ಅಯ್ಯೋ!! ನಾನೇ ರ್ರೀ ಗಣೇಶ್ !! ...............
ಮೊನ್ನೆ ೨ ದಿನ ಆಫೀಸಿಗೆ ರಜೆ ಹಾಕಿ 'ಬೀ ಕಾಂ' ಎಕ್ಷಾಮ್ ಫೀ ಕಟ್ಟಿ ಅಳಿದುಳಿದ ಕೆಲಸ ಮುಗಿಸಿ ಹೊಟ್ಟೆಗೆ ವಸಿ ಏನಾರಾ ಹಾಕೋಣ ಅಂತ ಮಲ್ಲೇಶ್ವರಂನಲ್ಲಿರೋ 'ಹಳ್ಳಿ ಮನೆ' ಹೊಟೆಲ್ ಗೆ ಹೋಗಿದ್ದೆ..
ಮಧ್ಯಾಹ್ನವಾದದ್ದರಿಂದ ಊಟದ ಹೊತ್ತು ಹೀಗಾಗಿ ಹೊಟೇಲು ಜನರಿಂದ ತುಂಬಿ ತುಳುಕುತ್ತಿತ್ತು ಕೆಳಗಡೆ ಹುಡುಕಾಡಿ ಕೊನೆಗೆ ಖಾಲಿ ಇದ್ದ ಒಂದು ಟೇಬಲ್ ಹುಡುಕಿ ಚೇರ್ ಎಳೆದುಕೊಂಡು 'ಅಕ್ಕಿ ರೊಟ್ಟಿ -ಕಾಯಿ ಚಟ್ನಿ' ತಿಂತಿದ್ದೆ.. ಹಾಗೆ ಸುತ್ತ ಮುತ್ತ ಕಣ್ಣಾಡಿಸಿದಾಗ, ಮೂಲೆಲಿ ಯಾರೋ ತುಸು 'ಮಧ್ಯ ಕಾಲು ವರ್ಷದವರ ತರಹ ಕಾಣಿಸುವ ಒಬ್ಬರು ತಾವ್ ತಿಂತಿದ್ದ 'ಬೆಣ್ಣೆ ದೋಸೆಯನ್ನು' ಬಿಟ್ಟು ನನ್ನೇ ನೋಡುತ್ತಿರುವುದು ನನ್ನ ಗಮನಕ್ಕೆ ಬಂತು...!!
ಕುಳಿತಿದ್ದರಿಂದ ಅವರ ಇಡೀ ದೇಹವನ್ ವರ್ಣಿಸಲು ಆಗದಿದ್ದರೂ
ನಾ ಗಮನಿಸಿದ ಹಾಗೆ ಗೌರ ವರ್ಣದ ಮುಖ ,ಹಣೆಗೆ ಕೆಂಪು ತಿಲಕ!! ದಪ್ಪಾಗೂ ಸಣ್ನಾಗಿನ ಮಧ್ಯದ ಸೈಜಿನ ದೇಹ ಯೌವ್ವನದಲ್ಲಿ ದಿನ ನಿತ್ಯ ತಪ್ಪದೇ ಗರಡಿ ಮನೆಗೆ ಹೋಗಿ 'ಸಾಮು' ಮಾಡಿರುವರೋ ಎಂಬಂತೆ ಕಾಣಿಸುವ ಸದೃಢ ಕೈಗಳು !! ಇಡೀ ಹಳ್ಳಿ ಮನೆಯಲ್ಲಿ ಅಸ್ತು ಜನರ ಮಧ್ಯೆ ಈ ವ್ಯಕ್ತಿ ಯಾಕೋ 'ವಿಶೇಷ'ವಾದವರು ಅನ್ನಿಸತೊಡಗಿತು ಎನ್ನ ಮನಕೆ !! ಆವರನ ಇನ್ನಸ್ತು ಕಣ್ಣು ಕಿರಿದಾಗಿಸಿ ಧಿಟ್ತಿಸಲು ಮಟ್ಟಸವಾಗಿ ಇಸ್ತ್ರಿ ಮಾಡಿದ ಕಾಟನ್ ಷರ್ಟು ಮತ್ತು ಅದರ ವಿರುದ್ಧ ಬಣ್ಣದ ಪ್ಯಾಂಟು ಹಾಕಿದ್ದು ಅದ್ಕೆ ಸುಕ್ಕು ಸಹಾ ಮೂಡದಿದ್ದುದು ಗೋಚರಿಸಿತು!!
