ನನ್ನವಳ ಪ್ರೀತಿ

ನನ್ನವಳ ಪ್ರೀತಿ

ಕವನ

ಚಂದ್ರನ ಕೇಳಿದೆನಾ
ಕಂಡಿರುವೆಯ ನನ್ನವಳಪ್ರೀತಿ,
ಬರಡಾದ ಬಾಳಿಗೆ
ಹಸಿರಾಗುವ ರೀತಿ.

ಇದು ಬರಿಪ್ರೀತಿಯಲ್ಲ
ಅಕ್ಷಯ ಪಾತ್ರೆ ,
ಸವಿದಷ್ಟು ತೀರದು
ಅವಳೊ೦ದಿಗಿನ ಬಾಳ ಯಾತ್ರೆ.

ಮರೆಸುವುದು ನೋವನ್ನ
ಅವಳ ಆಲಿಂಗನ
ತುಂಬುವುದು ಚೈತನ್ಯ
ಅವಳ ಚುಂಬನ.

ಚಂದ್ರ ಹೇಳಿದ ನನಗೆ
ನನ್ನ ಬೆಳದಿಂಗಳಾಣೆ,
ನಿನ್ನವಳ ಪ್ರೀತಿಯನು
ಬೇರೆಲ್ಲೂ ನಾ ಕಾಣೆ.
 

Comments