ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೧
ಓಂ ಶ್ರೀ ಗಣೇಶಾಯ ನಮಃ
ಎಲ್ಲ ಮಾರ್ಗಗಳು ನಿನ್ನನ್ನು ತೋರುತ್ತವೆ!
ತ್ರಯೀ ಸಾಙ್ಖ್ಯಂ ಯೋಗಃ ಪಶುಪತಿಮತಂ ವೈಷ್ಣವಮಿತಿ
ಪ್ರಭಿನ್ನೇ ಪ್ರಸ್ಥಾನೇ ಪರಮಿದಮದಃ ಪಶ್ಯಮಿತಿ ಚ!
ರುಚೀನಾಂ ವೈಚಿತ್ರ್ಯಾದೃಜುಕುಟಿಲನಾನಾಪಥಜುಷಾಂ
ನೃಣಾಮೇಕೋ ಗಮ್ಯಸ್ತ್ವಮಸಿ ಪಥಸಾಮರ್ಣವ ಇವ!!
त्रयी साङ्ख्यं योगः पशुपतिमतं वैष्णवमिति
प्रभिन्ने प्रस्थाने परमिदमदः पश्यमिति च!
रुचीनां वैचित्र्यादृजुकुटिलनानापथजुषां
नृणामेको गम्यस्त्वमसि पथसामर्णव इव!!
ವಿಭಿನ್ನ ಮಾರ್ಗಗಳು ವೇದ, ಸಾಂಖ್ಯ, ಯೋಗ ಹಾಗೂ ಶೈವ ಮತ್ತು ವೈಷ್ಣವ ಕೃತಿಗಳಲ್ಲಿವೆ. ಅವುಗಳಲ್ಲಿ ಕೆಲವರು ಒಂದನ್ನು ಅನುಸರಿಸಿದರೆ ಕೆಲವರು ಮತ್ತೊಂದನ್ನು ಉನ್ನತವೆಂದು ಅನುಸರಿಸುತ್ತಾರೆ. ಭಕ್ತರು ತಮ್ಮ ಗುಣಕ್ಕನುಸಾರವಾಗಿ ಈ ವಿಭಿನ್ನವಾದ, ನೇರ ಅಥವಾ ಡೊಂಕಾದ ಮಾರ್ಗಗಳನ್ನು ಅನುಸರಿಸುತ್ತಾರೆ. ಆದರೂ ಓ ಈಶ್ವರನೇ ಎಲ್ಲ ನದಿಗಳಿಗೆ ಸಾಗರದಂತೆ, ನೀನೊಬ್ಬನೆ ಅಂತಿಮ ಗುರಿ .
-ಶಿವ ಮಹಿಮ್ನಾಃಸ್ತೋತ್ರ - ೭
ಮುನ್ನುಡಿ
"ಒಬ್ಬ ಹಿಂದೂ ಎಲ್ಲಾ ಕಾರ್ಯಗಳನ್ನೂ ಒಳ್ಳೆಯದಿರಲಿ ಅಥವಾ ಕೆಟ್ಟದ್ದಿರಲಿ ಅವನು ಅದನ್ನು ಧಾರ್ಮಿಕವಾಗಿಯೇ ಮಾಡುತ್ತಾನೆ!" ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ಅಂದರೆ ಧರ್ಮವೆನ್ನುವುದು ಅವನ ರಕ್ತದಲ್ಲಿಯೇ ಇದೆ ಎನ್ನುವುದು ಇದರರ್ಥ. ಆದರೆ ಹಿಂದೂ ಧರ್ಮ ಎನ್ನುವುದು ಕೇವಲ ಕೆಲವೊಂದು ಪದ್ಧತಿ ಮತ್ತು ಕುರುಡು ನಂಬಿಕೆಗಳ ಆಧಾರದ ಮೇಲೆ ನಿಂತಿರುವ ಬಾಹ್ಯಾಚರಣೆಯ ಗೊಡ್ಡು ಕಂತೆಯಲ್ಲ. ಪ್ರತಿಯೊಂದು ಆಚರಣೆಯ ಹಿನ್ನಲೆಯಲ್ಲಿಯೂ ಸಾವಿರಾರು ವರ್ಷಗಳಿಂದ ಪ್ರಚಲಿತದಲ್ಲಿರುವ ಶ್ರುತಿ ಅಥವಾ ವೇದಗಳಲ್ಲಿ ಪ್ರತಿಪಾದಿಸಲ್ಪಟ್ಟಿರುವ ಗಹನವಾದ ತತ್ವಗಳ ಭದ್ರ ಬುನಾದಿಯಿದೆ. ಪ್ರತಿಯೊಬ್ಬ ಪೌರಾಣಿಕ ಋಷಿ ಹಾಗೂ ತತ್ವಶಾಸ್ತ್ರಜ್ಞನಾದವನು ಅದು ಗೌತಮ ಅಥವಾ ಕಪಿಲನಾಗಲಿ; ಅಥವಾ ಜೈಮಿನಿ ಇಲ್ಲಾ ಬಾದರಾಯಣ ವ್ಯಾಸನಿರಲಿ - ಇವರೆಲ್ಲರೂ ಕಠಿಣತಮ ತಪಗಳನ್ನಾಚರಿಸಿ ವೇದಗಳ ಆಧಾರದ ಮೇಲೆ ತನಗೆ "ದರ್ಶನ"ವಾದ ಅಥವಾ ಗೋಚರವಾದ ಸತ್ಯಗಳ ಕುರಿತು ತಮ್ಮ ತಮ್ಮ ತತ್ವಗಳನ್ನು ಭೋದಿಸಿದ್ದು. ಇವೇ ಹಿಂದೂಗಳೆಲ್ಲರಿಗೂ ಇಂದು ಪರಿಚಯವಿರುವ "ಷಡ್ದರ್ಶನ"ಗಳು ಅಥವಾ ಆರು ದರ್ಶನಗಳು.
ಈ ಆರು ದರ್ಶನಗಳು ಸತ್ಯಾನ್ವೇಷಣೆಯ ವಿವಿಧ ಮಾರ್ಗಗಳನ್ನು ಅನುಸರಿಸಿದರೂ ಕೂಡ ಅವೆಲ್ಲವುಗಳಲ್ಲಿ ಒಂದು ಏಕತೆಯಿದೆ ಅದೇನೆಂದರೆ - ಮಾನವನ ಅಂತಿಮ ಗುರಿ ಏನು ಎಂಬುದರ ಕುರಿತಾಗಿ. ಅದು ಮಾನವನನ್ನು ದುಃಖ ಅಥವಾ ಯಾತನೆಯಿಂದ ಮುಕ್ತಗೊಳಿಸಬೇಕೆನ್ನುವುದು ಮತ್ತು ಅತ್ಯುನ್ನತ ಆನಂದವನ್ನು ಹೊಂದಬೇಕೆಂಬುದು ಹಾಗೂ ಅದನ್ನು ಹೇಗೆ ಪಡೆಯಬೇಕೆನ್ನುವ ವಿಧಾನವನ್ನು ಕುರಿತಾಗಿದೆ. ಇದನ್ನೇ ಒಟ್ಟಾರೆಯಾಗಿ ಹೇಳಬೇಕೆಂದರೆ ಅಂತಿಮ ಸತ್ಯದ ಜ್ಞಾನ ಅಥವಾ "ತತ್ವಜ್ಞಾನ"ವನ್ನು ಪಡೆಯಬೇಕೆನ್ನುವುದೇ ಎಲ್ಲ ದರ್ಶನಗಳ ಅಂತಿಮ ಗುರಿಯಾಗಿತ್ತು. ಆದ್ದರಿಂದ ಈ ಅಂತಿಮ ಸತ್ಯದ ದರ್ಶನವೇ ಹಿಂದೂಗಳ ತತ್ವವೆಂದು ನಾವು ಹೇಳಬಹುದು ಮತ್ತು ಈ ಆರು ವಿಧಾನಗಳು ಅದನ್ನು ಹೊಂದುವ ವಿವಿಧ ಮಾರ್ಗಗಳು ಎನ್ನಬಹುದು. ಆದ್ದರಿಂದ ಈ ವಿವಿಧ ಮಾರ್ಗಗಳನ್ನು ಮತ್ತು ಅವುಗಳು ಪ್ರತಿಪಾದಿಸಿದ ವಿಧಾನದ ಆಧಾರದಿಂದ ಅವನ್ನು "ನ್ಯಾಯ ದರ್ಶನ", "ಸಾಂಖ್ಯ ದರ್ಶನ" ಮುಂತಾದವುಗಳಾಗಿ ಕರೆಯಬಹುದು.
