ಮುಂದೇನು???.............(ಕಥೆ) ಭಾಗ -೨
ನಮ್ಮ ಕಥಾ ನಾಯಕ ರೈಲು ಹಳಿಗೆ ಅಡ್ಡಲಾಗಿ ಮಲಗಿ ಒಮ್ಮೆ ಎಲ್ಲವನ್ನು ನೆನಪಿಸಿಕೊಂಡ..
------------------------------------------------------------------------------------------------------------
ಕಾಲೇಜಿನ ಪ್ರಥಮ ಪೀ ಯೂ ಸಿ ಪ್ರವೇಶದ ದಿನ ...
ಹೊಸ ಕಾಲೇಜು ಏನೋ?
ಹೆಂಗೋ?
ಅನ್ಜನ್ಜುತ್ತಲೇ ಕಾಲೇಜು ಪ್ರವೇಶಿಸಿದ್ದು, ಹಿರಿಯ ವಿದ್ಯಾರ್ಥಿಗಳು ಅ ಅಲ್ನೋಡ್ರೋ
ಯಾವನೋ ಬಕ್ರ ನ...ಗ ಬತ್ತವ್ನೆ , ಅವ್ನಿಗ್ ಏನೂ ಮಾಡಲು ಹೇಳುವುದು?
ಗುರು ಡ್ಯಾನ್ಸ್ ಮಾಡಿಸಿದರೆ ಹೆಂಗೆ?
ತತ್!! ಡ್ಯಾನ್ಸ್ ಅಂತೆ-
ಅದು 'ಹುಡುಗೀರು' ಮಾಡಿದರೆ ನೋಡಬಹುದು ಅವನಿಗೆ ಹೋಗಿ ಆ 'ವಿನೀತ' ಗೆ ಲವ್ ಲೆಟರ್ ಕೊಡಲುಹೇಳ್ರೋ!!...
ಅತ್ತಿತ್ತ ನೋಡುತ್ತಾ ಬರುತ್ತಿದ್ದ 'ಅವನಿಗೆ' ಒಬ್ಬ ಬಂದು ಧಡ್ದ್ ಅಂತ ಗುದ್ದಿ ,ಬೀಳುತ್ತಿದ್ದವನು ಸಾವರಿಸಿಕೊಂಡು ನಿಂತು, ಸ್ಸಾರಿ ಸ್ಸಾರ್ ಅಂದ!!
ಏನೋ ರಾ ...ಲ್ ಕಣ್ಣು ಕಾಣೋಲ್ಲವ ?
ದೊಡ್ಡ ಹೀರೋನ ನೀ ?
ಯಾವ್ ಕ್ಲಾಸೋ?
ಏನೋ ನಿನ್ನ ಹೆಸರು?
ಬಾ ಬಾ ಅಂತ ಅವನನ್ನ ದರ ದರ ಎಳೆದುಕೊಂಡು ಹೋಗಿ ತಮ್ಮ ಲೀಡರ್ ಮುಂದೆ ನಿಲ್ಲಿಸಿದ,
ಸ್ಸಾರ್ ನಂದೇನು ತಪ್ಪಿಲ್ಲ, ನನ್ ಬಿಟ್ಟು ಬಿಡಿ ಪ್ಲೀಜ್
ಬಿಡ ಬೇಕಾ? ಆಯ್ತು, ನೀ ಒಂದು ಕೆಲಸ ಮಾಡು- ಈ ಲೆಟರ್ ತಗೋ ಅಲ್ಲಿ ಹೋಗಿ ಆ ತಿಳಿ ನೀಲಿ ಡ್ರೆಸ್ ಹಾಕಿರುವ ಹುಡುಗಿಗೆ ಕೊಡು...!!
ಏನು ಸ್ಸಾರ್ ಅದು?
ಅಃ! ಹಾ...ಟಿಕೆಟ್!!
ನಿನಗ್ಯಾಕೋ ಅದೆಲ್ಲ?
ಮು... ಹೋಗಿ ಕೊಡು ಅಸ್ತೆ...
