ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ
ಬೆಂಗಳೂರಿಗರಷ್ಟು ಅದೃಷ್ಟವಂತರು,ಪುಣ್ಯವಂತರು ಯಾರೂ ಇಲ್ಲ. ಎಡಕ್ಕೆ ತಿರುಗಿದರೆ ಕಬ್ಬನ್ ಪಾರ್ಕ್, ಬಲಕ್ಕೆ ಹೋದರೆ ಲಾಲ್ ಭಾಗ್, ಒಂದೊಂದು ಏರಿಯಾದಲ್ಲಿ ಕನಿಷ್ಟ ಒಂದಾದರೂ ಪಾರ್ಕ್..
ಹಳೇ ಹೊಸ ದೇವಸ್ಥಾನಗಳು ಊರು ತುಂಬಾ ಧಂಡಿಯಾಗಿವೆ.ಮಾಲ್ಗಳಂತಹ ರಸ್ತೆಗಳು..ಪಟ್ಟಣಗಳಂತಹ ಮಾಲ್ಗಳು..ಬೆಂಗಳೂರಿನ ಸುತ್ತಾ ಯಾವ ದಿಕ್ಕಿಗೇ ಹೋಗಿ, ಸ್ವಲ್ಪವೇ ಸಮಯದಲ್ಲಿ ಒಂದು ಪಿಕ್ನಿಕ್ ಸ್ಪಾಟ್ ಸಿಗುವುದು. ನಂದಿಬೆಟ್ಟ, ಬನ್ನೇರು ಘಟ್ಟ, ದೊಡ್ಡ ಆಲದ ಮರ, ತೊನ್ನೂರು ಕೆರೆ, ಮೇಕೆದಾಟು...ಒಂದೇ ಒಂದು ಕೊರತೆ.................
ಸಮುದ್ರ ಮತ್ತು ಬೀಚ್ ಇಲ್ಲ.ನಾನು ಪ್ರಧಾನಿ ಆದಾಗ, ರಾಮ ಸೇತುವನ್ನು ಹಾಗೇ ಬಿಟ್ಟು, ಮಂಗಳೂರು-ಬೆಂಗಳೂರು-ಚೆನ್ನೈ ಉದ್ದಕ್ಕೂ ಚ್ಯಾನಲ್ ಮಾಡಿ, ಅರಬ್ಬೀಸಮುದ್ರ ಹಾಗೂ ಬಂಗಾಳ ಕೊಲ್ಲಿ ಸೇರಿಸಿ, ಬೆಂಗಳೂರಿಗರಿಗೆ ಬೀಚ್ ಸಿಗುವಂತೆ ಮಾಡುವೆ. ಅಲ್ಲಿಗೆ ಬೆಂಗಳೂರಿಗೆ ಯಾವುದೇ ಕೊರತೆ ಇಲ್ಲದಂತಾಗುವುದು.
ಈಗ ಬನ್ನೇರು ಘಟ್ಟಕ್ಕೆ ಹೊರಡೋಣ-
ಬನ್ನೇರು ಘಟ್ಟಕ್ಕೆ ೨೪ ವರ್ಷ ಮೊದಲು ಹೋಗಿದ್ದೆ. ನಂತರ ಆಗಲೇ ಇಲ್ಲ. ೩ ವಾರ ಮೊದಲು ಒಂದು ರವಿವಾರ ಮೂಡ್ ಬಂದು, ಒಬ್ಬರನ್ನು ಬಿಟ್ಟು ಎಲ್ಲರ ಜತೆ ಬನ್ನೇರು ಘಟ್ಟಕ್ಕೆ ಹೊರಟೆ. ಆ ಒಬ್ಬರು...
ನನ್ನ ಕಾರು. ಬೆಂಗಳೂರಿನ ಉದ್ದಗಲವನ್ನು ನನ್ನ ಜತೆ ಸುತ್ತಾಡಿದ ನನ್ನ ಪ್ರೀತಿಯ ಕಾರು. ಈಗ ಸಿಟಿಯೊಳಗೆ ಕಾರು ತೆಗೆದುಕೊಂಡು ಹೋಗುವುದೆಂದರೆ ಭಯವಾಗುವುದು. ಯಾವ ರಸ್ತೆಯಲ್ಲಿ ಯಾವಾಗ ಟ್ರಾಫಿಕ್ ಬಂದ್ ಆಗುವುದೊ ದೇವರಿಗೇ ಗೊತ್ತು. ಘಂಟೆಗಟ್ಟಲೆ ಟ್ರಾಫಿಕ್ನಲ್ಲಿ ನಿಂತಿರುವವರ ಕಷ್ಟ, ಶಿಕ್ಷೆ ಅನುಭವಿಸಿದವರಿಗೇ ಗೊತ್ತು. ಈ ವಿಷಯವನ್ನು ಕಾರಿನ ಬಳಿ ಹೇಳಿಕೊಂಡದ್ದರಿಂದ, ಕಾರು ಕಣ್ಣೀರು ಒರೆಸಿಕೊಂಡು ಟಾಟಾ ಮಾಡಿತು.
