ತಿಳಿದೆ ನಾನು
ತಿಳಿದೆ ನಾನು
ಒಬ್ಬನೇ ಬಂದೆ ಒಬ್ಬನೇ ಹೋಗುವೆನೆಂದು
ತಿಳಿದೆ ನಾನು
ಕೆಲರು ಒಡನಿರುವರು ನಾನು ಬೇಕೆಂದಲ್ಲ
ಅವರಿಗೆ ನಾನು ಬೇಕಿತ್ತೆಂದು
ತಿಳಿದೆ ನಾನು
ಯಾರನ್ನು ಇಷ್ಟಪಡುವೆನೋ ಅವರಿಂದ
ದೂರಲ್ಪಡುವೆನೆಂದು
ತಿಳಿದೆ ನಾನು
ಪ್ರಿಯರ ಸಣ್ಣ ಸುಳ್ಳು ಹೃದಯ ಒಡೆಸೀತೆಂದು
ತಿಳಿದೆ ನಾನು
ಆಸರೆಯ ಭುಜವಿಲ್ಲದೆ ಅಳುವುದು ಕಷ್ಟವೆಂದು
ತಿಳಿದೆ ನಾನು
ಇರುವ ಪ್ರೀತಿಯನ್ನೆಲ್ಲಾ ಕಳೆದುಕೊಳ್ಳದೆ
ಸ್ವಂತಕ್ಕೂ ಸ್ವಲ್ಪ ಉಳಿಸಿಕೊಳ್ಳಬೇಕೆಂದು
ತಿಳಿದೆ ನಾನು
ಎಲ್ಲರೊಡನಿದ್ದರೂ ಒಂಟಿಯಾಗಿರುವೆನೆಂದು
ತಿಳಿದೆ ನಾನು
ಬದಲಾಗಬೇಕಾದ್ದು ನಾನೇ ಎಂದು
ತಿಳಿದೆ ನಾನು
ಬಯಸಿದಂತೆ ನಡೆಯುವುದು ಕಷ್ಟವೆಂದು
ತಿಳಿದೆ ನಾನು
ಬಹಿರಂಗ ಅಂತರಂಗವ ನುಂಗಿ ನೀಗೀತೆಂದು
ತಿಳಿದೆ ನಾನು
ಏಕಾಂತ ಮಾತ್ರ ನನ್ನತನವನುಳಿಸೀತೆಂದು
ತಿಳಿದೆ ನಾನು
ತಿಳಿದದ್ದು ಸ್ವಲ್ಪ ತಿಳಿಯದಿರುವುದು ಬಹಳವೆಂದು
ತಿಳಿದೆ ನಾನು
. . . . . . . . . . . . . . . . . . . . . . . . .
-ಕ.ವೆಂ.ನಾಗರಾಜ್.
Rating
Comments
ಉ: ತಿಳಿದೆ ನಾನು
In reply to ಉ: ತಿಳಿದೆ ನಾನು by partha1059
ಉ: ತಿಳಿದೆ ನಾನು
ಉ: ತಿಳಿದೆ ನಾನು
In reply to ಉ: ತಿಳಿದೆ ನಾನು by makara
ಉ: ತಿಳಿದೆ ನಾನು
In reply to ಉ: ತಿಳಿದೆ ನಾನು by kavinagaraj
ಉ: ತಿಳಿದೆ ನಾನು
In reply to ಉ: ತಿಳಿದೆ ನಾನು by makara
ಉ: ತಿಳಿದೆ ನಾನು
ಉ: ತಿಳಿದೆ ನಾನು
In reply to ಉ: ತಿಳಿದೆ ನಾನು by sathishnasa
ಉ: ತಿಳಿದೆ ನಾನು
In reply to ಉ: ತಿಳಿದೆ ನಾನು by sathishnasa
ಉ: ತಿಳಿದೆ ನಾನು
ಉ: ತಿಳಿದೆ ನಾನು
In reply to ಉ: ತಿಳಿದೆ ನಾನು by RAMAMOHANA
ಉ: ತಿಳಿದೆ ನಾನು
ಉ: ತಿಳಿದೆ ನಾನು
In reply to ಉ: ತಿಳಿದೆ ನಾನು by Praveen.Kulkar…
ಉ: ತಿಳಿದೆ ನಾನು