ಸಿಂಹದ ಹಲ್ಲಿನ ಕಾಫಿ!..ಟೀನೂ!!..ವೈನೂ!!!ಊಂ...

ಸಿಂಹದ ಹಲ್ಲಿನ ಕಾಫಿ!..ಟೀನೂ!!..ವೈನೂ!!!ಊಂ...

ನಾವು ಕುಡಿಯುವ ಕಾಫಿಗೂ, ಸಿಂಹದ ಹಲ್ಲಿನ ಕಾಫಿಗೂ ವ್ಯತ್ಯಾಸವೇ ಗೊತ್ತಾಗುವುದಿಲ್ಲವಂತೆ. ಜತೆಗೆ ಕೆಫಿನ್‌ನ ದುಷ್ಪರಿಣಾಮಗಳೂ ಇಲ್ಲ. ಬದಲಿಗೆ ಲಿವರ್‌ಗೆ ಹಿತಕಾರಿಯಂತೆ!

ಸಿಂಹದಹಲ್ಲಿನ "ಟೀ"ನೂ ಮಾಡುವರು. ಡಿಟೋ ಕಾಫಿ ತರಹ ಇದೂ ಆರೋಗ್ಯಕ್ಕೆ ಒಳ್ಳೆಯದು. Wine ಕುಡಿಯದವರೂ ಕುಡಿಯಬೇಕು-ಸಿಂಹದ ಹಲ್ಲಿನ ವೈನ್ ಎಕ್ಸಲೆಂಟ್ ಟಾನಿಕ್!

"ಸಿಂಹದ ಹಲ್ಲು" ಅಂದ್ರೆ-

ಸಣ್ಣ ಗಿಡ :) ಒಂದು ಜಾತಿಯ "ಕಳೆ"ಗಿಡ. ಉತ್ತರ ಭೂಖಂಡದ ಉಷ್ಣವಲಯದಲ್ಲಿ ಹೆಚ್ಚಾಗಿ ಕಾಣಬರುವುದು. ಸಿಂಹದ ಹಲ್ಲಿನಂತೆ ಎಲೆಗಳು ಇರುವುದರಿಂದ, ಈ ಗಿಡಕ್ಕೆ Dent De Lion (F), Dandelion(E) ಹೆಸರು ಬಂತು.(ಕೃಪೆ-ವಿಕಿಪೀಡಿಯ)

ಗಿಡದ ಎಲೆ,ಹೂ ಏನೇ ಕಿತ್ತರೂ ಹಾಲಿನಂತಹ ಸ್ರಾವ ಬರುವುದರಿಂದ ಇದಕ್ಕೆ ಸಂಸ್ಕೃತದಲ್ಲಿ "ದುಗ್ಧಫೇನೀ" ಎನ್ನುವರು.

ಎಲೆಯ ನಡುಭಾಗ ತಗ್ಗಿದ್ದು, ಎಲ್ಲಾ ಎಲೆಗಳು ಮುಖ್ಯ ಬೇರಿನೆಡೆಗೆ ಸಾಗುವುದರಿಂದ, ಎಲೆಗೆ ಬಿದ್ದ ಮಳೆನೀರು ನೇರ ಬೇರಿಗೆ ತಲುಪುವುದು.(ಮಳೆಕೊಯ್ಲು)

ಹೂವುಗಳು ಸೇವಂತಿ ಹೂವಿನಂತೆ ಇದ್ದು ಮಕರಂದ ತುಂಬಾ ಜಾಸ್ತಿ. ಈ ಕಾರಣಕ್ಕೆ ಕೀಟಗಳೂ ಜಾಸ್ತಿ. ಜೇನು ಹುಳ ಈ ಹೂವಿನ ನಂಬರ್ ಒನ್ ಗಿರಾಕಿ.

ಬೀಜಗಳೆಲ್ಲಾ ಹಾರಿ ಹೋದ ಮೇಲೆ ಉಳಿದ ದಂಟು ಹಂದಿಮುಖದಂತೆ ಕಾಣುವುದರಿಂದ ಇದಕ್ಕೆ "swine's snout" ಎಂಬ ಹೆಸರೂ ಇದೆ.

ಇದರ ಬಾಟನಿಕಲ್ ಹೆಸರು-Taraxacum officinale.

ಒಂದು ಕಳೆಗಿಡದಲ್ಲಿ ಎಷ್ಟು ಸುಂದರ ಹೂ. ಚಿತ್ರ ನೋಡಲು ಕೆಳಗೆ ಕ್ಲಿಕ್ಕಿಸಿ-

http://picasaweb.google.com/lh/view?q=dandelion&psc=G&filter=1#5194137440754968418

http://picasaweb.google.com/lh/view?q=dandelion&psc=G&filter=1#5241120715042789410

(ಸಂಗ್ರಹ)

-ಗಣೇಶ.

 

 

 

Rating
No votes yet

Comments