ಡಾ! ಸರ್ವೇಪಲ್ಲಿ ರಾಧಾಕೃಷ್ಣನ್, ಸುರೇಂದ್ರನಾಥ್ ದಾಸ್ಗುಪ್ತ ಮತ್ತು ಎಂ. ಹಿರಿಯಣ್ಣನಂತಹ ಹಲವಾರು ಮೇಧಾವಿಗಳು ಮತ್ತು ಹೆಚ್ಚು ಪರಿಚಿತರಲ್ಲದ ಆದರೆ ಪ್ರಬುದ್ಧರಾಗಿರುವ ಹಲವಾರು ಪಂಡಿತರು "ಷಡ್ದರ್ಶನ"ಗಳು ಅಥವಾ ಆರು ದರ್ಶನಗಳ ಕುರಿತಾಗಿ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಆದರೆ ಅವೆಲ್ಲವುಗಳೂ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಥವಾ ತತ್ವಶಾಸ್ತ್ರವನ್ನು ಆಳವಾಗಿ ತಿಳಿದುಕೊಳ್ಳಬೇಕೆನ್ನುವವರಾಗಿ ಮೀಸಲಾಗಿವೆ.
ಈ ಕಿರುಹೊತ್ತಿಗೆಯು ಮೂಲಭೂತವಾಗಿ ಹೆಚ್ಚು ಓದಿಲ್ಲದ ಆದರೆ "ಷಡ್ದರ್ಶನ"ಗಳ ಕುರಿತಾಗಿ ಸಾಮಾನ್ಯ ತಿಳುವಳಿಕೆಯನ್ನು ಹೊಂದಲು ಬಯಸುವ ಜನಸಾಮನ್ಯನಿಗಾಗಿ ಬರೆಯಲ್ಪಟ್ಟಿದೆ. ಅವನಿಗೆ ಈ ಪುಸ್ತಕ ಹಿಡಿಸಿದರೆ ನಮ್ಮ ಶ್ರಮ ಸಾರ್ಥಕವಾದಂತೆ.
-ಸ್ವಾಮಿ ಹರ್ಷಾನಂದ
ವಿ.ಸೂ.: ಇದು ಸ್ವಾಮಿ ಹರ್ಷಾನಂದ ವಿರಚಿತ The six systems of Hindu Philosophy ಯಲ್ಲಿಯ ಮುನ್ನುಡಿಯ ಅನುವಾದದ ಭಾಗ.
ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೨ (೧) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.
http://sampada.net/blog/%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%A8-%E0%B3%A7/24/03/2012/36104
Comments
ಉ: ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೧
In reply to ಉ: ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೧ by makara
ಉ: ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೧
In reply to ಉ: ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೧ by padma.A

In reply to ಉ: ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೧ by ಭಾಗ್ವತ
ಉ: ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೧
ಉ: ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೧
In reply to ಉ: ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೧ by ಗಣೇಶ
ಉ: ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೧
In reply to ಉ: ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೧ by venkatb83
ಉ: ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೧
In reply to ಉ: ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೧ by ಗಣೇಶ
ಉ: ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೧
ಉ: ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೧
In reply to ಉ: ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೧ by Jayanth Ramachar
ಉ: ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೧
ಉ: ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೧
In reply to ಉ: ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೧ by swara kamath
ಉ: ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೧