ಆದರ್ಶ ಈ ದೇಹ
ಕವನ
ಈ ದೇಹ ಒಂದು ಭಿನ್ನ; ಭಿನ್ನ ಅಂಗ ಸಮೋಹ
ಭಿನ್ನ ಅಂಗ ಕಾಯಕದ ಪಾರದರ್ಶಿಕೆ,
ಚ್ಯುತಿ ಇಲ್ಲದ ನಿಪುಣತೆ , ಒಂದಕೊಂದು ಸಾಮ್ಯತೆ,
ಈ ದೇಹ ರಕ್ಷಣೆಗೆಂದು,
ಮಿದುಳೋಂದು ದೇಹ ನಿರ್ವಾಹಕ,
ಅಂಗಗಳ ನಿಯಂತ್ರಕ, ನಿರೋಪಕ,
ಶ್ವಾಸಕೊಂದು ಕೋಶ, ಉಸಿರಾಟದ ನಿವೇಶಕ
ಹೃದಯವೊಂದು ಭಾವಾತ್ಮಕ, ರಕ್ತಚಲನೆಯ ಸಂಯೋಜಕ,
ಜಟರವೊಂದು ಪಾಚಕ, ಆಹಾರ ಪಚನದ ಸಾಧಕ,
ಪಿಂಡ ಎರಡು, ಶುಚಿತ್ವದ ಕರಡು,
ಕಲ್ಮಶ ನಿರ್ವಾಹಕ , ವಿತರಕ,
ಆರೋಗ್ಯ ಸುಧಾರಕ, ರಕ್ಷಕ,
ಈ ದೇಹ ಅತ್ಯಾಮೂಲ್ಯ
ಸಂಭಂದ ನಿರ್ವಾಹಕ, ಸಮೋಹ ಪ್ರಜ್ನ್ಯಯ ಸಾಧಕ.
ನನಗಿದು ಭೋದಕ, ಸಾಮಾಜಿಕ ಪ್ರಜ್ನೆಯ ಪ್ರೇರಕ.
ಸುರಕ್ಷಿತ ಸಮಾಜದ ಸಂವೇದಕ.
ಭಿನ್ನ ಭಿನ್ನ ಕಸಬುಗಳ ಬೆನ್ನಲ್ಲಿ
ಭಿನ್ನ ಭಿನ್ನ ಜಾತಿ ಪಂಗಡಗಳ ಒಡಕಿನಲ್ಲಿ,
ನರಳುವವರಿಗಿದು ಒಂದು ಆದರ್ಶ,
ಸಂಘರ್ಷದ ಬದುಕಿಗೊಂದು ಪರಾಮರ್ಶ.
ಪಾರದರ್ಶಿಕ ಆದರ್ಶ...............
.
Comments
ಉ: ಆದರ್ಶ ಈ ದೇಹ
ಉ: ಆದರ್ಶ ಈ ದೇಹ
In reply to ಉ: ಆದರ್ಶ ಈ ದೇಹ by makara
ಉ: ಆದರ್ಶ ಈ ದೇಹ
ಉ: ಆದರ್ಶ ಈ ದೇಹ