ಇದೊಳ್ಳೆ ಗ್ರಹಚಾರ ಆಯ್ತಲ್ಲ ಮೊದಲ ದಿನವೇ ಅಂತ ತನ್ನ ದುರ್ವಿಧಿ ನೆನಸಿಕೊಳ್ಳುತ್ತಾ ಮುಂದಾಗೋ ಅನಾಹುತವನ್ನಕಲ್ಪಿಸಿಕೊಳ್ಳುತ್ತಾ ಅನಜನ್ಜುತ್ತ ಹೋಗಿ ಎಕ್ಸ್ಕುಸ್ ಮಿ ಅಂದ
ಅವಳು ಇತ್ತ ತಿರುಗಿದ ಕೂಡಲೇ ಅವಳ ಸೌಂದರ್ಯ ನೋಡುತ್ತಾ ನಿಂತಲ್ಲೇ ಕರಗಿ ನೀ....ಗಿ
ವಾಹ್ವ್! ಎಂತ ಚೆಲುವು?
ಸೂಪರ್ !!
ಮನದಲ್ಲಿ ಹೇಳಿಕೊಂಡ,
ಏನು ಬೇಕು? ಅವಳ ಪ್ರಶ್ನೆ
ಏನಿಲ್ಲ - ಅವರು ಈ ಲೆಟರ್ ನಿಮಗೆ ಕೊಡಲು ಹೇಳಿದರು...!!!
ಅವನು ಆ ಹಿರಿ ವಿದ್ಯಾರ್ಥಿಗಳು ನಿಂತಿದ್ದತ್ತ ಕೈ ತೋರಿಸಿದ ಕಡೆ 'ಅವಳು' ನೋಡಿದರೆ ಏನಿದೆ ಅಲ್ಲಿ??
ಇವನು ಆ ಹುಡುಗಿ ಹತ್ತಿರ ಬಂದು ಆ ಲೆಟರ್ ಕೊಟ್ಟ ಕೂಡಲೇ ಅವರು ಎಸ್ಕೇಪ್!!
ಏನು?
ಏನಿದೆ ಅಲ್ಲಿ?
ಯಾರು ಕೊಡ ಹೇಳಿದರು?
ಅಂತ ಅವಳು ಹೇಳಿದ್ದು ಕೇಳಿ ಇವನು ಅತ್ತ ನೋಡಿದರೆ!!
ನಿಜವಾಗಲೂ ಅವರೇ ಹೇಳಿದರು ನಾ ಕೊಟ್ಟೆ...
ಅದನ್ನು ತೆಗೆದು ನೋಡದೆಲೆ ಹರಿದು ಹಾಕಿ ಒಮ್ಮೆ ಇವನತ್ತ ನೋಡಿ
ಕಾಲೇಜಿಗೆ ಹೊಸಬನ?
ಅವ್ರು ಸೀನಿಯರ್ಸ್ ಹೊಸ ವಿದ್ಯಾರ್ಥಿಗಳಿಗೆ ಹೇಗೆ ಆಟ ಆಡಿಸೋದು ಅವರ ಚಾಳಿ,
ಪಾಪ್!! ನೀ ಅವ್ರ ಕೈಗ್ಗೆ ಸಿಕ್ಕಿದೆಯ, ಹೋಗು ನಿನ್ನ ಕ್ಲಾಸ್ ಗೆ, ಇನ್ನೊಮ್ಮೆ ಹೀಗೆಲ್ಲ ಮಾಡಿದರೆ ಅಸ್ಟೇ!!!
ಅಂತ ಹೇಳ್ತಾ- ಬನ್ರೆ ಕ್ಲಾಸ್ ಗೆ ಹೋಗೋಣ ಹೊತಾಯ್ತು,
ರ್ರೀ ರೀ ಸ್ವಲ್ಪ ಇರಿ, ಇಲ್ಲಿ ಪಸ್ಟ್ ಇಯರ್ ಸೈನ್ಸ್ ಕ್ಲಾಸ್ ಯಾವ್ದುದು?
ಅದೋ ಅಲ್ಲಿ ಕಾಣಿಸುತ್ತಿದೆಯಲ್ಲ ಕೊನೆ ರೂಂ ಅದೇ,
ಅವನು ಹೊರಡಲು ಅಣಿ ಆಗುತ್ತಿದ್ದಂತೆ -ನಿಲ್ಲು ಏನು ನಿನ್ನ ಹೆಸರು?
ಹಾ!! ನನ್ನ ಹೆಸರು ನನ್ನ ಹೆಸರು, ಯಾಕೆ?
