ಅಪ್ರಮೇಯ ಸ್ವಾಮಿ ದೇವಸ್ಥಾನ

ಅಪ್ರಮೇಯ ಸ್ವಾಮಿ ದೇವಸ್ಥಾನ

ರೇಷ್ಮೇಯ ನಾಡು ರಾಮನಗರ ಜಿಲ್ಲೆಯ,ಕರಕುಶಲ ಬೊಂಬೆಗಳ ಬೀಡು ಚನ್ನಪಟ್ಟಣ ತಾಲ್ಲೂಕಿನಿಂದ 3 ಕಿ.ಮೀ ದೂರದಲ್ಲಿರುವ ಮಳೂರು ಎಂಬ ಗ್ರಾಮದಲ್ಲಿ ಇರುವ ಅಪ್ರಮೇಯ ಸ್ವಾಮಿ ದೇವಸ್ಥಾನವು ಒಂದು ಪುರಾತನವಾದ ದೇವಸ್ಥಾನ.ಈ ದೇವಸ್ಥಾನವು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಂಡು ಬರುತ್ತದೆ.ಈ ದೇವಸ್ಥಾನವು ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ.ಈ ಗ್ರಾಮಕ್ಕೆ ಮಳೂರು ಎಂದು ಹೆಸರು ಬರಲು ಕಾರಣ ವೆನೆಂದರೆ ಸಾರಂಗದರನ ತಂದೆಯು ಆತನ ಕೈ-ಕಾಲುಗಳನ್ನು ಕತ್ತರಿಸಿ ಕಣ್ವನದಿಯಲ್ಲಿ ಎಸೆದಾಗ ಮಳೂರಿನ ಬಳಿ ಶ್ರೀರಾಮ ಅಪ್ರಮೇಯ ಸ್ವಾಮಿಯನ್ನು ಪ್ರಾರ್ಥಿಸಿದಾಗ ಅವನಿಗೆ ಕತ್ತರಿಸಿದ ಕೈ-ಕಾಲುಗಳು ಮತ್ತೆ ಮೊಳೆತು ಈಜಿ ದಡ ಸೇರುತ್ತಾನೆ.ಹಾಗೂ ಆ ಊರು ಮರಳಿನಿಂದ ಕೂಡಿದ್ದರಿಂದ ಮಳೂರು ಎಂದಾಗಿದೆ.


ಅಂದಿನಿಂದ ಈ ಊರಿಗೆ ಮೊಳತ ಊರು ಎಂದಾಗಿ ಕಾಲ ಕ್ರಮೇಣ ಮಳೂರು ಎಂದಾಗಿದೆ. ಇದು ರಾಜೇಂದ್ರ ಸಿಂಹ ಚೋಳನ ಆಳ್ವಿಹಾಕೆಗೆ ಒಳಪಟ್ಟಿದ್ದರಿಂದ ರಾಜೇಂದ್ರ ಸಿಂಹ ನಗರಿ, ದಕ್ಷಿಣ ಕಾಶಿ ಎಂದೂ, ಶ್ರೀರಾಮಚಂದ್ರನು ಅಪ್ರಮೇಯ ಸ್ವಾಮಿಯನ್ನು ಪ್ರಾರ್ಥಿಸಿ ಪೂಜಿಸಿದ್ದರಿಂದ ಶ್ರೀ ರಾಮಾಪ್ರಮೇಯ ಸ್ವಾಮಿಯೆಂದು ಈ ಕ್ಷೇತ್ರವನ್ನು ‘ತೆಂಕಣ ಅಯೋಧ್ಯೆ’ ಎಂದು ಕರೆಯುತ್ತಾರೆ. ಶ್ರೀರಾಮ ಅಪ್ರಮೇಯ ಸ್ವಾಮಿ ದೇವಸ್ಥಾನವು ಸುಮಾರು 1600 ವರ್ಷಗಳ ಹಳೇ ದೇವಸ್ಥಾನವಾಗಿದ್ದು ಸಾವಿರ ವರ್ಷಗಳ ಹಿಂದೆ ರಾಜೇಂದ್ರ ಸಿಂಹ ಚೋಳನ ಕಾಲದಲ್ಲಿ ದೇವಸ್ಥಾನ ಜೀರ್ಣೋದ್ಧಾರಗೊಂಡಿದ್ದು ಮತ್ತೆ ವಿಜಯನಗರ ಅರಸರ ಕಾಲದಲ್ಲಿ ಪ್ರಾಕಾರ ನಿರ್ಮಾಣ ಮುಂತಾದ ಜೀರ್ಣೋದ್ಧಾರ ಕಾರ್ಯಗಳು ನಡೆದಿವೆ.


