ಶ್ರೀನಂದನ ಯುಗಾದಿ ಶುಭಾಶಯಗಳು

ಶ್ರೀನಂದನ ಯುಗಾದಿ ಶುಭಾಶಯಗಳು

ಚಿತ್ರ

ಚೈತ್ರದ ಚಿಗುರ ಚಿತ್ತಾರಕೆ ಶಿಶರ ನಾಂದಿಯ ಹಾಡಲು

ಚೂತ(ಮಾವು)ವನ ಚಿಗುರಿ ನಲವಿಂದ ನಳನಳಿಸುತಿರಲು

ಕೋಕಿಲವು ಹರ್ಷದಿಂ ಕುಹೂ ಕುಹು ಎಂದಿಹುದು

ಮಲ್ಲಿಗೆಯು ಬಿರಿದು ಸೌರಭವನೆಲ್ಲಡೆ ಹರಡಿಹುದು

ಹೊಂಗೆ ಹೂಗೊಂಚಲಲಿ ಝೇಂಕಾರ ಕೇಳುತಿಹುದು

ಶ್ರೀಖರನು ಕಾಳದಿನಗಳ ತನ್ನೊಡನೆ ಕರೆದೊಯ್ದಿಹನು

ಶ್ರೀ ನಂದನನು ಸಮೃದ್ಧಿಯ ನೀಡಲೆಂದು ಬರುತಿಹನು

ನವ ಚೈತನ್ಯದಿಂ ಒಂದಾಗಿ ನವ ಸಂವತ್ಸರವ ಸ್ವಾಗತಿಸುವ

ಋತುರಾಜ ವಸಂತನನುಗ್ರಹವ ಪಡೆದು ಉತ್ಸಾಹದಿಂ

ಬೇವು ಬೆಲ್ಲವ ಮೆದ್ದು ಯುಗಾದಿಯ ಆಚರಿಸುವ

ಹಳೆ ಕೊಳೆಯ ಕಳೆದು ಹೊಸ ಕಳೆಯ ತಳೆದು

ಸಾಧನೆಯ ಹಾದಿಯಲಿ ಸಾಗಿ ಯಶವ ಗಳಿಸುವ

 

ಎಲ್ಲರ ಸೌಖ್ಯವನು ಬಯಸುತ

ಎಲ್ಲರಿಗೂ ಅಭಿಷ್ಟಗಳೂ ಈಡೇರಲೆಂದು ಬಯಸುತ

ಎಲ್ಲರಿಗೂ ಉಗಾದಿ ಶುಭಾಶಯಗಳು

ಎ. ಪದ್ಮ

 

Rating
No votes yet

Comments