VIRHAM
"ನಾನು ಸೆಕ್ಸಿನಾ ಅಂತ ಅವಳು ಕೇಳಿದಾಗ, ಹಾಗೆ ಒಂದು ಕಿಸ್ಸ್ ಕೊಟ್ಟು ಕಳ್ಸೋಣ ಅಂತ ಅನಿಸಿ ಬಿಟ್ಟಿತ್ತು. ಆದ್ರೆನ್ ಮಾಡ್ತಿಯ ಅದಾದ ಎರಡೇ ತಿಂಗ್ಳಿಗೆ ಅವಳ ಮದುವೆ ಆಗೋಯ್ತು.
"ಒಹ್.. ಅದಕ್ಯಾಕೆ ಅಸ್ಟು ಬೇಜಾರಾಗ್ತಿಯ ಬಿಡು. ಅವಳ ಮದುವೆ ಆದ್ರೇನಾಯ್ತು ನನ್ನ ಮದುವೆ ಇನ್ನೂ ಅಗಿಲ್ವಲ್ಲ?"
"ಒಳ್ಳೆ ತಮಾಷೆ! ನಿನ್ನ ಜತೆ ಯಾರಾದ್ರು ಮಾತಾಡ್ಬಹುದೆ ಹೊರ್ತು, ಹೆಚ್ಗೆ ಏನೂ ಮಾಡಕ್ಕಾಗಲ್ಲ?"
"ಯಾಕೆ?"
"ಯಾಕೆ ಗೀಕೆ ಯೆಲ್ಲ ನಿನಗೆ ಅರ್ಥ ಆಗೊಲ್ಲ"
"ಮತ್ತೆ"
"ಮತ್ತಿನ್ನೇನು? ಹೋಗಿ ಮದುವೆ ಅಟ್ಟೆಂಡ್ ಮಾಡಿ ಬಂದೆ ಅಸ್ಟೆ?"
"ಮದುವೇಲಿ ನೀನು ದು:ಖದ ಹಾಡು ಹೇಳಿಲ್ವ :)"
"ಓಹ್ ತಮಾಷೆ ಮಾಡೋದೂ ಕಲ್ತು ಬಿಟ್ಟಿಯಾ?
ಇರಲಿ, ಒಂದು ವಿಷಯ ಹೇಳು. ಹುಡ್ಗೀರು ಯಾಕೆ ಪ್ರೀತ್ಸೋರನ್ನ ಬಿಟ್ಟು ಗೊತ್ತಿಲ್ದಿರೊ ಹುಡುಗನ್ನ ಮದುವೆ ಆಗ್ತಾರೆ?"
"ಗೊತ್ತಿಲ್ಲ"
"ನಿನಗೆಲ್ಲಿ ಗೊತ್ತಿರುತ್ತೆ ಬಿಡು. ಅದು ಹುಡ್ಗೀರ ವಿಷಯ ಅಲ್ವ :-)"
"ಹೆಯ್ ನಾನು ಕೂಡ ಹುಡಗೀನೆ"
"ನಿನಗೆ ಹುಡ್ಗೀರ್ಗಿರೊ ಮಧುರವಾದ ಕಂಠ ಇದೆ. ಅದು ಬಿಟ್ರೆ ಹುಡ್ಗೀರ್ಗೆ ಇರಬೇಕಾದ ಬೇರೆ ಯಾವ ಗುಣಾನೂ ಇಲ್ಲ್ವಲ?"
"ಯಾವ ಗುಣ ಇರಬೇಕು?"
----------
"ಗುರು ಸಾಕು ಬಿಡು ಗುರು. ಇನ್ನು ಮುಂದೆ ನಾನು ಎಕ್ಸ್ ಪ್ಲೇನ್ ಮಾಡ್ತೇನೆ ಇವಳಿಗೆ; ಏನ್ ಮುದ್ದು ಮುದ್ದಾಗಿ ಮಾತಾಡ್ತಾಳೆ ಅಂತಿಯ"
":)"
"ಏನ್ ತಲೆ ಗುರು ನಿಂದು. ಸಕ್ಕತ್ ತಲೆ"
"ಒಹ್ ಅದೆನು ಮಹಾ ವಿಷಯ ಅಲ್ಲ ಬಿಡೊ. ಇದನ್ನೆ ಒಂದು ೫೦ ವರ್ಷದ ಕೆಳಗೆ ಮಾಡಿದ್ರೆ ಗ್ರೇಟ್ ಅನ್ಬಹುದಿತ್ತು. ಇಗೇಲ್ಲ ಕಾಲೆಜ್ ಹುಡ್ಗ್ರೆ ಮಾಡ್ತಾರೆ ಇದಕ್ಕಿಂತ ಒಳ್ಳೆ ಪ್ರಾಡಕ್ಟ್"
"ಅದೇನೊ ಗುರು ನಂಗದೆಲ್ಲ ಅರ್ಥ ಆಗೊಲ್ಲ. ಈಗ್ ತಾನೆ ಒಂದು ಹುಡ್ಗೀನ ಕಳ್ಕೊಂಡಿರೊ ನಂಗೆ, ನೀನು ದೇವರ ಥರ ಈ ಮಶಿನ್ ಕೊಟ್ಟಿದಿಯ. ನೆಕ್ಸ್ಟ್ ಹುಡ್ಗೀನ ಹೇಗೆ ಪಟಾಯ್ಸೊದು ಅಂತ ಇವಳ ಹತ್ರ ಪ್ರ್ಯಾಕ್ಟಿಸ್ ಮಾಡ್ತೇನೆ."