ಕಾಲಿಗೆ ತಂಪು ಕೊಡುವ ಬೂಟು, ಜೇಬಲ್ಲ್ಲಿ ತೆಗೆದು ಇಟ್ಟುಕೊಂಡಿದ್ದ ಕಣ್ಣಿಗೆ ತಂಪನೀವ ಗಾಢ ಬಣ್ಣದ ದೊಡ್ಡ ಸೈಜಿನ ಚಾಳೀಸು!!.... ಬಗಲಲ್ಲಿ ಒಂದು ಹೆಗಲು ಚೀಲ ,ಅದರಲ್ಲಿ ಕೊಂಚ ಹೊರಗಡೆ ಕಾಣಿಸುತ್ತಿದ್ದ ಕ್ಯಾಮೆರಾ :()) ಕೆಲ ಗಿಡ ಬಳ್ಳಿಗಳ ಹೂ- ಎಲೆ ಗಳು, ಅದೇ ತಾನೇ ಅಲ್ಲಿ ಅವರ ಕಾಲು ಕೆಳಗಡೆ ಮೆಲ್ಲನೆ ಹೋಗುತ್ತಿದ್ದ ಜಿರಳೆ -ಗು ಆ ವ್ಯಕ್ತಿಗೂ ಬಹುಶ ಯಾವುದೇ ಸಂಬಂಧ ಇದ್ದಿರಲಾರದು ಅಂತ ಅನ್ನಿಸಿತು:)))
ನನ್ನ ನೋಡುತ್ತಿದ್ದ ಅವರ ಮುಖದಲ್ಲಿ 'ಅದೇನೋ' ಅವ್ಯಕ್ತ ಖುಷಿ- ಕುತೂಹಲ -ಮೆಚುಗೆ ಎಲ್ಲವೂ ಒಟ್ತೊಟ್ಟಾಗಿ ಕಾಣಿಸಿದವು:)) ಈ ಮೊದಲು ಯಾರನ್ನ ನೋಡಿದಾಗಲೂ ನನಗೆ ಹಾಗೆ ಅನ್ನಿಸಿರದಿದ್ದುದರಿಂದ ಯಾವುದಕ್ಕೂ ಕನ್ಫರ್ಮ್ ಮಾಡಿಕೊಳ್ಳೋಣ ಅಂತ ನನ್ನ ಹಿಂದೆ ಜಿಂಕೆಗಳು- ನವಿಲುಗಳು !! ಇವೆಯೇ ಅಂತ ನೋಡಿದೆ, ಅಲ್ಲಿ .............ಮಾತ್ರ ಇದ್ದರು!!
ಮತ್ತೊಮ್ಮೆ ಅವರನ್ನೇ ನೋಡಲು ಇನ್ನೂ ನನ್ನತ್ತಲೇ ನಗುತ್ತಾ ನೋಡುತ್ತಿದ್ದುದು ಕಾಣಿಸಿತು, ನನಗೆ ಏನೂ ಮಾಡಲು ತೋಚದೆ ಅಕ್ಕಿ ರೊಟ್ಟಿಯನ್ನ ಚಟ್ನಿ ಜೊತೆ ನೆಂಚಿಕೊಂಡು ಕಣ್ಣ ಕೊನೆಯಲೇ ಅವರನ್ನೇ ನೋಡ್ತಾ ತಿಂತಿದ್ದೆ, ನನ್ನ ತಳಮಳ ಹೆಚ್ಚಿಸಲು ಅವರು ನನ್ನ ಮುಂದಿನ ಖಾಲಿ ಚೇರ್ ನಲ್ಲಿ ಬಂದು ಕುಳಿತುಕೊಳ್ಳಬೇಕೆ?
ಅಕ್ಕಿ ರೊಟ್ಟಿ ಗಂಟಲಲ್ಲಿ ಸಿಕ್ಕಿ ಕೇವ್ವ್ -ಕೇವ್ವ್ ಅಂತ ಕೆಮ್ಮಲು ಸಮಾಧಾನ ಸಮಾಧಾನ, ತಗೊಳ್ಳಿ ಈ ನೀರು ಕುಡಿಯಿರಿ ಅಂತ ನೀರಿನ ಗ್ಲಾಸು ನನ್ನ ಕೈಗೆ ಕೊಟ್ಟರು!!
ಯಾಕೋ ನನಗೆ ಮಗೂನಾ ಚಿವುಟುವವರು ಅವ್ರೆ ,ಮತ್ತೆ ತೊಟ್ಟಿಲು ತೂಗುವವರು ಅವ್ರೆ ನೆನಪಿಗೆ ಬಂತು!!
ತುಂಬಾ ಥ್ಯಾಂಕ್ಸ್ ಅಂದು ಏನು ವಿಷ್ಯ ಎಂಬಂತೆ 'ಅವರತ್ತ' ನೋಡಿದೆ.
ಕಾಫೀ ಕುಡಿಯೋಲ್ಲವೇ? ಅವರ ಪ್ರಶ್ನೆ
ಯಾಕಿಲ್ಲ- ಕುಡಿಯುವೆ, ಈಗಸ್ಟೆ ನೀರು ಕುಡಿದಿರುವೆ!!
:())) -ಅವರು
:((( -ನಾನು
ಇಬ್ಬರ ಮಧ್ಯೆ ಗಾಢ ಮೌನ -
ಹಳ್ಳಿ ಮನೆ ಯಲ್ಲಿ ಅಸ್ತೆಲ್ಲ ಜನರ ಗದ್ದಲ ಗಜಿ ಬಿಜಿ ಶಬ್ಧದ ನಡುವೆ ನನಗ್ಯಾಕೋ ಮೌನದ ವಾತಾವರಣವಿದೆ ಅನ್ನಿಸತೊಡಗಿತು
ಕೊನೆಗೆ 'ಅವ್ರೆ' ಈ ಮೌನವ ತಾಳೆನು ಮಾತಾಡೋ ದಾರಿಯ ಕಾಣೆನು!!
