ಸುಧಾ ವಾರ ಪತ್ರಿಕೆಯ 'ಯುಗಾದಿ ವಿಶೇಷಾಂಕ' -೨೦೧೨ ಓದಿದಿರಾ?.............

ಸುಧಾ ವಾರ ಪತ್ರಿಕೆಯ 'ಯುಗಾದಿ ವಿಶೇಷಾಂಕ' -೨೦೧೨ ಓದಿದಿರಾ?.............

ಚಿತ್ರ

 
ಪ್ರತಿ ತಿಂಗಳೂ  ತಪ್ಪದೆ ತುಷಾರ -ಕಸ್ತೂರಿ -ಮಯೂರ ಕೊಂಡು ಓದುವ ನಾ ಪ್ರತಿ ವರ್ಷದ ದೀಪಾವಳಿ ಮತ್ತು ಯುಗಾದಿ ವಿಶೇಷಾಂಕಗಳನ್ನ ಮರೆಯದೆ ಓದುವೆ..
 
ಈಗೀಗ ೨-೩ ವರ್ಷಗಳಿಂದ  ವಿಶೇಷಾಂಕದಲ್ಲಿ ಬರುವ ಯಾವೊಂದು ಕಥೆಗಳೂ- ಕವನಗಳೂ ಬರಹಗಳೂ   ವಿಶೇಷಾಂಕದ 'ವಿಶೇಷತೆಯನ್ನ'  ಉಂಟು ಮಾಡುತ್ತಿರಲಿಲ್ಲ...
 
ಈ ಸಾರಿಯೂ   ಸುಧಾ   'ಯುಗಾದಿ ವಿಶೇಷಾಂಕ' ಕೊಂಡು ನಿನ್ನೆ- ಇವತ್ತು ಬಿಡುವು ಮಾಡಿಕೊಂಡು  ಓದಿದೆ...
 
ಇದಪ್ಪ ವಿಶೇಷಾಂಕ ಅನ್ನಿಸಿತು  ....
 
ಕಾರಣ?
ಕಥಾ ವಿಭಾಗದಲ್ಲಿ  ಇದ್ದ ೪ ಕಥೆಗಳು
 ಕ್ರಮ ಸಂಖ್ಯೆ,          ಶೀರ್ಷಿಕೆ,                ಲೇಖಕ
      ೧.                  ಹೋರಿ-        ನಾಗತಿಹಳ್ಳಿ ಚಂದ್ರ ಶೇಖರ್
      ೨.                  ಅವಸಾನ-     ಪಕ್ರುದ್ದೀನ್ ಇರುವೈಲ
      ೩.                  ತಗಣಿ  -         ವಸುಧೇಂದ್ರ
      ೪.                  ಆಶ್ರಿತರು -      ಬಿ .ಟಿ .ಜಾಹ್ನವಿ
ನಾಲ್ಕೂ ಸಶಕ್ತ  ಸತ್ವಪೂರ್ಣ  -ನಮ್ ಸುತ್ತಮುತ್ತಲಿನ  ಬಹುಪಾಲು ಅಂಶಗಳನ್ನ ಕಥಾ ವಸ್ತುವಾಗಿ  ಉಳ್ಳವು...
 
ಆದರೆ ಕಥೆಯನ್ನ ಬರೆದ ರೀತಿ -ಅಂತ್ಯ ಮುಟ್ಟಿಸಿದ ರೀತಿ  ಬಹು ಮೆಚ್ಚುಗೆಯಾಯ್ತು..
 
