ಈ ಸಂಭಾಷಣೆ!
ಆಫೀಸಿನಲ್ಲಿ ಒಂದು ದಿನ ...
ಹೀಗೇ, ಊಟದ ಟೇಬಲ್’ನಲ್ಲಿ ಊಟ ಕತ್ತರಿಸುತ್ತ ಕೂತಿದ್ದೆ ... ಬೇರೆ ಬೇರೆ ದಿಕ್ಕುಗಳಿಂದ, ಬ್ಯಾಗ್ ಹಿಡಿದು ಅಲ್ಲಿಗೆ ಬಂದ ಇಬ್ಬರ ನಡುವೆ ನೆಡೆದ ಸಣ್ಣ ಸಂಭಾಷಣೆಯ ಎಳೆಗೆ ನನ್ನದೊಂದಿಷ್ಟು ಒಗ್ಗರಣೆ ಹಾಕಿ ಕರಿದು ಹುರಿದು ಮಾಡಿದ ಅವಲಕ್ಕಿ ನಿಮ್ಮ ಮುಂದೆ :-)
ಪಾತ್ರಧಾರಿಗಳು ಹರೆಯದವರಾದ್ದರಿಂದ ’ಹುಡುಗ’ ಹುಡುಗಿ’ ಎಂದೇ ಕರೆಯೋಣ
ಹುಡುಗ: ಹಾಯ್!
ಹುಡುಗಿ: ಹೇಯ್! ಏನ್ ತಂದಿದ್ದೀಯೋ?
ಹುಡುಗ: ಉಪ್ಪಿಟ್ಟು
ಹುಡುಗಿ: ಕಾಂಕ್ರೀಟಾ?
ಹುಡುಗ: ಬೇರೆ ಏನೂ ಕಾಣಲಿಲ್ಲ. ರೆಫ್ರಿಜಿರೇಟರ್’ನಲ್ಲಿ ಹಿಂದೆ ಅವಿತು ಕುಳಿತಿತ್ತು. ಡಬ್ಬಿಗೆ ಹಾಕಿಕೊಂಡು ಬಂದೆ.
ಹುಡುಗಿ: ಯಾವತ್ತಿಂದೋ!
ಹುಡುಗ: ತಿಂದ ಮೇಲೆ ಏನೂ ಆಗದೆ ಇದ್ರೆ, ತುಂಬಾ ಹಳೇದೇನಲ್ಲ! ಇರಲಿ, ನೀನೇನು ತಂದಿದ್ದೀಯ?
ಹುಡುಗಿ: ಹೋದ ವಾರ ಯಾವುದೋ ಪಾರ್ಟಿಯಲ್ಲಿ ಕೊಟ್ಟಿದ್ದ ಪುಲಾವ್
{ಇಬ್ಬರೂ ಒಂದೊಂದು ಮೈಕ್ರೋ ವೇವ್’ನಲ್ಲಿ ತಮ್ಮ ಆಹಾರ ಬಿಸಿ ಮಾಡಿಕೊಂಡು ನನ್ನಿಂದ ಕೊಂಚ ದೂರದ ಟೇಬಲ್ ಬಳಿ ಕೂತರು}
ಹುಡುಗ: ಅಯ್ಯೋ! ಈ ಉಪ್ಪಿಟ್ಟು ವಾಸನೆ ಬರ್ತಿದೆ!
ಹುಡುಗಿ: self suicide ಮಾಡಿಕೊಂಡಿರಬೇಕು. ಆಗೋ ಅಷ್ಟು ತಿನ್ನು. ಬೇಕಿದ್ರೆ ನಾನು ....
ಹುಡುಗ: ಅಯ್ಯೋ ಬೇಡ ... ಮಿಕ್ಕಿದ್ದನ್ನ ನೀನ್ಯಾಕೆ ತಿನ್ನಬೇಕು? ...
ಹುಡುಗಿ: ನಿನ್ ಎಂಜಲು ನಾನ್ಯಾಕೆ ತಿನ್ನಲಿ? .... ನಾನು ಹೇಳ್ತಿದ್ದಿದ್ದು ’ಬೇಕಿದ್ರೆ ನಾನು ಸ್ವಲ್ಪ ಪುಲಾವ್ ಕೊಡ್ತೀನಿ’ ಅಂತ ...