ಎಂಬಂತೆ ಒಮ್ಮೆ ಕೆಮ್ಮೀ ಗಂಟಲು ಸರಿ ಮಾಡಿಕೊಂಡರು ,
ಅವರು ಕೆಮ್ಮಿದ ಶಬ್ಧಕ್ಕೆ ಅವ್ರ ಹಿಂದೆ ಕುಳಿತಿದ್ದ ಮಧ್ಯ ವಯಸ್ಸಿನ 'ಆಂಟಿ' ನೀರು ಕುಡಿಯಲು ಬಾಯಿಯವರೆಗೆ ಗ್ಲಾಸ್ಸ್ ಹೊಯ್ಡವರು ನೀರು ಮುಖದ ಮೇಲೆ ಹಾಕಿಕೊಂಡರು:()) ಪಾಪ!! ಭಯ ಪಟ್ಟುಕೊಂಡರೇನೋ?
ಆದ ನೋಡಿ ನಾ ಮುಗುಳ್ನಗಲು - ಅವರು ಇದೆ 'ಸುಸಮಯ'!! ಅಂತ ಯೋಚಿಸಿ , ನೋಡಿ ಸಪ್ತಗಿರಿವಾಸಿ ವೆಂಕಟೇಶ ಅವ್ರೆ ನಿಮಗೆ 'ಗಣೇಶ್' ಅನ್ನುವ ವ್ಯಕ್ತಿ ಬಗ್ಗೆ ಈಗಲೆ ಗೊತ್ತಿರಬೇಕು , ನೀವು ಅವರನ್ನ ನೋಡಿರುವಿರಾ? ಕೇಳಿದರು
ಒಹೋ! ಯಾಕಿಲ್ಲ ನನಗೆ ಗಣೇಶ್ ತುಂಬಾ ಚೆನ್ನಾಗಿ ಗೊತ್ತು ನನಗಸ್ಟೆ ಯಾಕೆ 'ಅವರು' ಇಡೀ ಕರು ನಾಡಿನ ಜನಕ್ಕೆ ಗೊತ್ತು ಎಂದೆ ..
ಹ್ಹ!!
ಒಹೋ!!
ಹೌದಾ?
ಅದ್ ಹೇಗೆ ಸಾಧ್ಯ?
ಯಾರೊಬ್ಬರಿಗೂ ಮುಖ ತೋರಿಸಿಲವಲ್ಲ!
ನನಗೆ ಗೊತ್ತಿರದೆ ನನ್ನ 'ಕರು ನಾಡಿನ ' ಜನರೆಲ್ಲ ನೋಡಿದರೆ? ಅವರ ಸ್ವಗತ :())
ಏನಂದಿರಿ?
ನನ್ನ ಪ್ರಶ್ನೆ
ಸಪ್ತಗಿರಿವಾಸಿ ವೆಂಕಟೇಶ್ ಅವ್ರೆ - ನೀವು ಹೇಳಿದಿರಲ್ಲ ಗಣೇಶ್ ಇಡೀ 'ಕರುಣಾಡಿಗೆ' ಗೊತ್ತು ಅಂತ ಆದೇಗ್ ಸಾಧ್ಯ ಅಂತ?
ಸ್ವಲ್ಪ ಬಿಡಿಸಿ ಹೇಳೀಪ ಅನ್ನಲು
ನಾ - ಅದೇ ಸ್ಸಾರ್ ಗೊಲ್ಡನ್ ಸ್ಟಾರ್ ಕಾಮೆಡಿ ಟೈಮ್ ಗಣೇಶ್ ತಾನೇ ನೀವು ಹೇಳ್ತಿರೋದು ಅಂದೇ:((
ಅಃ!! ಆಹ್ಹಹಾ !! ಆಹಹ್ಹ ....ಆಹ..ಹಹ್ ...ಹಹಹಹ!
ಅಂತ ಆವ್ರು ಶುರು ಹಚ್ಚಿಕೊಳ್ಳಲು ನನಗೆ ಭಯ ಆಯ್ತು ಸುತ್ತ ಮುತ್ತ ಕುಳಿತವರು ತಿಂಡಿ ತಿನ್ನೋದು ಕಾಫೀ ಕುಡಿಯೋದು ಮಾತು- ಕಥೆ ಎಲ್ಲ ಬಿಟ್ಟು ನಮ್ಮ ಕಡೆ ದಿಗಿಲಾಗಿ
ಏನಾಯು?
ಎಂತಾಯ್ತು?
ಅಂತ ನನ್ನೆಡೆ ನೋಡಲು ನಾ ನಲ್ಲ -ನಾ ನಲ್ಲ ಅಂತ ನಾ ಗೋಣು ಆಡ್ಡಡ್ಡ ಆಡಿಸಿದೆ!!