ಮೊದಲಿನ  ಕಥೆಯಲ್ಲಿ  - ಇಬ್ಬರ ಹೆಂಡಿರ ಮುದ್ದಿನ  ಗಂಡನನ್ನ ಟಿ ವಿ ಸ್ಟುಡಿಯೋ  ಗೆ  ಪತ್ನಿ ಸಮೇತ ಕರೆಸಿ  -ಅವನ ಗತ ಜನ್ಮದ ಅನುಭವಗಳನ್ನ   ಒಬ್ಬ ಗುರುಗಳು  ಹೊರಗೆ ತರುವುದು -
ಕೊನೆಯಲ್ಲಿ ಏನಾಗುತ್ತೆ? ಅನ್ನೋದೇ ಮಜಾ....
ಎರಡನೇ ಕಥೆಯಲ್ಲಿ  ಮುಸ್ಲಿಂ ಸಹೋದರರಿಬ್ಬರಲ್ಲಿ  -ಒಬ್ಬನ  ಮಕ್ಕಳ ಜನ್ಮಕ್ಕೆ  ಕಾರಣನಾಗಲಾಗದ  ಅಸಹಾಯಕತೆ ಇದ್ರೆ,
ಹಿರಿ ಸಹೋದರ(ತನ್ನದೇ ಆದ  ಕೆಲ   ಕಾರಣಗಳಿಗಾಗಿ ಮದುವೆಯಾಗಿರದೆ ಇರ್ವವ)   ತಮ್ಮನ -ಪತ್ನಿ ಜೊತೆಗೆ  ಕೂಡಿ ಬಾಲಕನೊಬ್ಬನ ಜನ್ಮಕ್ಕೆ ಕಾರಣನಾಗಿ ಅದೇ ಮಗನಿಗೆ ದೊಡ್ದಪ್ಪನಾಗಬೇಕಾಗಿ ಬರುವುದು,
ತಾ ಮಾಡಿದ ಪಾಪಕ್ಕೆ ಪ್ರಾಯಶಿತ್ತ ಅಂತಾ 'ಮೆಕ್ಕಾಗೆ'  ಹೋಗಿ ಬರುವ ಹಿರಿ ಸಹೋದರನಿಗೆ ಮರಳಿ ಬಂದಾಗ  ಕಿರಿ ಸಹೋದರನಿಂದ  ಮತ್ತೊಂದು ಶಾಕ್!!   
ಮೂರನೇ ಕಥೆ ಹಳ್ಳಿಯ ಪಟೇಲನ  ಮಗನಲ್ಲಿ 'ಸುಪ್ತವಾಗಿದ್ದ' ಹೆಣ್ಣಿನ  ಭಾವನೆ ಹೊರಗೆ ಗೋಚರಿಸಿ  ತಾ ಅಂದುಕೊಂಡಂತೆ  ಬದುಕಲು ಆಗದೆ , ಮನೆಯವರಿಂದ  ಸಹಪಾಟಿಗಳಿಂದ ಮೂದಲಿಕೆ- ಅಪಹಾಸ್ಯಕ್ಕೆ ಈಡಾಗಿ  ಪಟ್ಟಣಕ್ಕೆ ಹೋಗಿ ಲಿಂಗ ಬದಲಿಸಿಕೊಂಡು ಬಂದು ಇಡೀ ಹಳ್ಳಿಗೆ   ಕಾ... ಕಿಚ್ಚು ಹಚ್ಚಿ  ಅಲ್ಲೋಲ ಕಲ್ಲೋಲ ಮಾಡಿ ಕೊನೆಗೆ ದುರಂತ ಅಂತ್ಯ ಕಾಣುವುದು..
 
ಈ ಕಥೆ ಓದಿ ಕಣ್ಣಲ್ಲಿ ನೀರು ಬರದಿದ್ದರೆ ನೋಡಿ,....
 
ಹಿಜ್ರಾ ಅಂತ ಹೆಸರಿಸಿದ ವ್ಯಕ್ತಿಗಳ ಬಗ್ಗೆ ನಾ ಓದಿದ  ಕಥೆಗಳಲ್ಲಿ ಇದು ಹೆಚ್ಚು ಹಿಡಿಸಿತು..
 
