೈವಿಕ ಪುನರುತ್ಪತ್ತಿ ನಿಸರ್ಗದ ನಿಯಮವಾಗಿದೆ.
ಈ ಕಾರಣದಿಂದ ಗಂಡು-ಹೆಣ್ಣುಗಳಲ್ಲಿರುವ ಆಕರ್ಷಣೆ, ಲೈಂಗಿಕ ಕ್ರಿಯೆಯಲ್ಲಿ ಅದು ನೈಸರ್ಗಿಕ. ಆದರೆ ಗಂಡು-ಗಂಡುಗಳಲ್ಲಿ ಮತ್ತು ಹೆಣ್ಣು-ಹೆಣ್ಣುಗಳಲ್ಲಿ ಪ್ರೀತಿಯಿದ್ದು, ಅದು ಲೈಂಗಿಕ ಕ್ರಿಯೆಯಾಗಿ ಮಾರ್ಪಟ್ಟರೆ ಅದು ಅನೈಸರ್ಗಿಕ. ಹಾಗಾಗಿ, ಮದುವೆಯ ಪರ್ಯಾಯ ವ್ಯವಸ್ಥೆಯೆಂದು ಈ ಸಲಿಂಗ ಸಂಬಂಧವನ್ನು ಪರಿಗಣಿಸುವುದು ಅಸ್ವಸ್ಥಕರ ಹಾಗೂ ಅವೈಜ್ಞಾನಿಕ. ನಮ್ಮ ದೇಶದ ಸಂಸ್ಕೃತಿಯಲ್ಲಂತೂ ಇದು ಇಲ್ಲವೇ ಇಲ್ಲ. ವಿದೇಶಗಳಿಂದ ಬಂದ ಈ ಅನಾಚಾರವನ್ನು ನಾವು ಅನಾಮತ್ತಾಗಿ ಅಂಗೀಕರಿಸಿಕೊಂಡರೆ, ಸಾವಿರಾರು ವರ್ಷಗಳಿಂದ ರೂಪುಗೊಳ್ಳುತ್ತಾ ಬಂದಿರುವ ನಮ್ಮ ಧರ್ಮ (ಅಂದರೆ ಜೀವನಕ್ರಮ ಎನ್ನುವ ಅರ್ಥದಲ್ಲಿ) ಹಾಗೂ ಸಂಸ್ಕೃತಿಯನ್ನು ನಾವೇ ಮೂಢರಂತೆ ತುಚ್ಛೀಕರಿಸಿ, ತಿರಸ್ಕರಿಸಿದಂತಾಗುತ್ತದೆ.
ಸರಕಾರ ಅಥವಾ ನ್ಯಾಯಾಲಯಗಳು ಸಲಿಂಗ ಸಂಬಂಧಗಳು ನ್ಯಾಯಬದ್ಧವೆಂದು ಸಾಧಿಸಿದ ಮಾತ್ರಕ್ಕೆ ಇಲ್ಲವೇ ಸಂಘ-ಸಂಸ್ಥೆಗಳು ಎತ್ತರದ ದನಿಯಲ್ಲಿ ಘೋಷಣೆಗಳನ್ನು ಕೂಗಿ, ಪ್ರಪಂಚದ ಉದ್ದಗಲಕ್ಕೂ ಮೆರವಣಿಗೆಗಳನ್ನು ಮಾಡಿದ ಮಾತ್ರಕ್ಕೆ ಅಸ್ವಾಭಾವಿಕವಾದುದು ನೈಸರ್ಗಿಕವಾಗಲಾರದು. ಈ ನಿಟ್ಟಿನಲ್ಲಿ ನಾವು ನಮ್ಮ ಮುಂದಿನ ಪೀಳಿಗೆಗೆ ಸರಿಯಾದ ರೀತಿಯಲ್ಲಿ ತರ್ಕಬದ್ಧವಾಗಿ ತಿಳಿಹೇಳುವುದು ಅತ್ಯವಶ್ಯವಾಗಿದೆ.
Comments
ಉ: ಸಲಿಂಗ ಸಂಬಂಧಗಳು
ಉ: ಸಲಿಂಗ ಸಂಬಂಧಗಳು
ಉ: ಸಲಿಂಗ ಸಂಬಂಧಗಳು
ಉ: ಸಲಿಂಗ ಸಂಬಂಧಗಳು
ಉ: ಸಲಿಂಗ ಸಂಬಂಧಗಳು
ಉ: ಸಲಿಂಗ ಸಂಬಂಧಗಳು
ಉ: ಸಲಿಂಗ ಸಂಬಂಧಗಳು