ರ್ರ್ರೀ ವೆಂಕಟೇಶ್ ,ಆ ಗಣೇಶ್ ಅಲ್ಲ ರೀ, ಗಣೇಶ್ ಅಂದ್ರೆ ಮೊದಲು ಎಲ್ರೂ 'ನನ್ನೇ' ನೆನಪಿಸಿಕೊಳ್ಳೋರು ಆ ಮುಂಗಾರು ಮಳೆ ಗಣೇಶ್ ಬಂದಿದೆ ತಡ ಎಲ್ಲೆಡೆ ಅವಂದೇ ಅಲೆ !!
ಎಲ್ರೂ ನನ್ ಮರ್ತು ಸದಾ ಅವಂದೇ ಧ್ಯಾನ!!
ಪ್ಚ್!! ಅಂದ್ರು
ಅಯ್ಯೋ ಹೋಗ್ಲಿ ಬಿಡಿ ಪಾಪ!!
ನಿಮ್ಮದೇ ಎಸ್ಟೋ ವಾಸಿ ,
ಆ ಯಡಿಯೂರಪ್ಪ ಪಾಡು ನೋಡಿದಿರಾ?
ಕೇಳಿದಿರಾ?
ನನ್ನೋಡಿ
ನನ್ನ ಕೇಳಿ
ನನ್ನ ಕೂರ್ಸಿ!!
ಅಂದ್ರೂ ಯಾರು 'ಕ್ಯಾ ರೇ' ಅಂತಿಲ್ಲ ಅಂದೇ:()))
ಹೌದೌದು ಅದೂ ನಿಜವೇ ನಾನೇ 'ಬೆಟ್ಟರ್' ಅಂದ್ರು..
ಅವ್ರ ಜೊತೆ ಮಾತಾಡ್ತಾ ಖುಷಿ ಆಗಿ ಇರಿ ಕಾಫೀ ತರ್ತೀನಿ , ನಿಮಗೆ .......ಗರ್ ಲೆಸ್ಸಾ ? ಅಂದೇ
ಲೆಸ್ಸ?
ಸ್ವಾಮಿ ಫುಲ್ಲ್ ಸಕ್ರೆ ಹಾಕಿಕೊಂಡು ಬನ್ನಿ ನಿಮ್ಮನ್ ನೋಡಿ ನಂಗೆ 'ಸಿಹಿ' ತಿನ್ನಬೇಕು ಆನ್ಸ್ತಿದೆ ಅನ್ನಬೇಕೆ!!
ಕಾಫೀ ತಂದು ಅವ್ರ ಮುಂದೆ ಇಟ್ಟು ಕುಡೀತ ಕೇಳಿದರು, ನಿಮಗೆ ಇನ್ನೂ ಯಾವ -ಯಾವ ಗಣೇಶ್ ಗೊತ್ತು?
ನಂಗೆ ಆ ಗಣೇಶ್ ದೇವರು ಗೊತ್ತು
ಸಂಪದ ಗಣೇಶ್ ಆವ್ರು ಗೊತ್ತು ಆವ್ರು ಬಿಟ್ರೆ ಇನ್ಯಾರೂ ಗಣೇಶ್ ಗೊತ್ತಿಲ್ಲ ಅಂದೇ..
ಓ ನಿಮಗೆ ಒಂದು ವಿಷ್ಯ ಗೊತ್ತಾ? ಕೇಳಿದರು ಅವರು , ಹಾಗೆಯೇ ಮಾತು ಮುಂದುವರೆಸಿದರು
ರೀ ವೆಂಕಟೇಶ್ ಅವ್ರೆ
ನೀವು ಅಧ್ರಸ್ಟ ವ0ತರೂ -ವೆರಿ ಲಕ್ಕಿ ಫೆಲ್ಲೋ ಅಂದ್ರು!!
ಅವ್ರ ಆ ಮಾತಿಗೆ ನಾ ಕಕ್ಕಾ ಬಿಕ್ಕಿ ಆದೆ, ನಾ ಲಕ್ಕಿ ಯಾಕೆ?
ಹೇಗೆ?
ನನ್ನ ಅಚ್ಚರಿ ಕುತೂಹಲ ಕಾತರ ಭರಿತ ನೋಟ ಅವ್ರಿಗೆ ಅರ್ಥ ಆಯ್ತೇನೋ?
ನೋಡಿ
ಆ ರಾಮ ಮೋಹನರು ,
ಮಂಜು ,
ಪಾರ್ಥ ಸಾರಥಿ
ನೀವೂ ಸಹ ಗಣೇಶ್ ರನ್ನ ಕಣ್ಣಲ್ಲಿ ಎಣ್ಣೆ .....ಡು ಹುಡುಕಿದರೂ ಸಿಗದ ಆ ಗಣೇಶ್ ಈಗ ಸ್ವತಹ ನಿಮ್ಮ ಮುಂದೆ ಕುಳಿತಿರುವನು ಅಂದ್ರು..
ಅಃ ಆ!!
ಎನನ್ದ್ರಿ?
ಗಣೇಶ್ ನಮ್ಮ ಸಂಪದ ಗಣೇಶ್ ನೀವೇನಾ?