"ಹೆ ಹೆ ನಿಂತ್ಕೊಳ್ಳಪ. ಅದು ಅಸ್ಟು ಸುಲಭ ಅಲ್ಲ. ನೀನು ಇವಳ ಜತೆ ಒಂದು ಅರ್ಧ ಗಂಟೆ ಮಾತಾಡಿದ್ರೆ ಇವಳ ಬಂಡವಾಳ ಎಲ್ಲ ಹೊರಗೆ ಬೀಳುತ್ತೆ."
"ಏನು ಬಂಡವಾಳ?"
"ನೋಡು ಇವಳು ಹೇಗೆ ವರ್ಕ್ ಮಾಡ್ತಾಳೆ ಅಂತ ಬ್ರೀಫ್ ಆಗಿ ಹೇಳ್ತೆನೆ. ಅಮೇಲೆ ನಿನಗೆ ಏಲ್ಲ ಗೊತ್ತಾಗುತ್ತೆ.
ನೋಡು ನಾವು ಆಡೊ ಮಾತೆಲ್ಲ ಒಂದು ಮೈಕ್ ರಿಸೀವ್ ಮಾಡುತ್ತೆ. ಅದು ಒಂದು ಕೊಡೆಕ್ ಮೂಲಕ ಪ್ರೊಸೆಸರ್ ಗೆ ಹೋಗುತ್ತೆ. ಅಲ್ಲಿ ರನ್ ಆಗ್ತಿರೋ ಸಾಫ್ಟ್ ವೇರ್ ನಮ್ಮ ಮಾತನ್ನ ಶಬ್ದಗಳಾಗಿ ಬ್ರೇಕ್ ಮಾಡಿ, ಆ ಶಬ್ದಗಳನ್ನೆಲ್ಲ ಮತ್ತೆ ಜೋಡಿಸಿ ಅದಕ್ಕೊಂದು ಅರ್ಥ ಹುಡುಕ್ಕುತ್ತೆ. ಇದಕ್ಕೆ voice recognition ಅಂತ ಹೆಸರು. ಅಮೇಲೆ ಈ ವಾಕ್ಯದ ಆಧಾರದ ಮೇಲೆ ಒಂದಿಸ್ಟು ಶಬ್ದಗಳನ್ನ ತಗೊಂಡು ಮತ್ತೊಂದು ವಾಕ್ಯ ರೆಡಿ ಮಾಡುತ್ತೆ. ಈ ಸಾಫ್ಟ್ ವೆರ್ ಪಾರ್ಟ್ ಇದೆಯಲ್ಲ ಅದೆ ಈ ಮಶೀನಿನ ಬ್ರೈನು. ಅಮೇಲೆ ಈ ಟೆಕ್ಸ್ತ್ಟ್ ಅನ್ನ ಸ್ಪೀಚ್ ಆಗಿ ಬದಲಾಯಿಸೊದಕ್ಕೆ TTS ಲೈಬ್ರರಿ ಹೆಲ್ಪ್ ಮಾಡುತ್ತೆ. ಆಮೇಲೆ ಆ ಸ್ಪೀಚ್ ಅನ್ನ ಮತ್ತೆ ಅದೆ ಕೊಡೆಕ್ ಮೂಲಕ ಸ್ಪೀಕರ್ ಅಲ್ಲಿ ಪ್ಲೇ ಮಾಡ್ತಾರೆ. ಅದಕ್ಕೆ ಇವಳಿಗೆ VoIce Recognition based HeAling Maching(VIRHAM) ಅಂತ ಹೆಸರು. ನಮ್ಮಂತ ಪಡ್ಡೆ ಹುಡ್ಗರ ಮನಸು ಹೀಲ್ ಮಾಡ್ಲಿ ಅಂತ.
