ನಾವು ಆಯ್ಕೆ ಮಾಡಿ ಕಳಿಸಿರೋದು ರಾಜಕಾರಣಿಗಳನ್ನ ಇಲ್ಲ ನಾಯಿಗಳನ್ನ ?!
ಎಂಥ ವಿಪರ್ಯಾಸ, ಇಂತಹವರನ್ನ ರಾಜ್ಯ ಆಳೋಕೆ ಆಯ್ಕೆ ಮಾಡಿರೋದು ನಾವೇ ಎಂದಾದ ಮೇಲೆ ನಮ್ಮ ಬುದ್ದಿಗೆ ಮಂಕು ಬಡಿದಿತ್ತು ಅಂತಲ್ಲವೆ ?. ಈಗ ನಡೆಯುತ್ತಿರುವ ವಿಧಾನಸೌಧದ ಅಧಿವೇಶನ ಯಾವ ಮತ್ತು ಯಾರ ಪುರುಷಾರ್ಥಕ್ಕೆ ಅಂತ ಪ್ರಶ್ನೆ ಕಾಡ್ತಾಯಿದೆ. ಅಭಿವ್ರುದ್ದಿ ಕಾರ್ಯಗಳ ಬಗ್ಗೆ ಚರ್ಚೆ ಮಾಡುವ ವೇದಿಕೆ ಅದು. ಇಂತಹ ಅಧಿವೇಶನದಲ್ಲಿ, ಒಬ್ಬ ಭಂಡ ತೋಳ ತಟ್ಟಿ ಕರಿತಾನೆ ಅದಕ್ಕೆ ಇನ್ನೋಬ್ಬ ಮೊಂಡ ಸಿಡಿಕ್ತಾನೆ.ಅದಕ್ಕೆ ಭಂಡ ಹೇಳ್ತಾನೆ “ ಅವನೋಬ್ಬ ಗೋಂಡಾ ಎಂದು”. ಛೆ ಇಂತಹ ಕರ್ಮದವರನ್ನ ನಾವು ಆಯ್ಕೆ ಮಾಡಿ ಕಳಿಸಿದೀವಿಯಲ್ಲ “ ಜಯ್ ಹೋ”. ಗಣಿ ಮಣ್ಣಿನ ವಿಚಾರದಲ್ಲಿ ತಲೆಯೆತ್ತಿರುವ ವಿವಾದಗಳಿಗೆ ತೆರೆಯೆಳೆಯಲು ಆಡಳಿತ ಪ್ರಯತ್ನ ಪಟ್ರೆ, ವಿರೋಧ ಪಕ್ಷದ ಅದೇ ಪಟ್ಟು. ಇವರು ಯಾರಿಗೂಸ್ಕರ ಆಡಳಿತ ಮಾಡ್ತಾಯಿದಾರೆ ಅನ್ನೋ ಪ್ರಶ್ನೆ ಶ್ರಿಸಾಮಾನ್ಯನಾದ ನನ್ನಂತಹವನಿಗೆ ಕಾಡದೆ ಇರಲಾರದು. ಟೀಕೆಗಳ ಸುರಿಮಳೆ, ಬೈಗುಳಗಳ ವರ್ಷಧಾರೆ, ಛೀಮಾರಿ, ತೋಳು ತಟ್ಟೋದು, ಇದು ನಮ್ಮನ್ನ ನಡೆಸುವ ದೊರೆಗಳ ಆಡಳಿತ ವೈಖರಿ. ನಾನು ಬಹಳ ನೊಂದು ಬರೆದಿರುವುದು ಇದು. ಭ್ರಷ್ಟಾಚಾರ ತೊಲಗಿಸಿ ಅಂತ “ ಅಣ್ಣಾ ಹಾಜಾರೆ” ೩೧ ವರ್ಷಗಳಿಂದ ತನ್ನ ಮನೆಗೆ ಹೋಗದೆ ಶ್ರಮಿಸ್ತಾಯಿದ್ರೆ, ಈ ರಾಜಕಾರಣಿಗಳು ನಾಯಿಗಳ ರೀತಿಯಲ್ಲಿ ಕಾಚ್ಚಾಡ್ತಾಯಿದಾರೆ. ಬಾಬಾ ರಾಮದೇವ್ , ಕಪ್ಪು ಹಣವನ್ನು ಭಾರತಕ್ಕೆ ತರಲು ಸತ್ಯಾಗ್ರಹ ಮಾಡಿದ್ರೆ, ಇಲ್ಲಿ ಇವರ ಆಸ್ತಿಗಳು ಬೆಟ್ಟದ ರೀತಿ ಬೆಳೆಯುತ್ತಿದೆ. ಅಭಿವೃದ್ದಿ ಹೆಸರಿನಲ್ಲಿ ಸಾರ್ವಜನಿಕರ ಹಣವನ್ನು ಕೋಳ್ಳೆ ಹೋಡೆಯುತ್ತಿದ್ದಾರೆ. ಈ ಕಡೆ ಅಭಿವೃದ್ದಿ ಅಗುತ್ತಿಲ್ಲ ಆ ಕಡೆ ಹಣ ಪೋಲಾಗುವುದು ನಿಲ್ಲುತ್ತಿಲ್ಲ. ಇವರ ಹಗ್ಗ-ಜಗ್ಗಾಟದ ಆಟ ನೋಡಿ ನಗ ಬೇಕೋ, ಅಳ ಬೇಕೋ ಒಂದು ತಿಳಿಯುತ್ತಿಲ್ಲ. ಆದಕೆ ನನ್ನಲ್ಲಿ ಈ ಪ್ರಶ್ನೆ ಉದ್ಬವಿಸಿತು.
Comments
ಉ: ನಾವು ಆಯ್ಕೆ ಮಾಡಿ ಕಳಿಸಿರೋದು ರಾಜಕಾರಣಿಗಳನ್ನ ಇಲ್ಲ ನಾಯಿಗಳನ್ನ ...
ಉ: ನಾವು ಆಯ್ಕೆ ಮಾಡಿ ಕಳಿಸಿರೋದು ರಾಜಕಾರಣಿಗಳನ್ನ ಇಲ್ಲ ನಾಯಿಗಳನ್ನ ...