ತೊಳೆದುಕೊಂಡು ಕುಡಿಯೋಕೆ!! :())
ಯಾಕೆ ಅಂದ್ರೆ ಸುಮ್ನೆ ಹಾಗೆ !!
ಹೆಸರು ಕೇಳೋದು ತಪ್ಪ?
ಅಸ್ಟರಲ್ಲಿ ಬೆಲ್ ಆಗಿ ಎಲ್ರೂ ಒಂದೇ ಓಟ!!
ಮೊದಲ ಕ್ಲಾಸು ಮೊದಲ ದಿನ ಎಲ್ರೂ ಒಬ್ಬರನ್ನೊಬ್ಬರು ಭಯ ಮಿಶ್ರಿತ ಕುತೂಹಲದಿಂದ ನೋಡುತ್ತಾ
ಹೇಗೆ ಏನು ಮಾತಾಡುವುದು ಅಂತ ತಿಳಿಯದೆ ಕೈ ಕೈ ಹೊಸಕಿಕೊಳ್ಳುತ್ತಿರಲು ಕ್ಲಾಸ್ ಗೆ ಲೆಕ್ಚರ್ ಆಗಮನ ಆಯ್ತು!!
ಗುಡ್ ಮಾರ್ನಿಂಗ್ ಸಾರ್-ಎಲ್ರೂ 'ದಡಬಡನೆ ' ಎದ್ದು ನಿಂತರು !!
ವಿದ್ಯಾರ್ಥಿಗಳೇ- ಕುಳಿತುಕೊಳ್ಳಿ, ಇದೇ 'ಗೌರವ' ಹೀಗೆ ಕೊನೆವರಗೂ ಇದ್ರೆ ಸಾಕಸ್ಟೆ!!
ಈಗ ಎಲ್ರೂ ಒಬ್ಬೊಬ್ಬರಾಗಿ ನಿಮ ಹೆಸರು ಹಿನ್ನೆಲೆ ಹೇಳಿ ನಿಮ್ಮ ನಿಮ್ಮಲ್ಲೇ
ಸ್ನೇಹಿತ(ತೆ) ರನ್ನ ಮಾಡಿಕೊಳ್ಳಿ.. ನಾಳೆಯಿಂದ ಕ್ಲಾಸ್ ಶುರು ..
ಎಲ್ರೂ ತಮ್ಮ ಹೆಸರು ಹಿನ್ನೆಲೆ ಹೇಳಿ ಕುಳಿತರು..
ಪ್ರಥಮ ವರ್ಷದ ಪಟ್ಯ ಕ್ರಮ ಪ್ರಾಯೋಗಿಕ ತರಗತಿ ಇತ್ಯಾದಿ ಬಗ್ಗೆ ಎಲ್ಲ ಹೇಳಿ ಮುಗಿಸಿದ್ದಕ್ಕು ಬೆಲ್ ಹೊಡೆದು ಎಲ್ರೂ ಆಚೆ ಬಂದರು..
ಇವನೋ ಆಚೆ ಬಂದ ಕೂಡಲೇ 'ಆ ಹುಡುಗಿ'ಗಾಗಿ ಹುಡುಕುತ್ತಿದ್ದ, ದೂರದಲ್ಲಿ ಬರುತ್ತಿದ್ದ ಅವಳನ್ನ ಕಂಡ ಕೂಡಲೇ , ಉಗುಳು ನುಂಗುತ್ತಅವಳಿಗೆ ಬೆನ್ನು ಮಾಡಿ ನಿಂತ!!
ಹತ್ತಿರ ಬಂದು ಅವನನ್ನ ದಾಟಿ ಮುಂದೆ ಹೋದ ಅವಳು ಅವಳ ಸ್ನೇಹಿತೆಯರು ಧಿಗ್ಗನೆ ಒಮೆ ಹಿಂದೆ ತಿರುಗಿ ನೋಡಬೇಕೆ? ಇವನಿಗೆಜೀವವೇ ಬಾಯಿಗೆ ಬಂದ ಹಾಗಾಯ್ತು!! ಅಯ್ಯೋ ನಾ ಕೆಟ್ಟೆ:())
ಇಲ್ಲಿ ಬಾ ಅವಳ ಆಜ್ಞೆಯೋ? ಏನೋ ಗೊತ್ತಾಗದೆ ಹೋಗಿ ಅವಳ ಮುಂದೆ ನಿಂತ, ಏನು? ನೀಆಗಿಂದ ನನ್ನೇ ನೋಡುತ್ತಿರುವೆ, ನನ್ನೇ ಕಾಯ್ತಿರುವ ಹಾಗಿದೆ!!
