ಡೊಂಗಿ ದಾಸರು

ಡೊಂಗಿ ದಾಸರು

ಡೊಂಗಿ ದಾಸರಿವರು
ಕಲಿಯುಗ ಡೊಂಗಿದಾಸರಿವರು

ಹಣೆಯಲಿ ಉದ್ದುದ್ದ ನಾಮವ ತೀಡುತ
ಪರಹಿತ ಚಿಂತನೆ ಬಾಯಲಿ ಹಾಡುತ
ಮನದಲಿ ಲೋಭದ ಸ್ವಾರ್ಥದಿ ತೇಲುತ
ಒಳಗೊಂದು ಹೊರಗೊಂದು ಕಾಯಕ ಚರಿಸುವ

ಡೊಂಗಿ ದಾಸರಿವರು...

ನಡೆಯಂತೆ ನುಡಿಯದು ಇರಬೇಕೆನ್ನುತ
ನಡೆ ನುಡಿ ಇಬ್ಬಗೆ ತುಂಬಿ ತೋರುತ
ಮಾತಿನ ಅರಮನೆ ಬೆರಗನು ಮೆರೆಸುತ
ಬಾಳಿನ ತತ್ವವ ಗಾಳಿಗೆ ತೂರುವ

ಡೊಂಗಿದಾಸರಿವರು,....

ಕಾಮ ಕಾಂಚಣ ಮೋಹ ಮನದಿತುಂಬಿಟ್ಟು
ಕಾಷಾಯ ಕಾವಿಯ ಉಡುಗೆ ಮೇಲುಟ್ಟು
ಅಡಿಗಡಿಗಾಚಾರ ವಿಚಾರ ಹೇಳುತ
ಲೋಕದಿ ಮಂದಿಯ ಬೆರಗುಗೋಳಿಸುವ

ಡೊಂಗಿದಾಸರಿವರು....

ನಾಯಕ ನಾ ತಾನೆನ್ನುತ ಮೆರೆಯುತ
ಸೇವೆಯ ಕಾಯಕ ಸಂಪೂರ್ಣ ಮರೆಯುತ
ಮಾನವತೆಯ ಪರಿಪೂರ್ಣತೆ ತೊರೆಯುತ
ಗೋಮುಖ ವ್ಯಾಗ್ರದ ಚಹರೆಯ ತೋರುವ

ಡೊಂಗಿದಾಸರಿವರು.....







 

Rating
No votes yet

Comments