ಮೆಜೆಸ್ಟಿಕ್ನಿಂದ "ವಜ್ರ"ಬಸ್ (ಬೇರೆ ಬಸ್ಗಳೂ ಇವೆ) ನೇರ ಪಾರ್ಕ್ ಗೇಟಿಗೇ ತಂದು ಮುಟ್ಟಿಸುವುದು. ಎ.ಸಿ ಬಸ್ಸಲ್ಲಿ (೫೦ ರೂ ಒಬ್ಬರಿಗೆ) ಆರಾಮ ಪ್ರಯಾಣವಾದರೆ, ಪಾರ್ಕ್ ಒಳಗೆ ಸಫಾರಿಗೆ (೨೧೦ರೂ ಒಬ್ಬರಿಗೆ) ಡಬ್ಬಾ ವ್ಯಾನ್ ಇದೆ. (ಮನೆಯಲ್ಲಿರುವ ಟಿ.ವಿ ೧೫ ದಿನ ಧೂಳು ತೆಗೆಯದೇ ಹಾಗೇ ಬಿಟ್ಟು, ನೆಟ್ಲಾನ್ ಹಾಕಿದ ಕಿಟಕಿ ಮೂಲಕ, ಡಿಸ್ಕವರಿ ಚಾನಲ್ನಲ್ಲಿ ಹುಲಿ, ಸಿಂಹ ನೋಡಿದರೆ ಹೇಗೆ ಕಾಣುವುದೋ ಹಾಗೆ ಈ ವ್ಯಾನ್ನಿಂದ ಕಾಣಿಸುವುದು.)
ನಮ್ಮ ವ್ಯಾನ್ ಹೊರಟಿದ್ದ ಮುಹೂರ್ತ ಸರಿಯಾಗಿತ್ತು ಕಾಣಿಸುತ್ತದೆ- ರಸ್ತೆ ಮಧ್ಯದಲ್ಲೇ ಕರಡಿಗಳೆರಡು ಫೈಟು ಮಾಡುತ್ತಿದ್ದುದು ಮುಂದಿನ ಸೀಟಿನಲ್ಲಿ ಕುಳಿತವರಿಗೆ ನೋಡಲು ಸಿಕ್ಕಿತು. ಮೀಟರ್ ಉದ್ದದ ಕ್ಯಾಮರಾಗಳ ನಡುವೆ ನನ್ನ ಮೊಬೈಲ್ ಕ್ಯಾಮರಾ ನುಗ್ಗಿಸಿ ಫೋಟೋ ತೆಗೆಯಲು ಪ್ರಯತ್ನಿಸಿದೆ. ಆಗಲಿಲ್ಲ. :( ಗೆದ್ದ ಕರಡಿ ರಸ್ತೆ ಪಕ್ಕಕೆ ಬಂದು "ಪಂಜರ"ದಲ್ಲಿದ್ದ ನಮ್ಮನ್ನು ಕುತೂಹಲದಿಂದ ನೋಡುತ್ತಿರುವ ಫೋಟೋ ಮಾತ್ರ ನನಗೆ ಕ್ಲಿಕ್ಕಿಸಲು ಆಯಿತು-
ತಾಕತ್ತಿದ್ದರೆ ಫೈಟಿಗೆ ಬನ್ನಿ ಎಂದು ಕರಡಿ ಸವಾಲು ಹಾಕುತ್ತಿದೆ..ನಾನು ಹೋಗಿ ಸೋಲಿಸಿ ಬರುವೆ ಎಂದಾಗ "ಗುರ್...."ಎಂಬ ಶಬ್ದ ಕೇಳ್ಸಿತು. ಸುಮ್ಮನಾದೆ.)