1991 ರಲ್ಲಿ ರಾಜಗೋಪುರ, ವಿಮಾನ ಗೋಪುರಗಳು ಜೀರ್ಣೋದ್ಧಾರ ಕಾರ್ಯಗಳು ನಡೆದಿದ್ದು, ಕಾಲಕಾಲಕ್ಕೆ ದೇವಸ್ಥಾನದ ಅಭೀವೃದ್ದಿ ಕಾರ್ಯಗಳು ನಡೆದಿರುವುದರಿಂದ ದೇವಸ್ಥಾನವು ಸುಸ್ತಿತಿಯಲ್ಲಿದೆ. ಶ್ರೀರಾಮಾಪ್ರಮೇಯ ಸ್ವಾಮಿ ದೇವಾಲಯದಲ್ಲಿ ಮೂಲ ವಿಗ್ರಹ ಶ್ರೀ ರಾಮಾಪ್ರಮೇಯ ಸ್ವಾಮಿ, ಶ್ರೀ ದೇವಿ, ಭೂದೇವಿ ಸಮೇತ ಶ್ರೀ ರಾಮಪ್ರಮೇಯ ಸ್ವಾಮಿಯ ಪಂಚಲೋಹ ಉತ್ಸವ ವಿಗ್ರಹಗಳು ಶ್ರೀ ಅರವಿಂದವಲ್ಲಿ ತಾಯಾರ್ (ಶ್ರೀ ಲಕ್ಷ್ಮಿ ಅಮ್ಮನವರ) ಮೂಲ ವಿಗ್ರಹ, ಅತ್ಯಂತ ಜನಪ್ರಿಯ ಜಗನ್ಮೋಹನ ಅಂಬೇಗಾಲು ಶ್ರೀ ನವನೀತ ಕೃಷ್ಣನ ಸಾಲಿಗ್ರಾಮ ಶಿಲೆಯ ವಿಗ್ರಹ ಹಾಗೂ ಆಳ್ವಾರ್ ಆಚಾರ್ಯರ ವಿಗ್ರಹಗಳು ಕಂಗೊಳಿಸುತ್ತಿವೆ. ಶ್ರೀ ರಾಮಾಪ್ರಮೇಯ ಸ್ವಾಮಿಯವರ ಹೆಸರಿನಲ್ಲಿ ಮತ್ತೊಂದು ದೇವಾಲಯವು, ಪ್ರಪಂಚದಾದ್ಯಂತ ಎಲ್ಲಿಯೂ ಇಲ್ಲ ಎಂಬ ಹೆಮ್ಮೆಗೆ ಪಾತ್ರವಾಗಿದೆ. ಶ್ರೀ ವಿಷ್ಣು ಸಹಸ್ರನಾಮದಲ್ಲಿ ಶ್ರೀ ಅಪ್ರಮೇಯ ಎಂಬುದು ಒಂದು ನಾಮವಾಗಿದ್ದು ಆಳವಾದ ಸ್ವರೂಪ ಉಳ್ಳದ್ದು, ದೇವರ ಸೌಂಧರ್ಯ, ಲಾವಣ್ಯ, ಪರಾಕ್ರಮ, ಶಕ್ತಿಯನ್ನು ಅಳೆಯಲು ಸಾಧ್ಯವಿಲ್ಲ ಎಂಬ ಅರ್ಥವನ್ನು ಕೊಡುತ್ತದೆ. ಶ್ರೀ ಅಪ್ರಮೇಯ ಸ್ವಾಮಿ ದೇವರ ವಿಗ್ರಹದ ಮೇಲೆ ಸೂರ್ಯನ ಕಿರಣ ಬೀಳುವುದು ಎಂಬ ಪ್ರತಿತೀ ಇದೆ.


ಬೆಳಿಗ್ಗೆ ಸೂರ್ಯೋದಯವಾಗುತ್ತಿದ್ದಂತೆ ಅಂದು  ದೇವಸ್ಥಾನದ ಮುಂದೆ, ಮಂಟಪ, ಗರುಡಗಂಭ, ಒಳಗೆ ಧ್ವಜಸ್ಥಂಭವಿದ್ದರೂ ಸಹಾ ನೇರವಾಗಿ ದೇವರ ಮೇಲೆ ಅಂದು ಸೂರ್ಯನ ಕಿರಣದೇವರ ಪಾದದಿಂದ ಶಿರದವರೆಗೆ ಬೀಳುತ್ತದೆ. ಇದು ದೇವಸ್ಥಾನದ ನಿರ್ಮಾಣದಲ್ಲಿ ಇರುವ ವಿಶೇಷತೆಯನ್ನು ತೋರಿಸುತ್ತದೆ.ಶ್ರೀ ಅಂಬೇಗಾಲು ನವನೀತ ಕೃಷ್ಣನ ವಿಗ್ರಹವು 6 ತಿಂಗಳ ಮಗು ಅಂಬೆಗಾಲಿಕ್ಕುತ್ತ ಬರುವ ಭಂಗಿಯಲ್ಲಿದ್ದು, ತಲೆಯಲ್ಲಿ ಗುಂಗುರು ಕೂದಲು, ಕತ್ತಿನಲ್ಲಿ ಹುಲುಯುಗರಿನ ಸರ, ಕಿವಿಗಳಲ್ಲಿ ಮಾವಿನ ಕಾಯಿಯ ಲೋಲಾಕು, ಕೈಬಳೆ, ಕಾಲ್ ಬಳೆ, ನಡುಗೆಜ್ಜೆ ಉಡುದಾರ, ಎಲ್ಲಾ ಬೆರಳುಗಳಲ್ಲಿ ಉಂಗುರುಗಳು, ಯಜ್ಞೋಪವೀತ,, ಒಂದು ಕೈಯಲ್ಲಿ ಬೆಣ್ಣೆಯುಂಡೆಯನ್ನು ಹಿಡಿದು, ಮತ್ತೊಂದು ಕೈಯನ್ನು ನೆಲಕ್ಕೆ ಊರಿ, ಒಂದು ಕಾಲನ್ನು ಮಡಚಿಕೊಂಡು ಮತ್ತೊಂದು ಕಾಲನ್ನು ಎತ್ತಿಕೊಂಡು, ಅಂಬೆಗಾಲಿನಲ್ಲಿ ಮುಂದೆ, ಮುಂದೆ ಬರುವ ಹಾಗೆ ಅದ್ಭುತವಾಗಿ ಕಡೆದಿದ್ದಾರೆ.ಈ ಗ್ರಾಮದಲ್ಲಿ ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಜಾತ್ರಮಹೋತ್ಸವವನ್ನು ಆಚರಿಸುತ್ತಾರೆ.ನೀವು ಬಂದು ನೋಡಿ.


 

Comments