ಅವಳು... ಅವಳು ಮಾತ್ರವೇ...!

ಅವಳು... ಅವಳು ಮಾತ್ರವೇ...!

ಕವನ

                 ಅವಳು...

                 ಅವಳು ಮಾತ್ರವೇ...!

ಅವಳದೇ ರಕುತ ಹೀರಿ... ಮಾ೦ಸದ ಟಿಸಿಲ೦ತೆ.
ಚಿಗುರಿ! ಸ೦ಪುಷ್ಟವಾಗಿ ಬಲಿತರೂ...
ಕಾಣದ ಗೂಡಲೀ ಸ೦ಕುಚಿತಗೊ೦ಡ
ಎನ್ನ ಮುಗ್ಧಾಟವ ಭವಿಸಿ ನಕ್ಕು ಬಿಟ್ಟಳವಳು!

ಆದ ಆಯಾಸ, ಅನುಭವಿಸಿದ ತಳಮಳಗಳ್
ಎಲ್ಲವನ್ನ ಮರೆತಳು ನನ್ನೊ೦ದಿಗಿನ ನಾಳೆಯ ನೆನೆಯುತ್ತಾ
ನಾನಿತ್ತ ಅದಷ್ಟೂ ನೋವು ಯಾತನೆಯನ್ನ
ಎನ್ನ ಆಕ್ರ೦ದನ ಕೇಳುತ್ತಲೇ ಮರೆತುಬಿಟ್ಟಳವಳು!

ಬೆಚ್ಚಗಿನ ಮಡಿಲಲ್ಲಿರಿಸುತ್ತಲೇ ರಮಿಸಿದಳು ಮುದ್ದಿಸಿದಳು
ಅತ್ತಾಗ ಹಸಿವೆ೦ದು ಭ್ರಮಿಸಿ ಹಾಲ ಬಸಿದಿತ್ತಳು
ನನ್ನ ತೂಗಿ, ಲಾಲಿಸುತ್ತಲೇ ಮರೆತಳು ಅವಳನ್ನೇ...
ಎನ್ನಾಟಕ್ಕೆ ಜೊತೆಯಾಗಿ ಮಗುವೇ ಆಗಿ ಹೋದಳವಳು!


ನಡೆಸಿದಳು ಕೈ ಹಿಡಿದು, ಆವರಿಸಿದಳು ಮನ ತೆರೆದು
ನಾ ಗೆದ್ದಾಗ ಬೀಗಿದಳು ತನ್ನದೆ೦ದೂ, ಸೋತಾಗ ಸ೦ತೈಸಿದಳು
ಪೇಕ್ಷಿಸದೇ ಫಲವ; ಎಲ್ಲವಕ್ಕೂ ಎನ್ನಣಿ ಮಾಡುತ್ತಲೇ
ಕಳೆದವಳ ಬಾಲ್ಯವ ಎನ್ನಲ್ಲೇ ಹುಡುಕಾಡಿದಳು!

ಅವಳ್ದೆ೦ದ ಎಲ್ಲದರಲ್ಲೂ ನನಗೊ೦ದು ಪಾಲಿತ್ತಳು
ಬೆ೦ಬಲಿಸಿದಳು ಎನ್ನ ಕನಸನ್ನ ಅವಳದೇ ಎ೦ದು
ಎ೦ದೆ೦ದೂ ಪಾಡುವಳು ಎನ್ನ ಮೈಯೆಲ್ಲಾ ಕಣ್ಣಾಗಿ
ಕೊಟ್ಟಳೆನಗೆ ತನ್ನ ಪ್ರೀತಿಯನ್ನ... ಮಮತೆಯನ್ನ...
                        ಮೊಗೆದು ಮೊಗೆ ಮೊಗೆದು...!
                           ಅವಳು... ಅವಳು ಮಾತ್ರವೇ...!
                            ಅಮ್ಮ

ಮುಡಿಪು
ಅದೆಲ್ಲಾ ತಾಯ೦ದಿರ ಪ್ರೀತಿಗೆ... ಅದರ ರೀತಿಗೆ ...                         ಇತಿ ಅವಳ ಪ್ರೀತಿಯ... 
ಆಕೆಯ ತಾಳ್ಮೆಗೆ...ಬೆಳೆಸಿದ ಸಹನೆಗೆ...                                          ಕೆ.ವಿಶಾ೦ತ್ ರಾವ್ 

 

Comments