*****************
ಹಳ್ಳದಲ್ಲಿ ಹೊರಳಾಡುತ್ತಿದ್ದ ಹುಲಿ ಬಗ್ಗೆ ಚಿಂತೆಯಾಯಿತು. ಈಗಿನ್ನೂ ಬೇಸಗೆ ಆರಂಭ. ಎಪ್ರಿಲ್-ಮೇ ತಿಂಗಳಲ್ಲಿ ಬೆಂಗಳೂರಿಗರಿಗೇ ನೀರು ಸಿಗುವುದು ಕಷ್ಟ. ಈ ಪ್ರಾಣಿಗಳಿಗೆ ನೀರಿಗೆ ಏನು ವ್ಯವಸ್ಥೆ ಮಾಡುವರೋ? ಹೆಚ್ಚಿನ ಮರಗಿಡಗಳೆಲ್ಲಾ ಆಗಲೇ ಒಣಗಿವೆ.
*****************
ಉದ್ಯಾನವನ ತಂಪಾಗಿರಬಹುದೆಂದು ತಿಳಿದಿದ್ದೆ. ಸುಡುಬಿಸಿಲು ಸಹಿಸಲಾಗಿರಲಿಲ್ಲ. ಅಲ್ಲೇ ಒಂದು hat ಖರೀದಿಸಿ ಹಾಕಿಕೊಂಡೆ. ದೂರದಲ್ಲಿ ಕಾಣಿಸುತ್ತಿದ್ದ ಪ್ರಾಣಿಗಳಿಗಿಂತ, "ಟೋಪಿ ಧರಿಸಿದ ಕೌಬಾಯ್ಗೆ" ವಿರುದ್ಧವಾಗಿ ಕಾಣಿಸುತ್ತಿದ್ದ ನನ್ನನ್ನು ನೋಡಿ, ಮಕ್ಕಳೆಲ್ಲಾ ಖುಷಿಪಡುತ್ತಿದ್ದರು.
*****************
ಕಳೆದ ಸಲ ಇಲ್ಲಿಗೆ ಬಂದಾಗ ಊಟ, ತಿಂಡಿ, ನೀರು ಎಲ್ಲಾ ಮನೆಯಿಂದ ಬರುವಾಗಲೇ ತಂದಿದ್ದೆವು. ಈಸಲ ಕೈಬೀಸಿ ಬಂದಿದ್ದೆ. ನಮ್ಮ ಮಕ್ಕಳು ಬಯಸುವ ಹಾಳು ಮೂಳು ತಿಂಡಿತಿನಿಸುಗಳೆಲ್ಲಾ ಇಲ್ಲಿ ಲಭ್ಯವಿದ್ದವು. ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಮಕ್ಕಳಿಗೆ ಜೋರು ಮಾಡುತ್ತಾ ನಾನೂ ತಿಂದೆನು.
ಇನ್ನೂ ಕೆಲ ಚಿತ್ರಗಳು :
ಬೆಂಗಳೂರಲ್ಲಿ ಆಮೆಗತಿಯಲ್ಲಿ ಸಾಗುತ್ತಿರುವ "ಮೆಟ್ರೋ"ದ ಸ್ಥಿತಿಗತಿಯ ಬಗ್ಗೆ ಆಮೆಗಳು "ಸನ್-ಲೈಟ್" ಮೀಟಿಂಗ್ನಲ್ಲಿ ಚರ್ಚಿಸುತ್ತಿದ್ದವು-
***********
ಕ್ವಾಕ್ ವಾಕ್ ಗೆ ತಯಾರಿ ನಡೆಸುತ್ತಿರುವ ಸುಂದರಿಯರು-
************
ಅವರಲ್ಲಿ ವಿಶ್ವ ಸುಂದರಿಯಾಗಿ ಆಯ್ಕೆಯಾದಾಕೆ-
************
ಈ ಪಂಜರದಿಂದ ನನ್ನನ್ನು ಬಿಡಿಸು ಎಂದು ಬೇಡುತ್ತಿರುವ-
************
ಪುಣ್ಯಕೋಟಿ ಎಲ್ಲೆಂದು ಹುಡುಕುತ್ತಿರುವ ವ್ಯಾಘ್ರ-
**********
-ಗಣೇಶ.
Comments
ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ
In reply to ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ by partha1059
ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ
In reply to ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ by ಗಣೇಶ
ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ
In reply to ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ by Shreekar
ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ
In reply to ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ by ಗಣೇಶ
ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ
In reply to ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ by RAMAMOHANA
ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ
In reply to ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ by RAMAMOHANA
ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ
In reply to ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ by ಗಣೇಶ
ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ
In reply to ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ by venkatb83
ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ
In reply to ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ by partha1059
ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ
ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ
In reply to ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ by kavinagaraj
ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ
ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ
In reply to ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ by sathishnasa
ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ
ಉ: ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