ಹಿಜ್ರ ಬಗ್ಗೆ  ಲೇಖನ ಇನ್ನೊಂದು ಇದೇ 'ಸಂಪದದಲ್ಲಿ ' ಲೇಖನವಾಗಿ ಕಂತುಗಳಲ್ಲಿ ಮೂಡಿ ಬಂತು ..
ಈ ನಾಲ್ಕನೆ ಕಥೆ  -
 
ಈಗೀಗ ಮಾಮೂಲು ಆಗಿರುವ  ಮುಪ್ಪಿನಲ್ಲಿ  ತಮ್ಮಿಚೆಯನ್ತೆಯೇ  ಬಾಳ ಹೊರಟವರನ್ನ(ಹಿರಿಯರು)   ಏನೇನೋ ಆಶೆ ತೋರ್ಸಿ ಪುಸಲಾಯಿಸಿ ಆಸ್ತಿ ಕಸಿದುಕೊಂಡು -ಹೊಡೆದು ಅನಾಥಾಶ್ರಮಕ್ಕೆ ತಳ್ಳುವುದು,
 ಗತ ಪ್ರಸ್ತುತ  ರೀತಿಯಲ್ಲಿ  ಸಾಗೋ ಕಥೆ ಓದಿ ಕಣ್ಣಲಿ ಹನಿ ಮೂಡುವುದು ಖಾತ್ರಿ..
 
ಕಥೆಯ ಅಂತ್ಯ     ವಿಶೇಷವಾಗಿದೆ...
ಇನ್ನು ಈ ವಿಶೇಷಾಂಕದಲ್ಲಿ  ಲಲಿತ ಪ್ರಬಂಧಗಳೂ  ಇವೆ-
೧. ಹಳ್ಳಿ ಸ್ಕೂಲು  - ಉಷಾ ನರಸಿಂಹನ್
೨. ಎಲ್ಲಿ ಹೋದರೋ - ಬಾಲ ಸುಬ್ರಹ್ಮಣ್ಯ . ಕೆ. ವಿ
೩. ಚತ್ರಿಯೇಮ್ಬೋ ಛತ್ರಿ - ಡಾ: ಕೆ.ಬಿ ರಂಗಸ್ವಾಮಿ
೪. ನೆನಪು ನೇರಳೆ ಹಣ್ಣು - ವಿಜಯ ಶ್ರೀಧರ್
ಮೊದಲ ಲಲಿತ ಪ್ರಬಂಧದಲ್ಲಿ 
 
ಕಥಾ ನಾಯಕಿ  ಪದವೀದರೆಯಾಗಿ ಮದುವೆಯಾಗಿ  ಹಳ್ಳಿಗೆ ಹೋಗಿ ನೆಲಸಿ ಆ ಊರಿನ ಶಾಲೆಯಲ್ಲಿ ಅಕಾಸ್ಮಾತಾಗಿ ಪ್ರಭಾರಿ  ಶಿಕ್ಷಕಿ ಆಗಿ ಹಳ್ಳಿ ಮಕ್ಕಳಿಗೆ ಪಾಠ ಮಾಡಲು ಹೋದಾಗ ಆಗುವ  ಅನುಭವಗಳು  ನಗೆ ಉಕ್ಕಿಸುತ್ತವೆ ಮತ್ತು ಅದೆಲ್ಲ ಹಳ್ಳಿಲಿ ಮಾಮೂಲು ಸಹಾ. ತುಂಬಾ ಚೆನ್ನಾಗಿದೆ
ಎರಡನೇ ಲಲಿತ ಪ್ರಬಂಧ
 
 ಮರಗಳ ಬಗ್ಗೆ - ಮರಗಳನ್ನ  ಮನುಷ್ಯರಿಗೆ ಹೋಲಿಸಿ  ಬರೆದದ್ದು  ತೆಂಗಿನ ಮರದ ಕುರಿತು ಹೇಳಿದ ಹಲ ವಾಕ್ಯಗಳು ಪದ ಪ್ರಯೋಗಗಳು  ಆ ಗಿಡದ ವಿಶೇಷತೆಯನ್ನ  ಉಪಯುಕ್ತತೆಯನ್ನ ತಿಳಿಸುತ್ತಲೇ  ತುಟಿ ಅರಳುವಂತೆ ಮಾಡುತ್ತೆ :(())
ಮೂರನೆಯ ಪ್ರಬಂಧ  ಛತ್ರಿ ಅಕಾ ಕೊಡೆ ಬಗ್ಗೆ - ಅಂದು-ಇಂದು-ಮುಂದು ಅದರ ಉಪಯುಕ್ತತೆ  ಅದರ 'ವಿವಿದೋದ್ದೇಶ'!! ಕುರಿತು  ಭಲೇ ಸೊಗಸಾಗಿದೆ..
ನಾಲ್ಕನೆಯದು
 
