ಸರ.....ಇಲ್ಲದಿರೆ..ಬೇಸರ

ಸರ.....ಇಲ್ಲದಿರೆ..ಬೇಸರ

    ಚಿನ್ನದ ಸರ..!

    ತರಲಿಲ್ಲವೆಂದು  ನನ್ನಾಕೆಗೆ  ಬೇಸರ.

 

     ಆ  ರಾತ್ರಿ..ಅವಳು

     ಅ..............ಲ್ಲಿ !

    ಅವಳೊಳಗಡಗಿರುವ  ಅಹಂ

    ನನ್ನಾಚೆಗೆ ನೂಕಿತು

 

    ನನ್ನ  ಅಹಮ್ಮುಗಳ  ಕಿತ್ತು

    ಅವಳಲ್ಲಿ ಅಡಗಬೇಕೆಂದು ಕೊಂಡಿದ್ದೆ

     ಆದರೆ,

    ಅದಕಾಗಿ ನನಗೆ  ವಾರವಿಡಿ ಹಾಸಿಗೆ  ಪಥ್ಯ !

    ಕಾಲ ನಡುವೆ  ತಲೆದಿಂಬು

 

     ನನಗೀಗ 

     ಸಂಬಳದ  ಮೊದಲ  ದಿನ.

     ಸರವ  ತಂದಿತ್ತಾಗ 

      ಅವಳಿಗೆ,

     ತಿಂಗಳದ  ಕೊನೆಯ ದಿನ..........!

     ನನ್ನಾಕೆಗೆ  ಈಗ   ಮೂರು  ದಿನ  ಪಥ್ಯ

 

Rating
No votes yet

Comments