ಒಮ್ಮೆ ಮೇಲಿಂದ ಕೆಳಗೆ ಅಮೂಲಾಗ್ರ್ವಾಗಿ ನೋಡಿದೆ ,
ಉಹೂ!! ಸಾಧ್ಯವಿಲ್ಲ, ಸಾಧ್ಯವಿಲ್ಲ ನಾ ಗೋಣು ಅಡ್ಡದ್ಡ ಆಡಿಸಿದ್ದು ನೋಡಿ
ಅವರು ರೀ ನಾನೇ ಕಣ್ರೀ ಆ ಗಣೇಶ್ ನಿಮಗೆ ನಂಬಿಕೆ ಬಂದಿಲ್ಲವ? ಅಂದ್ರು...
ನೀವೇ ಗಣೇಶ್ ಅಂತ ನಾ ಹೇಗೆ ನಮ್ಬಲಿ?
ನಾವ್ ಊಹಿಸಿರುವ ಕಲ್ಪಿಸಿಕೊಂಡಿರುವ ಗಣೇಶ್ ನೇ ಬೇರೆ ನೀವೇ ಬೇರೆ ಅಂದೇ!!
ಅಯ್ಯೋ ಅದಾ ವಿಷ್ಯ?
ನೋಡಿ ನಾ ಸಂಪದ ಮಿತ್ರರಿಗೆ ಬೇಕೂಂತಲೇ ನನ್ ಬಗ್ಗೆ ಸುಳ್ಳೆ ಸುಳ್ಳು ದಪ್ಪಗಿದೀನಿ ಅಂದೇ ಅದ್ಕೆ ಅವ್ರೆ ಕಲ್ಪಿಸಿಕೊಂಡು ಇಸ್ತು ದಪ್ಪ ಇರಬಹುದು ಅಸ್ತು ದಪ್ಪ ಇರಬಹುದು ಎತ್ತರಕ್ಕೆ ಇರಬಹುದು ಕುಳ್ಳಕ್ಕೆ ಇರಬಹುದು ಅಂತ ತಾವೇ ಕಲ್ಪಿಸಿಕೊಂಡ್ರೆ ನಾ ಎನ್ ತಾನೇ ಮಾಡಬಲ್ಲೆ?
ನಾ ಏನೋ ತಮಾಷೆಗೆ ಆ ಬಗ್ಗೆ ಓದಿ ನಕ್ಕೂ ಸುಮ್ಮನಾದೆ ಆದರೆ ಈಗ ಪಜೀತಿ ಶುರು ಆತು ನೋಡಿ ಅಂದ್ರು.
ಪಜೀತಿ?
ಯಾವ ಪಜೀತಿ?
ಯಾರಿಗೆ?
ಯಾಕೆ?
ನನ್ನ ಪ್ರಶ್ನೆ
ಅದೇ ರೀ ನಾ ಗಣೇಶ್ ನಾ -ಗಣೇಶ್ ಅಂತ ಸಾರಿ -ಸಾರಿ ಕೂಗಿ -ಕೂಗಿ ಹೇಳಿದರೂ ಯಾರು ನಂಬುತೀಲ್ಲ, ಹೋಗಲಿ ನಮ್ಮ ಪಟ್ಟದ ಶಿಷ್ಯ ಅಂತ ಬಿರುದು ಕೊಟ್ಟು ರಾತ್ರಿಯೆಲ್ಲ ನಿನಗೆ ನಿದ್ದೆ ಬಿಟ್ಟು ನನ್ ಬಗ್ಗೆ ಸಂಸೋಧನೆ ಮಾಡೋ ಹಾಗೆ ಮಾಡಿರುವ ಈ ನಿನ್ನ ಗುರುನ್ನೇ ನೀ ಕಂಡು ಹಿಡಿಯದೇ ಹೋದೆಯ?
ಈಗ ನಾನೇ ಗಣೇಶ್ ಅಂತ ಹೇಗೆ ನಿರೂಪಿಸಲಿ?
ಅದ್ಕೆ ನಾ- ನೋಡಿ ನೀವೇ ಗಣೇಶ್ ಅಂತ ನಾ ಹೇಗೆ ನಮ್ಬಲಿ?
ಸಾಕ್ಷಿ ಏನು?
ಅವರು- ಪ್ಯಾಂಟ್ ಜೇಬಿಂದ ಪರ್ಸು ಒಂದನ್ನ ಕಸ್ಟ ಪಟ್ಟು !! , ಅದೋ ಎರಡು ಕೈ ಹಿಡಿಸುವಸ್ತು ದೊಡ್ಡದು ತೆಗೆಯುವಾಗ ನನಗೋ ಭಯ!! ಅಲ್ಲಿ ಏನು 'ಅಪಾಯಕಾರಿ ಆಯುಧ'ಅಡಗಿಸಿ ಇಟ್ಟಿರುವರೋ ಅಂತ!
ಅದರಿಂದ
ವೋಟರ್ ಕಾರ್ಡು -
ವರದಿಗಾರ -
ಛಾಯಾ ಚಿತ್ರಾಗ್ರಾಹಕ -
ವ್ಯಾಕರಣ ಪಂಡಿತ-
ಕ್ರೀಮಿ ಕೀಟ ವಿಜ್ಞಾನಿ -
ಗೂಡಾಚಾರಿ -
ಮಫ್ತಿ ಪೊಲೀಸು -
ವಕೀಲ!!