 ಹಳೆಯ ಸುಮಧುರ ಸಿಹಿ ಕಹಿ ನೆನಪುಗಳನ್ನ ನೇರಳೆ ಹಣ್ಣಿಗೆ ಹೋಲಿಸಿ  ಬರೆದದ್ದು - ಚೆನ್ನಾಗಿದೆ..
ಇದಲ್ಲದೆ ಹಾಸ್ಯ ವಿಭಾಗದಲ್ಲಿ
 
 ತುರುವೇಕೆರೆ ಪ್ರಸಾದ್ ಅವ್ರು ಬರೆದಿರೋ  'ಕೊಲವೇರಿ ಮಯ' ಎಂಬ ಪ್ರಸ್ತುತ ಹಿಟ್ ಆಗಿ ಎಲ್ಲೆಡೆ ತನ್ ಪ್ರಭಾವ ಬೀರಿದ ಕೊಲವೇರಿ ಸಾಂಗ್ ಬಗ್ಗೆ ಅದ್ನ ಉಪಯೋಗಿಸಿಕೊಂಡು ಲೇಖಕರು ಬರೆದ ಕೆಲ  ಕೊಲವೇರಿ  ಸಾಲುಗಳು :()) ಉಕ್ಕಿಸುತ್ತವೆ..
 
ಸೂರಿ ಹಾರ್ದಳ್ಳಿ - ಅವ್ರು ಬರೆದ 'ಅಧ್ವಾನಗಳು'  ಸಾರ- 
ಮನೆಗೆ ಬಂದು ಕರೆ ಘಂಟೆ ಒತ್ತಿ , ಇದು ಕೊಳ್ಳಿ ಅದು ಕೊಳ್ಳಿ ಎಂಬ  ಮಾರಾಟಗಾರರ ಕುರಿತು, ಆ ಸಮಸ್ಯೆಯಿಂದ ಲೇಖಕರು ಪಾರಾದ ಬಗೆ ,ಓದಿ ನಗೆ ಉಕ್ಕುಕ್ಕಿ ಬರದಿದ್ದರೆ ಆಗ್ ಹೇಳಿ... :())) 
ತುಂಬಾ ಚೆನ್ನಾಗಿದೆ...
ಪ್ರಭಾ -ಅವ್ರು
 
