"ಮಾಯಾ ಮೃಗ" ಮರಳಿ ಮೂಡಿದಾಗ....

"ಮಾಯಾ ಮೃಗ" ಮರಳಿ ಮೂಡಿದಾಗ....

ಎಲ್ಲಿಂದಲೋ ಹಾರಿ ಬಂತೊಂದು ಬಂಗಾರದ ಜಿಂಕೆ. ನೋಡು ನೋಡುತ್ತಲೇ ಹಾರಿ ಹೋಯಿತು. ಸೀತೆಯ ಮನಸ್ಸಿನಲ್ಲಿ ಆ ಜಿಂಕೆಯನ್ನು ಮುದ್ದಾಡುವ ಆಸೆ ಮೂಡಲು, ರಾಮನು ತನ್ನ ಸತಿಯ ಇಛ್ಛೆ ಪೂರೈಸಲು ಆ ಮಾಯಮೃಗದ ಬೆನ್ನಟ್ಟಿ ಓಡಿದನು....

ಇದೇನು ರಾಮಾಯಣದ ಕಥೆ ಶುರು ಮಾಡಿದೆ ಅನ್ಕೊಂಡ್ರಾ??? ಇಲ್ಲ, ಇಲ್ಲ, ಇದು ಕೆಲವು ವರ್ಷಗಳ ಹಿಂದೆ ಟಿ.ಎನ್.ಸೀತಾ"ರಾಮ" ಹೇಳಿದ "ಮಾಯಾ ಮೃಗ"ವೆಂಬ ಧಾರಾವಾಹಿಯ‌ ಕಥೆ. ಇದು ಎಷ್ಟೊಂದು ಮನೆಯ "ಸೀತೆ"ಯರ ಮನ ಅಪಹರಿಸಿತ್ತು ಅಲ್ಲವೆ? ಇದು ಮರು ಪ್ರಸಾರವಾದರೆ ಎಷ್ಟು ಚೆನ್ನ? ಈ "ಮಾರೀಚ"ನ ಕೂಗು ಟಿ.ಎನ್.ಸೀತಾ"ರಾಮ"ರವರ ಕಿವಿಗೆ ಕೇಳಿಸುವಂತಾಗಲಿ....

-ಬಾchi - www.sumneblog.com

Rating
No votes yet

Comments