ನವಚೈತನ್ಯದ ಯುಗಾದಿಯ ಆಶಯ

ನವಚೈತನ್ಯದ ಯುಗಾದಿಯ ಆಶಯ

ಚಿತ್ರ

ಶ್ರೀಖರನ ಭರದಿಂ ಹಿಂದೆ ಸರಿಸಿ ಸಂಕಷ್ಟಗಳ ಕಳೆಯೆ
ಶ್ರೀನಂದನ ಓಡೋಡಿ ಬಂದಿದೆ ಸಂತಸವ ತಂದಿದೆ
ಚೈತ್ರದ ಚಿತ್ತಾರದೊಂಡನೆ ವಸಂತನಾಗಮನವಾಗಿದೆ
ಹೊಸ ವರ್ಷಕೆ ಹೊಸ ಹರ್ಷವ ತಾನೆಲ್ಲಡೆ ಹರಡಿದೆ
ನವ ಚಿಗುರಲಿ ನವ ಸಂತಸದ ಪರಿಮಳವ ಬೀರಿದೆ
ತಳಿರನುಂಡ ಕೋಕಿಲ ಕುಹೂ ಕುಹೂ ನಾದಗೈದಿದೆ
ಮರಗಿಡಗಳಲಿ ಝೇಂಕಾರದ ಭೃಂಗದಾಟ ಮೆರೆದಿದೆ
ಮಾವು ಬೇವು ತೋರಣದಿ ಬೆರೆತು ಕಳೆಯ ನೀಡಿದೆ
ಬೇವಿನೊಡನೆ ಬೆಲ್ಲ ಬೆರೆಸಿ ಸವಿವ ಉಗಾದಿ ಬಂದಿದೆ
ನೋವ ಮರೆತು ನಲವಿನಿಂದ ಕೂಡಿ ಬಾಳಿರೆಂದಿದೆ
ನವಚೈತನ್ಯದಿಂದೆಲ್ಲರೊಂದಾಗಿ ಯಶವಗಳಿಸಿರೆಂದಿದೆ

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ
ಸರ್ವಾರಿಷ್ಟವಿನಾಶಾಯ ನಿಂಬಕಂ ದಳಭಕ್ಷಣಂ

ಬೇವು ಬೆಲ್ಲತಿಂದು ಒಳ್ಳೆಕಾರ್ಯಗಳಿಗೆ ಸಜ್ಜಾಗಿರೆನುತ
ಶ್ರೀನಂದನ ಯುಗಾದಿಗೆ ಸಂಪದಬಳಗದವರೆಲ್ಲರಿಗೂ 
ಶುಭಾಶಯಗಳನ್ನು ಕೋರುವ
 ಎ. ಪದ್ಮ

 

Rating
No votes yet

Comments