 'ಡಿಯರ್ ಡಾಗ್ಸ್' ಎಂಬ ಶ್ವಾನಗಳ ಮತ್ತು ಅವುಗಳ ಮಾಲೀಕರ ಕುರಿತು  ಹಾಸ್ಯಾತ್ಮಕವಾಗಿ ಬರ್ದಿದ್ದಾರೆ. ಅಲ್ಲಿ ಇರವ ಕೆಲ ಸಂಗತಿಗಳು ದಿನ ನಿತ್ಯ ನಡೆವನ್ತವು -
ನಾಯೀನ  ವಾಕಿಂಗ್  ಕರೆದುಕೊಂಡು ಹೋಗುವುದು- ಅದು ಅವರ ಮನೆ ಮುಂದೆ 'ಇಸ್ಶಿ' ಮಾಡೋಲ , ಬೇರೇವ್ರ ಮನೆ ಮುಂದೆ ಮಾಡೋದು!!  ಆ ಕುರಿತು ಆಗೋ ವಾಕ್ಸಮರ ಯುದ್ಧ!!  ಇನ್ನಿತರ  ಹಲ ಸಂಗತಿಗಳು :()) ಉಕ್ಕಿಸುತ್ತವೆ....
ಇದಲ್ಲದೆ ಸಾಹಸ ಕ್ರೀಡೆಗಳ ಬಗ್ಗೆ
(ಬಂಗಿ ಜಂಪ್,  ಸ್ಕೈ ಡೈವಿಂಗ್ ಇತ್ಯಾದಿ) ಬಗ್ಗೆ ಚಿತ್ರ ಸಮೇತ ವಿವರಣೆ- ಸಲಹೆ - ತರಬೇತಿ ಕೊಡುವ ಸಂಸ್ತೆಗಳ ವಿಳಾಸ ಇತ್ಯಾದಿ -
ಉಪಯುಕ್ತ ಬರಹ
ಹುಲಿ  ಬಗ್ಗೆ   ಅವುಗಳ  ಸಂತತಿ  ರಕ್ಷಿಸಲು  ಸರಕಾರಗಳು  ಕೈಗೊಂಡ  ಯೋಜನೆಗಳು    ಇತ್ಯಾದಿಯನ್ನ  'ರಣಥಮ್ಬೋರ್  ನ್ಯಾಷನಲ್   ಪಾರ್ಕ್' ಜೊತೆಗೆ ವಿವರಿಸಿ ' ಹುಲಿಗೆ' ಪತ್ರ ಬರೆದಂತೆ ಇರುವ    ಬರಹ .
ತಮ್ಮ ಇಷ್ಟದ  ಕ್ಷೇತ್ರಗಳಲ್ಲಿ  ಪ್ರವೇಶಿಸಿ ಸಮಸ್ಯೆ ಎದುರಿಸಿ  ಯೆಶಸ್ಸು ಸಾಧಿಸಿದ  ಹಲ ಮಹಿಳೆಯರ( ಅವರ್ಯಾರನ್ನು ನಾವು ಇದುವರೆಗೂ ಪೇಪರ್ನಲ್ಲಿ ಓದಿಲ್ಲ -ಕೇಳಿಲ್ಲ -ನೋಡಿಲ್ಲ)...
ಕುರಿತು ಬರಹ- ಯಶಸ್ಸಿನ ಕಥೆ'
 
ಇದಲ್ಲದೆ  ಕನ್ನಡ  ಚಿತ್ರ ರಂಗದ ಬಗ್ಗೆ-
ಕನ್ನಡದ ಮಣ್ಣಿನ ಸೊಗಡಿನ ಚಿತ್ರಗಳು -ಕಥೆ -ಹಾಡಿನ ಸಾಹಿತ್ಯ ಮರೆಯಾದದ್ದರ ಬಗ್ಗೆ -
ಹಿಂದಿ ಚಿತ್ರ ರಂಗದ ಜನಪ್ರಿಯ ಜೋಡಿಗಳ ಬಗ್ಗೆ  ಬರಹಗಳು,
ಹಲ ಕವನಗಳು -
ಚುಟುಕಗಳು (ಸೀ ಪೀ ಕೆ , ಮತ್ತು ರಾಂನಾಥ್), 
ಜೋಕುಗಳು -
ವರ್ಷ ಭವಿಷ್ಯ!!
ಸಹಾ  ಇವೆ....

ಒಟ್ಟಿನಲ್ಲಿ ೫೦ ರೂಪಾಯಿಯಲ್ಲಿ ಸಂಗ್ರಹ ಯೋಗ್ಯ ಸಂಚಿಕೆ...
 
ಜೊತೆಗೆ 

'ಮನೆಯಲ್ಲೇ ಸೌಂದರ್ಯ ಚಿಕಿತ್ಸೆ' ಎಂಬ ಪುಟ್ಟ ಅರೋಗ್ಯ ಸಂಬಂಧಿ ಪುಸ್ತಕ  ಉಚಿತ....
ಈ ಯುಗಾದಿಯ 'ಸುಧಾ ಯುಗಾದಿ ವಿಶೇಷಾಂಕ'ವನ್ನ  ಕೊಂಡುಕೊಂಡು ಓದಿ....
 
 
*****ಸಮಸ್ತ  ಸಂಪದಿಗರಿಗೆ  ಯುಗಾದಿಯ  'ಮುಂಗಡ' ಶುಭಾಶಯಗಳು ****
                                           ಶುಭವಾಗಲಿ.........


ಚಿತ್ರ ಮೂಲ :


http://cautiousmind.files.wordpress.com/2010/03/a26.jpg

Rating
No votes yet

Comments