ಹುಡುಗ: ಓ! ಮೊದಲು ತಿಂದು ನೋಡ್ತೀನಿ ... ಥ್ಯಾಂಕ್ಸ್!
ಹುಡುಗಿ: ನೆನ್ನೆ ಸಂಜೆ ಹೊರಡೋ ಮುಂಚೆ ಇನ್ನೂ ಕೂತ್ಕೊಂಡ್ ಕೀಬೋರ್ಡ್ ಕುಟ್ಟುತ್ತಾ ಇದ್ದೀ?
ಹುಡುಗ: ಬೆಳಿಗ್ಗೆ ಇಂದ ಒಂದು production issue ಗಲಾಟೆ ನೆಡೀತಿತ್ತು. ಸಂಜೆ ಏಳಕ್ಕೆ ಒಂದು ಹಂತಕ್ಕೆ ಬಂತು. ಆಮೇಲೆ ಎಲ್ಲರಿಗೂ ಅಪ್ಡೇಟ್ ಕಳಿಸಿ ಹೊರಡೋಕ್ಕೆ ಎಂಟು ಘಂಟೆ ಆಯ್ತು. ಅಲ್ಲಾ, ಮನೆ ಹತ್ತಿರ ನಿನ್ ಕಾರು ಕಾಣಲೇ ಇಲ್ಲ? ನಿಂದೂ ಲೇಟ್ ಆಯ್ತಾ?
ಹುಡುಗಿ: ಲೇಟ್ ಅಂದ್ರೆ ಆರು ಘಂಟೆಯಾಗಿತ್ತು. ಮನೇಲಿ ಸ್ವಲ್ಪ ಹೊತ್ತು ಟಿವಿ ನೋಡಿ Gym ಕಡೆ ಹೋದೆ. ಒಂಬತ್ತಕ್ಕೆ ಬಂದು ಊಟ ಮಾಡಿ ಬಿದ್ಗೊಂಡೆ.
ಹುಡುಗ: ಓಕೆ
ಹುಡುಗಿ: ರಾತ್ರಿ ಊಟ ಮಾಡಿದ್ಯೋ ಇಲ್ವೋ?
ಹುಡುಗ: ಬಂದಾಗಲೇ ಭಯಂಕರ ಹಸಿವಾಗಿತ್ತು. ಫ್ರಿಡ್ಜ್’ನಲ್ಲಿ ಚಪಾತಿ ಇತ್ತು. ಬಿಸಿ ಮಾಡಿಕೊಂಡ್ ತಿಂದೆ.
ಹುಡುಗಿ: ಓಕೆ .. ಕಾರು ಕಾಣಲೇ ಇಲ್ಲ ಅಂದ್ಯಲ್ಲ? ಯಾಕೆ? ಏನದ್ರೂ ಹೇಳೋದಿತ್ತಾ?
ಹುಡುಗ: ಹಾಗೇನಿಲ್ಲ ... ಸುಮ್ಮನೆ ಕೇಳ್ದೆ ... ಅದಿರ್ಲಿ, ವೀಕೆಂಡ್ ಏನು ಪ್ಲಾನು ?
ಹುಡುಗಿ: ಮಾಮೂಲಿ ಶಾಪಿಂಗ್ ... ಫ್ರೆಂಡ್ ಪಾರ್ಟಿ ಕೊಡ್ತಿದ್ದಾಳೆ ಅದಕ್ಕೆ ಹೋಗೋದು ... ಅಷ್ಟೇ
ಹುಡುಗ: ಓಹೋ! ಯಾವ ಪುಣ್ಯಾತ್ಮರೋ ಅಮ್ಮಾವ್ರಿಗೆ ಅನ್ನದಾನ ಇಟ್ಕೊಂಡಿರೋದು? ಏನು ಪಾರ್ಟಿ ವಿಶೇಷ?
ಹುಡುಗಿ: ಏನಿಲ್ಲ ... ಮೂರನೇ ಗಂಡನ್ನೂ ಬಿಟ್ಲಂತೆ ... ಅದಕ್ಕೆ ಪಾರ್ಟಿ ... ನಾವೊಂದು ಐಜು ಜನ ಸೇರ್ತೀವಿ.