ಎಂದೆಲ್ಲ ಇದ್ದ ಗುರುತು ಕಾರ್ಡು ಅದರಲ್ಲಿನ ಗಣೇಶ್ -ವಯಸ್ಸು ಎಂದೆಲ್ಲ ಇರುವದು ತೋರ್ಸಿದಾಗ ನಾ ಬೆಚ್ಚಿದೆ ಬೆವರಿದೆ !!
ಯಾಕೆ?
ಮತ್ತೆ ಒಂದೇ ವ್ಯಕ್ತಿ 'ಅದೆಲ್ಲ' ಹೇಗೆ ಆಗಿರಲು ಸಾಧ್ಯ?
ನಾ ಅನುಮಾನದಿಂದ ನೋಡಲು 'ಅವರು' ನೋಡಿ ಇದು ಒಂದು ಗುಟ್ಟಿನ ವಿಚಾರ ನಾ ಯಾರಿಗೂ ಹೇಳೂ ಹಾಗಿಲ್ಲ, ಟಾಪ್ ಸೀಕ್ರೇಟ್ ನೀವು ಟಾಪ್ ಸೀಕ್ರೇಟ್ ಆಗಿ ಇಟ್ ಬಿಡಿ ಅಂದ್ರೂ!!
.ಅದ್ಕೆ ಬಿಡಿ
ಸ್ಸಾರ್!
ಯಾರ್ಯರೋ ಬಂದು ನಾ ಗಣೇಶ್ -
ನಾ ಗಣೇಶ್ ಅಂತ ಹೇಳಿದ್ರೆ
ಏನೇನೋ ತೋರ್ಸಿದ್ರೆ ನಾವ್ ನಂಬಬೇಕಾ?
ನಿಮ್ಗೆ ಬಕ್ರಾ ಮಾಡೋಕೆ ಯಾರು ಸಿಗಲಿಲ್ಲವೇ?
ನಮ್ಮ ಗಣೇಶ್ ಅಣ್ಣ ಹಾಗೆಲ್ಲಾ ಯಾರಿಗೂ 'ಈಜಿ' ಆಗಿ ಸಿಗೋಲ್ಲ, 'ಅಮೇರೀಕಾ ಅದ್ಯಕ್ಷರನ್ ಬೇಕಾರೇ ಅಪಾಯಿಂಟ್ -ಆಯಿಂಟ್ ಮೆಂಟು -ಪೆಪ್ಪರ್ ಮಿಂಟು'
ಇಲ್ಲದೇ ನೋಡಬಹುದು!!
ಆದರೆ ನಮ್ ಗಣೇಶ್ ಅಣ್ಣ 'ತಾವಾಗೇ' ಎದುರು ಬರುವವರೆಗೆ ಯಾರಿಗೂ ಅವರನ್ನ ನೋಡಲು ಆಗೋಲ್ಲ ಎದುರು ಬಂದ್ರೂ ಗುರುತಿಸಲು ಆಗೋಲ್ಲ ಎಂದೆ...
ನಿಂದೊಳ್ಳೇ ಕಥೆ ಆಯ್ತಲ್ಲ ಮಾರಾಯ!!
ನಾನೇ ಗಣೇಶ್ ಅದ್ಕೆ ನಿನಗೆ ಈ ಹೊಟೆಲ್ನಲ್ಲಿ ಅಚಾನಕ್ಕಾಗಿ ಸಿಕ್ಕು ನೀನು .....ಕೀ ಅಂತ ಹೇಳಿದ್ದು , ನಾ ಇದುವರೆಗೂ ಯಾರಿಗೂ ಸಿಕ್ಕಿಲ್ಲ, ನಿನಗೂ ಸಿಗುತ್ತಿದ್ದಿಲ್ಲ ಆದರೆ ನೀ ನನ್ ಬಗ್ಗೆ ಮಾಡಿದ ಸಂಶೋಧನೆ ನನ್ ಬಗೆಗಿನ
ಕಾಳಜಿ -
ಪ್ರೀತಿ-
ಅಕ್ಕರೆ- ಸಕ್ಕರೆ
ಎಲ್ಲ ನೋಡಿ ಹೃದಯ ತುಂಬಿ ಬಂದು ಈಗ ಸತ್ಯ ಹೇಳುತ್ತಿರುವೆ..
ನನ್ನಂಬು-ನನ್ನಂಬು -ನಾ ಗಣೇಶ್ -ನಾ ನೇ ಗಣೇಶ್ ಅಂದ್ರು!!
ನೋಡಿ ಸ್ವಾಮಿ ನೀವ್ಯಾರೋ ಗೊತ್ತಿಲ್ಲ, ನಮ್ ಗಣೇಶ್ ಅಣ್ಣ ಬಹು ಒಳ್ಳೆಯ 'ಪ್ರಾಮಾಣಿಕ ಮನುಷ್ಯರು' , ಹಾಗೆಲ್ಲಾ ಆವ್ರು ಇತರರಿಗೆ 'ಅನ್ಯಾಯ ' ಮಾಡಿ ,ನನ್ನೊಬ್ಬನಿಗೆ ತಮ್ಮ 'ದರ್ಶನ' ಭಾಗ್ಯ ಕೊಡೋಲ್ಲ, ನೀವೇ ಗಣೇಶ್ ಅಂತ ನಾ ನಂಬಬೇಕು ಅಂದ್ರೆ?