ಲವ್ವ?
ಹಾ!! ಹೀ ಹೀ !!
ಇಲ್ಲ ಅದು- ಏನೋ ಹೇಳ ಹೋದ ಅವನಿಗೆ -ಅವಳು
ಇದೆಲ್ಲ ಮಾಮೂಲು ಇಲ್ಲಿ,
ನೋಡಿದ ಕೂಡಲೇ ಲವ್ ಅನೋದು!!
ಅದೆಲ್ಲ ಏನೂ ಇಲ್ಲ, ಹಾಗೆನಾರ ಇದ್ರೆ ಮರೆತು ಬಿಡು, ಚೆನ್ನಾಗಿ ಓದು ಆಯ್ತಾ?
ತಂಗಾಳಿ ಅಂದುಕೊಂಡಿದ್ದು -ಬಿರುಗಾಳಿ ಒಂದು ಬಂದು ಸೋಯ್ಯನೆ ಬೀಸಿ ಕ....ಕ್ಕೆ ಹೊಡೆದು ಹೋದಹಾಗಾಯ್ತು ಅವನಿಗೆ!!
ಅಬ್ಬೋ!! ಇಷ್ಟು ನೇರವಾಗಿ ಹೇಳೋರು ಇರ್ತಾರ?
ಮೈ ಗಾಡ್!! ಸಧ್ಯ ಬಚಾವ್, ನಗ್ಯಾಕೆ ಇದೆಲ್ಲ?
ನಾನು ನನ್ನ ಓದು ಅಸ್ಟೇ ಸಾಕು, ಆಮೇಲೆ ದಿನಂಪ್ರತಿ ಎದುರು ಬದುರಾಗೋದು ನೋಡೋದುಹೋಗೋದು ಅಸ್ಟೇ, ಪ್ರಥಮ ಪೀ ಉಯೂ ಸಿ ಯಲ್ಲಿ ವಾರ್ಷಿಕ ಕ್ರೀಡಾಕೂಟ ದಿನ ಅವಳು ರನ್ನಿಂಗ್ರಂಗೋಲಿ ಸ್ಪರ್ಧೆ, ಗೆ ಪ್ರಥಮ ಬಂದರೆ ಇವನು ಲಾಂಗ್ ಜಂಪ್ ಹಾಯ್ ಜಂಪ್ ಡಿಸ್ಕಸ್ ತ್ರೋ ನಲಿಪ್ರಥಮ ಬಂದು ಕ್ವಿಜ್ ನಲ್ಲಿ ಅವ್ನ -ಅವಳ ಸ್ಪರ್ಧೆ ಕೊನೆ ಘಟ್ಟದವರೆಗೆ ಕುತೂಹಲಕಾರಿಯಾಗಿದ್ದು ಕೊನೆಗೆ ಸಮಯ ಮುಗಿದು ಏನೂ ನಿರ್ಣಯಿಸಲಾಗದೆ ಡ್ರಾ ಮಾಡಿದರು!!
ಆಗಲೇ ಅವಳಿಗೆ ಅನ್ನಿಸಿದ್ದು ನಾ ಅವತು ಹಾಗೆ ಒರಟಾಗಿ ಹೇಳಬಾರದಿತ್ತು, ಇವನೇನು ಮಾಮೂಲು ಹುಡುಗ ಅಲ್ಲ, ಟ್ಯಾಲೆಂಟ್ ಇದೇ , ನೋಡಲೂ ಚೆನ್ನಾಗವ್ನೆ!! ಒಳ್ಳೆಯವನೂ ಹೌದು ಇದ್ವರ್ಗೂ ದಮ್ಮ್ಹೊಡೆದದ್ದು ನೋಡಿಲ್ಲ , ಗುಂಡು ಹಾಕೋ ಆಸಾಮಿ ಅಲ್ಲ ಅನ್ಸುತ್ತೆ:(( ಕೊಂಚ ಪುಕ್ಕಲ ಆದರೂ ....!!ನೋಡುವ ಅವನೇ ಏನಾರ ಹೇಳಿದರೆ ನೋಡುವ!!