ಹುಡುಗ: ಬರೀ ರಿಂಗ್ ಬದಲಿಸಿಕೊಂಡು ಮದುವೆ ಆಗೋದ್ರಿಂದ ಹೀಗೆ. ಮೂರು ಘಂಟೆ ಕಾಲ ಹೊಗೆ ಮುಂದೆ ಕೂತು ಮದುವೆ ಮಾಡಿಸಿದರೆ, ಎರಡನೇ ಮದುವೆಗೂ ಹೆದರಬೇಕು ಜನ.
ಹುಡುಗಿ: ಓಹೋ! ನಮ್ ದೇಶದಲ್ಲೂ ಜನ ತುಂಬಾ ಮುಂದುವರೆದಿದ್ದಾರೆ. ಹಿಂದಿನ ಕಾಲದ ರೀತಿ ಅಡಗೂಲಜ್ಜಿಗಳಲ್ಲ!
ಹುಡುಗ: ಅಂದ್ರೇ? ಡಿವೋರ್ಸ್ ಕೊಟ್ರೆ ಮುಂದುವರಿದ ಜನ ಅಂತಾನ? ಸುಮ್ನೆ ಇನ್ನೊಬ್ಬರನ್ನು ನೋಡಿ blind ಆಗಿ follow ಮಾಡೊದು ಅಷ್ಟೇ!
ಹುಡುಗಿ: ಹಲೋ! ಸಾಹೇಬರೇ!! ಸೋಡಾ ಚೀಟಿ ಕೊಟ್ಟಿದ್ದು ಅವಳು, ನಾನಲ್ಲ! ನನಗ್ಯಾಕೆ ಈ ಉಪದೇಶ ಮಾಡ್ತಿದ್ದೀ?
ಹುಡುಗ: ಹೋಗ್ಲಿ ಬಿಡು, ಅಂದ ಹಾಗೇ, ಅಲ್ಲಿಗೆ ಹೋದ ಮೇಲೆ, ಅಯ್ಯೋ ಪಾಪ ಅಂತೀರಾ? ಅಥವ ಏನಂತ ವಿಶ್ ಮಾಡ್ತೀರಾ?
ಹುಡುಗಿ: ಅದೆಲ್ಲ ನಿನಗ್ಯಾಕೆ? ಏನೋ ಮಾಡ್ಕೋತೀವಿ. ನಿಂದೇನು ವೀಕೆಂಡ್ ಪ್ಲಾನು?
ಹುಡುಗ: ಏನಿಲ್ಲ ... ಈ ಶುಕ್ರವಾರ ಸಂಜೆಯಿಂದ ಕಾಲ್’ನಲ್ಲಿ ಇರ್ತೀನಿ. ಯಾವಾಗ ಏನು issue ಬರುತ್ತೋ ಗೊತ್ತಿಲ್ಲ. ಬಂದರೆ ಮುಗೀತು... ಕೈ-ಕಾಲು ಆಡಿಸಲೂ ಪುರುಸೊತ್ತು ಇರೋಲ್ಲ ... ಎಲ್ಲಿಗಾದರೂ ಹೋದ್ರೂ ನೆಮ್ಮದಿ ಇರೋಲ್ಲ.
ಹುಡುಗಿ: ಗೊತ್ತಪ್ಪಾ ಗೊತ್ತು. ಇಬ್ಬರಿಗೂ ಇದೇನೂ ಹೊಸದೇನಲ್ಲವಲ್ಲ?
ಹುಡುಗ: ಓ! ಅಂದ ಹಾಗೆ, ನೀನು ಬೆಳಿಗ್ಗೆ ಬೆಳಿಗ್ಗೆ ರೂಮಿನ ಲೈಟ್ ಹಾಕಿದ್ದಕ್ಕೆ ಎದ್ದುಬಿಟ್ಟೆ ನಾನು. ಆಮೇಲೆ ನಿದ್ದೇನೇ ಬರಲಿಲ್ಲ ನೋಡು.
ಹುಡುಗಿ: ಆ! ಮತ್ತೆ ನಾಲ್ಕೂವರೆಗೆ ಜೋರಾಗಿ ಗೊರಕೆ ಹೊಡೀತಿದ್ದವರು ಯಾರು? ಪಕ್ಕದ್ ಮನೆಯವರ? ನನಗೆ ಬೆಳಿಗ್ಗೆ ನಾಲ್ಕಕ್ಕೆ production release ಇತ್ತು. ಅದಕ್ಕೇ ಬೇಗ ಎದ್ದೆ. ನಿನ್ ಗೊರಕೆ ನಾದ ಕೇಳಕ್ಕೆ ಆಗದೆ ಲ್ಯಾಪ್-ಟಾಪ್ ತೊಗೊಂಡು ಹಾಲ್’ನಲ್ಲಿ ಕೂತ್ಕೊಂಡ್ ಕೆಲಸ ಮಾಡಿದೆ!