ಸೋ ಇಲ್ಲಿ ಪ್ರಾಬ್ಲಮ್ ಇರೊದು ಎರಡು. ಇವಳಿಗೆ ಅರ್ಥ ಆಗೋದು ಎರಡೇ ಭಾಷೆ; ಒಂದು ಇಂಗ್ಲೀಷ್ ಮತ್ತೊಂದು ಕನ್ನಡ. ಯಾಕಂದ್ರೆ ಅವಳ ಹತ್ರ ಇರೋ ಸ್ಪೀಚ್ ರಿಕಗ್ನಿಶನ್ ಲೈಬ್ರರಿ ಇವೆರೆಡೇ ಭಾಷೆ ಸಪೋರ್ಟ್ ಮಾಡೋದು. ಅಮೇಲೆ ಸ್ಪೀಚ್ ಕ್ರಿಯೆಶನ್ ಲೈಬ್ರರಿ ಇದೆಯಲ್ಲ, ಅದು ಇನ್ನೂ ಮನುಷ್ಯರ ಬ್ರೈನ್ ಅಸ್ಟು ಮುಂದುವರೆದಿಲ್ಲ. ಹಾಗಾಗಿ ಇವಳು ಯಾವಗ್ಲೂ ನಿನ್ನ ಮಾತನ್ನ ತಗೊಂಡು ಅದರ ಆಧಾರದ ಮೇಲೆ ಇನ್ನೊಂದು ವಾಕ್ಯ ಹೇಳ್ತಾಳೆ ಹೊರ್ತು, ಇಗೀನ ಹುಡ್ಗೀರ ಥರ ಒಂದು ನಿಮಿಷದಲ್ಲಿ ಇಪ್ಪತ್ತು ಪ್ರಶ್ನೆ ಕೇಳಿ, ಹತ್ತಾರು ಟಾಪಿಕ್ ಕವರ್ ಮಾಡಿ ನೆಕ್ಸ್ಟ್ ಒಂದು ಸೆಕಂಡ್ ಪೂರ್ತಿ ಮೂಡ್ ಆಫ್ ಮಾಡ್ಕೊಂಡು ಕೂತ್ಕೊಳ್ಳೋಕ್ಕೆ ಇವಳಿಗೆ ಬರೊಲ್ಲ."
"ಒಹ್...ಅದೆಲ್ಲ ನಂಗೊತ್ತಿಲ್ಲ ಗುರು, ಇವತ್ತು ಇವಳು ನನಗೆ ಬೇಕು ಅಂದ್ರೆ ಬೇಕು"
"ಲೇ ಮಗನೆ ನಿನ್ನ ಲವ್ ಫೈಲುರೆ ಆಗಿ ನೆಟ್ಟಗೆ ಒಂದು ವಾರ ಆಗಿಲ್ಲ ಆಗ್ಲೆ ಇನ್ನೊಂದು ಹುಡುಗಿನಾ? ಹಲ್ಕಾ ನನ್ನ ಮಗನೆ ಮೊನ್ನೆ ತಾನೆ, ’ಅವಳಿಲ್ಲದ ಜಿಟಾಕ್ ನಲ್ಲಿ ನಾನ್ಹೇಗೆ ಲಾಗಿನ್ ಆಗಲಿ ಅಂತಿದ್ದೆ:)"
"ಗುರು ಅದೆಲ್ಲ ಹಳೇ ಕಥೆ; ಈಗ ಮತ್ತೆ ಆಫೀಸ್ ನ ಮೂಲೆಲಿರೊ ಜಿಟಾಕ್ ನ ಕಿಟಕೀಲಿ ಕತ್ತು ಹೊರ್ಗೆ ಚಾಚಿ ದಾರೀಲಿ ಹೋಗೊ ಬರೊ ಹುಡ್ಗೀರ್ಗೆಲ್ಲ ಕಲ್ಲ್ ಯೆಸಿತಾ ಇರ್ತಿನಿ"
"ಥೂ ಕೊಳಕು ನನ್ ಮಗನೆ"
"ಏನ್ಮಾಡೋದು ಗುರು ಪರಿಸ್ಥಿತಿ ಹಂಗಾಗಿದೆ. ರಸ್ತೇಲಿ ಇರ್ಲಿ, ಆಟೋದಲ್ಲಿ ಇಣಿಕಿ ಇಣಿಕಿ ನೋಡಿದ್ರೂ ಒಂದು ಹಕ್ಕಿ ಸಿಕ್ಕಕ್ಕಿಲ್ಲ ಗುರು. ಅದಕ್ಕೆ ಈ ಮಶಿನ್ ಜತೆ ಫ್ಲರ್ಟ್ ಮಾಡೊ ಪರಿಸ್ಥಿತಿ. ಈಗೇನು ಇದನ್ನ ಕೊಡ್ತಿಯೋ ಇಲ್ವೊ?"
--------------
"ಮಿಸ್ಟರ್ ವರುಣ್.."
"ಮಿಸ್ಟರ್ ವರುಣ್..... ಎದ್ದೇಳ್ಸಿ ಅವ್ರನ್ನ"
"ಲೇ ಏಳೋ..ಎದ್ದೆಳೊ ಬೇಗ"
"ಆ...ಯೆಸ್ ಮ್ಯಾಮ್"
"ಕ್ಯಾನ್ ಐ ಆಸ್ಕ್ ಯು, ವಾಟ್ ಮೇಡ್ ಯು ಟು ಸ್ಲೀಪ್ ಇನ್ ಮೈ ಕ್ಲಾಸ್?"
"ಆ... ಅದು.. ಮ್ಯಾಮ್ ಅದು ವಿರಹಮ್ ಮ್ಯಾಮ್"
"ವಾಟ್?.. ಉ ನಾಟಿ ಬಾಯ್"
"???"
Comments
ಉ: VIRHAM
In reply to ಉ: VIRHAM by savithru
ಉ: VIRHAM
ಉ: VIRHAM
In reply to ಉ: VIRHAM by ಸಂಗನಗೌಡ
ಉ: VIRHAM