ನಂಬಬೇಕು ಅಂದ್ರೆ ? ಆವ್ರು ತುರ್ತಿಗೆ ಕೇಳಿದರು
ನಂಬಬೇಕು ಅಂದ್ರೆ!
ಅದ್ನೆ ನಂಬಬೇಕು ಅಂದ್ರೆ ಏನು ಮಾಡಬೇಕು?
ನಾ ನಂಬಬೇಕು ಅಂದ್ರೆ?
ರೀ ಆವಾಗಿಂದ ನಂಬಬೇಕು ಅಂದ್ರೆ
ನಂಬಬೇಕು ಅಂದ್ರೆ ಅಂತಾ ರಾಗ ಹಾಡ್ತಾ ಇದೀರಲ್ಲ, ಬೇಗ ಹೇಳೀರಿ
ಏನು ಮಾಡಬೇಕು ? ಅಂದ್ರೂ ಸಿಟ್ ಇಂದ.:((
ನಂ ಗಣೇಶ್ ಅಣ್ಣ ಹಾಗೆಲ್ಲಾ ಸಿಟ್ ಆಗೋಳ್ಳವಲ್ಲ ನನ್ನ ಮಾತು ಕೇಳಿ
:ವದನ - ಸೌಮ್ಯ ವದನ ಆಯ್ತು!!
ಸ್ಸರಿ ಈಗ ಹೇಳಿ ಏನು ಮಾಡಬೇಕು?
ನಾ ನಾವ್ - ನೀವೇ ಗಣೇಶ್ ಅಣ್ಣ ಅಂತ ನಂಬಬೇಕು ಅಂದ್ರೆ
ಅಂದ್ರೆ ಅಂದ್ರೆ ಅಂದ್ರೆ
ನೀವು ಮುಂದಿನ 'ವಾಕ್ ಪಥ ' ಕ್ಕೆ ಬರಬೇಕು ನಾವೆಲ್ಲ( ರಾಮ ಮೋಹನರು- ಮಂಜು ಅಣ್ಣ- ಪ್ರಸನ್ನ- ಜಯಂತ್-ಪಾರ್ಥ ಸಾರಥಿ ಆವ್ರು-ಹೆಗ್ಡೆ ಆವ್ರು
ಮತ್ತಿತರರು ನಿಮ್ಮನ್ನು ಎಲ್ಲ ವಿಧವಾಗಿ 'ಪರೀಕ್ಷಿಸಿ ಪ್ರಾಮಣಿಸಿ' ಆಗ ನಿಮ್ಮನ್ನು 'ನೀವೇ' ನಮ್ಮ ಗಣೇಶ್ ಅಣ್ಣ ಅಂತ ಒಪ್ಪಿಕೊಳ್ಳುವೆವು ಅಂದೇ!! :(( :()))
ಈ ಅನಿರೀಕ್ಷಿತ ಅಘಾತದಿಂದ ಅವರು ತತ್ತರಿಸಿ
ಓ! ನನ್ ಪ್ರೀತಿಯ ಶಿಷ್ಯ ಏನಿದು ಘೋರ ಪರೀಕ್ಷೆ?
ನೀ ನನ್ನ ಇಂತ ಘೋರ ಪರೀಕ್ಷೆಗೆ ಒಡ್ಡೂವೆಯ?
ಛೇ ಛೇ ನಾ ಸದಾ ಯಾರಿಗೂ 'ಕಾಣಿಸದೇ' ಇರಬೇಕು ಅಂತ ಅಂದುಕೊಂಡವ್ನ್ ಈಗ ನನ್ನ ಇಂತಾ ಸಂದಿಗ್ಧತೆಗೆ ತಂದೆಯಾ?
ಆಯ್ತು ನಾ ಯೋಚಿಸುವೆ-
ಆಮೇಲೆ ಹೇಳುವೆ
ನನಗೂ 'ಅನ್ನಿಸಿದರೆ' ವಾಕ್ ಪಥಕ್ಕೆ ಬರುವೆ,
ನಿಮ್ಮೆಲ್ಲರನ್ನ ನೋಡುವೆ ಅಂದ್ರೂ...
ಹಾಗೆ ಎದ್ದು ಮತ್ತೆ ಸಿಗುವ ಅಂತ ಹಿತವಾಗಿ ಕೈ ಕುಲುಕಿ 'ಕಾಫೀ ಬಿಲ್ಲು' ನನ್ ಕೈಗೆ ಕೊಟ್ಟು ಹೋದರು .................
ಅವರ ಹಿಂದೆಯೇ ಓಡಿದೆ
ಅವರ ಮನೆಯನ ನೋಡಿ 'ರೆಡ್ ಹ್ಯಾಂಡ್' ಆಗಿ ಎಲ್ರೂ ಅಟ್ಯಾಕ್ ಮಾಡಿ ಹಿಡಿಯೋಣ ಅಂತ!! ಆದ್ರೆ ಹೊಟೆಲ್ ಇಂದ ಆಚೆ ಹೋದವರು ಕ್ಷಣ ಮಾತ್ರದಲ್ಲಿ ಮಾಯಾ!!