ಅವರ ಮಾತು ಇನ್ನೂ ಮುಂದುವರೆದಿತ್ತು ... ನನಗೆ ಸಿಕ್ಕಾಪಟ್ಟೆ ಗೊಂದಲ ಶುರುವಾಯ್ತು ...
ಅದೇ ಸಮಯದಲ್ಲಿ ಹಾದುಹೋದ ಮತ್ತೊಬ್ಬ "ಗಂಡ ಹೆಂಡ್ತಿ ಇಲ್ಲೂ ಜಗಳ ಆಡ್ತಿದ್ದೀರಾ?" ಎನ್ನುತ್ತಾ ಅತ್ತ ಹೋದ !!
Comments
ಉ: ಈ ಸಂಭಾಷಣೆ!
In reply to ಉ: ಈ ಸಂಭಾಷಣೆ! by sathishnasa
ಉ: ಈ ಸಂಭಾಷಣೆ!
ಉ: ಈ ಸಂಭಾಷಣೆ!
In reply to ಉ: ಈ ಸಂಭಾಷಣೆ! by ಗಣೇಶ
ಉ: ಈ ಸಂಭಾಷಣೆ!
In reply to ಉ: ಈ ಸಂಭಾಷಣೆ! by bhalle
ಉ: ಈ ಸಂಭಾಷಣೆ!
In reply to ಉ: ಈ ಸಂಭಾಷಣೆ! by ಗಣೇಶ
ಉ: ಈ ಸಂಭಾಷಣೆ!
ಉ: ಈ ಸಂಭಾಷಣೆ!
In reply to ಉ: ಈ ಸಂಭಾಷಣೆ! by venkatb83
ಉ: ಈ ಸಂಭಾಷಣೆ!
ಉ: ಈ ಸಂಭಾಷಣೆ!
In reply to ಉ: ಈ ಸಂಭಾಷಣೆ! by Jayanth Ramachar
ಉ: ಈ ಸಂಭಾಷಣೆ!
ಉ: ಈ ಸಂಭಾಷಣೆ!
In reply to ಉ: ಈ ಸಂಭಾಷಣೆ! by partha1059
ಉ: ಈ ಸಂಭಾಷಣೆ!
ಉ: ಈ ಸಂಭಾಷಣೆ!
In reply to ಉ: ಈ ಸಂಭಾಷಣೆ! by manju787
ಉ: ಈ ಸಂಭಾಷಣೆ!
In reply to ಉ: ಈ ಸಂಭಾಷಣೆ! by bhalle
ಉ: ಈ ಸಂಭಾಷಣೆ!
In reply to ಉ: ಈ ಸಂಭಾಷಣೆ! by ಗಣೇಶ
ಉ: ಈ ಸಂಭಾಷಣೆ!
In reply to ಉ: ಈ ಸಂಭಾಷಣೆ! by venkatb83
ಉ: ಈ ಸಂಭಾಷಣೆ!
In reply to ಉ: ಈ ಸಂಭಾಷಣೆ! by bhalle
ಉ: ಈ ಸಂಭಾಷಣೆ!
ಉ: ಈ ಸಂಭಾಷಣೆ!
In reply to ಉ: ಈ ಸಂಭಾಷಣೆ! by roopablrao
ಉ: ಈ ಸಂಭಾಷಣೆ!
ಉ: ಈ ಸಂಭಾಷಣೆ!
In reply to ಉ: ಈ ಸಂಭಾಷಣೆ! by makara
ಉ: ಈ ಸಂಭಾಷಣೆ!
In reply to ಉ: ಈ ಸಂಭಾಷಣೆ! by bhalle
ಉ: ಈ ಸಂಭಾಷಣೆ!
In reply to ಉ: ಈ ಸಂಭಾಷಣೆ! by venkatb83
ಉ: ಈ ಸಂಭಾಷಣೆ!
In reply to ಉ: ಈ ಸಂಭಾಷಣೆ! by makara
ಉ: ಈ ಸಂಭಾಷಣೆ!