ಹಂಸವೇಕೆ ಸತ್ತಿತು ?
ಚಿತ್ರ
ದಟ್ಟವಾದ ಅರಣ್ಯದಲ್ಲಿ ಒಂದು ಮರದಲ್ಲಿ ಕಾಗೆಗಳೊಂದಿಗೆ ಒಂದು ಹಂಸವೂ ಬಂದು ಕುಳಿತುಕೊಂಡಿತು. ಆಮರದ ನೆರಳಿನಲ್ಲಿ ಆಯಾಸಗೊಂಡ ಬೇಡನೊಬ್ಬ ಮಲಗಿ ನಿದ್ದೆಮಾಡುತ್ತಿದ್ದ. ಎಲ್ಲೆಡೆಯೂ ಸಹಿಸಲಸಾಧ್ಯ ಬಿಸಿಲು. ಮರದ ಎಲೆಗಳು ಉದುರಿದ್ದರಿಂದ ಮರದ ಕೆಳಗೆ ಮಲಗಿದ್ದ ಬೇಡನ ಮುಖಕ್ಕೆ ಬಿಸಿಲು ಬೀಳುತ್ತಿರುವುದನ್ನು ಕಂಡ ಹಂಸವು ಕನಿಕರಗೊಂಡು ಅವನ ಮುಖಕ್ಕೆ ನೆರಳಾಗುವಂತೆ ತನ್ನ ರೆಕ್ಕೆ ಅಗಲವಾಗಿ ಪಸರಿಸಿತು. ಅದೇ ಸಮಯದಲ್ಲಿ ಮರದ ಮೇಲಿದ್ದ ಕಾಗೆಗಳು ಆ ಬೇಡನ ಮುಖದ ಮೇಲೆ ಹಿಕ್ಕೆ ಹಾಕಿ ಹಾರಿ ಹೋದವು. ಕೂಡಲೇ ಎಚ್ಚರಗೊಂಡ ಬೇಡನು ರೆಕ್ಕೆ ಬಿಚ್ಚಿಕುಳಿತಿರುವ ಈ ಹಂಸವೇ ತನ್ನ ಮೇಲೆ ಹಿಕ್ಕೆ ಹಾಕಿರ ಬಹುದೆಂದು ಊಹಿಸಿ ಅದನ್ನು ತನ್ನ ಬಾಣದಿಂದ ಕೊಂದು ಬಿಟ್ಟ. ಕಾಗೆಗಳೊಂದಿಗೆ ಇದ್ದ ತಪ್ಪಿಗೆ ಪರೋಪಕಾರಿ ಹಂಸ ಪ್ರಾಣಕಳೆದುಕೊಂಡಿತು.
Rating
Comments
ಉ: ಹಂಸವೇಕೆ ಸತ್ತಿತು ?
In reply to ಉ: ಹಂಸವೇಕೆ ಸತ್ತಿತು ? by venkatb83
ಉ: ಹಂಸವೇಕೆ ಸತ್ತಿತು ?
ಉ: ಹಂಸವೇಕೆ ಸತ್ತಿತು ?
In reply to ಉ: ಹಂಸವೇಕೆ ಸತ್ತಿತು ? by ಮಧು ಅಪ್ಪೆಕೆರೆ
ಉ: ಹಂಸವೇಕೆ ಸತ್ತಿತು ?
ಉ: ಹಂಸವೇಕೆ ಸತ್ತಿತು ?
In reply to ಉ: ಹಂಸವೇಕೆ ಸತ್ತಿತು ? by makara
ಉ: ಹಂಸವೇಕೆ ಸತ್ತಿತು ?