ಈ ಯಪ್ಪ 'ಅದೃಶ್ಯ ಪ್ರವೀಣ' ಇರಬೇಕು ಅಂತ ನಾ ಅಂದುಕೊಂಡೆ...:()))
ಮತ್ತೆ ನಮಗೆ 'ವಾಕ್ ಪಥದಲ್ಲಿ' ಸಿಕ್ಕರೂ ಸಿಕ್ಕಾರೂ - ಬಂದರೂ ಬಂದಾರೂ ಅಂತ ಯೋಚಿಸುತ್ತಾ ನಾ ರೂಮ್ ದಾರಿ ಹಿಡಿದೆ..
ಆವ್ರು ಬರ್ತಾರೆಯೇ?
ಸಿಗ್ತಾರೆಯೇ?
ಕಾದು ನೋಡಿ
ಈಗ ವಿರಾಮ !!!!
ಚಿತ್ರ ಮೂಲಗಳು :
http:// www.pics4news.com
ದೇವೆ ಗೌಡರು ಸಂಕ್ರಾಂತಿಯಂದು (14th January 2011) ಹಳ್ಳಿ ಮನೆಗೆ ಬಂದು 'ಸಂಕ್ರಾಂತಿ ಸ್ಪೆಶಲ್ ' ಊಟ ಮಾಡಿದ್ದು-
ಅವರು ಊಟ 'ಹೇಗೆ' ಮಾಡುತ್ತಾರೆ ಅಂತ ಜನ ಬಿದ್ದು ಬಿದ್ದು ನೋಡಿದ್ದು (ಮೇಲೆಮೇಲೆ):()))
http://bangalore.citizenmatters.in/ ಹಳ್ಳಿ ಮನೆ -೧
http://www.world66.com/ ಹಳ್ಳಿ ಮನೆ -೨
http://laurenlavoie.com/tag/malleswaram ಹಳ್ಳಿ ಮನೆ ತಿಂಡಿ ಚಿತ್ರ
http://shravaniarts.blogspot.in/ ಗಣೇಶ್ ಚಿತ್ರ
Comments
ಉ: ಅಯ್ಯೋ!! ನಾನೇ ರ್ರೀ ಗಣೇಶ್ !! ...............
In reply to ಉ: ಅಯ್ಯೋ!! ನಾನೇ ರ್ರೀ ಗಣೇಶ್ !! ............... by partha1059
ಉ: ಅಯ್ಯೋ!! ನಾನೇ ರ್ರೀ ಗಣೇಶ್ !! ...............
In reply to ಉ: ಅಯ್ಯೋ!! ನಾನೇ ರ್ರೀ ಗಣೇಶ್ !! ............... by venkatb83
ಉ: ಅಯ್ಯೋ!! ನಾನೇ ರ್ರೀ ಗಣೇಶ್ !! ...............
In reply to ಉ: ಅಯ್ಯೋ!! ನಾನೇ ರ್ರೀ ಗಣೇಶ್ !! ............... by ಗಣೇಶ

In reply to ಉ: ಅಯ್ಯೋ!! ನಾನೇ ರ್ರೀ ಗಣೇಶ್ !! ............... by kavinagaraj

In reply to ಉ: ಅಯ್ಯೋ!! ನಾನೇ ರ್ರೀ ಗಣೇಶ್ !! ............... by sathishnasa
ಉ: ಅಯ್ಯೋ!! ನಾನೇ ರ್ರೀ ಗಣೇಶ್ !! ...............
In reply to ಉ: ಅಯ್ಯೋ!! ನಾನೇ ರ್ರೀ ಗಣೇಶ್ !! ............... by venkatb83
ಉ: ಅಯ್ಯೋ!! ನಾನೇ ರ್ರೀ ಗಣೇಶ್ !! ...............
In reply to ಉ: ಅಯ್ಯೋ!! ನಾನೇ ರ್ರೀ ಗಣೇಶ್ !! ............... by ಗಣೇಶ
ಉ: ಅಯ್ಯೋ!! ನಾನೇ ರ್ರೀ ಗಣೇಶ್ !! ...............
In reply to ಉ: ಅಯ್ಯೋ!! ನಾನೇ ರ್ರೀ ಗಣೇಶ್ !! ............... by sathishnasa
ಉ: ಅಯ್ಯೋ!! ನಾನೇ ರ್ರೀ ಗಣೇಶ್ !! ...............
ಉ: ಅಯ್ಯೋ!! ನಾನೇ ರ್ರೀ ಗಣೇಶ್ !! ...............
In reply to ಉ: ಅಯ್ಯೋ!! ನಾನೇ ರ್ರೀ ಗಣೇಶ್ !! ............... by Jayanth Ramachar

In reply to ಉ: ಅಯ್ಯೋ!! ನಾನೇ ರ್ರೀ ಗಣೇಶ್ !! ............... by makara