ಬಾಯ್ ಹೇಳಿ ಮನೆ ದಾರಿ ಹಿಡಿದರು..
ಇವನ ಪ್ರಥಮ ಪೀ ಯೂ ಸಿ ಮುಗಿದು ಅವಳ ದ್ವಿತೀಯ ಪೀ ಯೂ ಸಿ ಮುಗಿದು ಅಲ್ಲ್ಲಿಯೇ ಇದ್ದ ಡಿಗ್ರಿಕಾಲೇಜಿಗೆ ಸೇರಿದಳು..
ಇವನು ದ್ವಿತೀಯ ಪೀ ಯೂ ಸಿ ಗಾಗಿ ಹಗಲಿರುಳು ಕಷ್ಟ ಪಟ್ಟು ಓದಿ, ಆಗಾಗ ಅವಳಿಂದ ಹಲ ಸಂದೇಹ ಪರಿಹಾರ ಮಾಡಿಕೊಂಡು ಪರೀಕ್ಷೆ ಚೆನ್ನಾಗಿ ಬರೆದು ಪ್ರಥಮ ಶ್ರೇಣಿಯಲ್ಲಿ ಪಾಸು ಆಗಿ ಅವಳದೇ ಡಿಗ್ರಿಕಾಲೇಜು ಸೇರಿದ,
ಆಗಾಗ ಒಟ್ಟಿಗೆ ಸೇರಿ ಕ್ಯಾಂಪಸ್ ನ ಕ್ಯಾಂಟೀನ್ ನಲ್ಲಿ ಕಾಫಿ ಕುಡಿಯುವುದು ತಿಂಡಿ ತಿನ್ನೋದು,ಇಬ್ಬರಿಗೂ ಅವನೇ ಮೊದಲು ಹೇಳಲಿ, ಇವಳೇ ಮೊದಲು ಹೇಳಲಿ ಎಂಬ ಭಾವ!! ಅವಳುತೃತೀಯ ಇವನು ದ್ವಿತೀಯ ವರ್ಷದ ಡಿಗ್ರಿ ಗೆ ಬಂದರೂ ಯಾರೊಬ್ಬರೂ ಏನೂ ಹೇಳದೆನೋಡುವವರು, ಅವರಿಬ್ಬರು ಲವ್ ಮಾಡ್ತಾರೆ ಅನ್ಸುತ್ತೆ ಆದರೂ ಹೇಳೇ ಇಲ್ಲ, ಅಸಲು ಅವರಿಬ್ಬರುಲವ್ ಮಾಡ್ತಾರ? ಎಂಬ್ವ ಸಂದೇಹ ವ್ಯಕ್ತಪಡಿಸುತ್ತಿದ್ದರ.
ಆಗಲೇ ಅದೇ ಕಾಲೇಜಿಗೆ ಬೇರೆ ಕಾಲೇಜು ಕಡೆಯಿಂದ ಟ್ರಾನ್ಸಫರ್ ಮಾಡಿಸಿಕೊಂಡು ಬಂದು ಸೇರಿದ'ವಿನೋದ್' ಸದಾ ಚಟುವಟಿಕಿಯಿಂದ ಇದ್ದು ಏನೇನೋ ಹಾಸ್ಯದ ವಿಚಾರ ಹೇಳಿ ನಗಿಸುತ್ತಿದ್ದ್ದ ಅವನು ಇದ್ದಕ್ಕಿದ್ದಂತೆಕಾಲೇಜಿನ 'ಫೆವರಿಟ್' ಹುಡುಗ ಆಗಿ ಎಲ್ರೂ ಅವನ ಸುತ್ತಲೇ ಗಿರಕಿ ಹೊಡೆಯುವುದು ಶುರು ಆಯ್ತು!!..
ನಮ್ ಕಥಾ ನಾಯಕನಿಗೆ ದಿಗಿಲು ಆಗಿ ಒಂದು ವೇಳೆ 'ಇವನು' ಅವಳನ್ನ ಪ...ಸಿ ಬಿಟ್ಟರೆ ಎಂಬ ಶಂಕೆಮೂಡಿ ಹೊ....ಲ್ಲಿ ನವಣೆ ಕುಟ್ಟಿದ ಅನುಭವ ಆಯ್ತು!!
ವನ ಆ ಶಂಕೆ ನಿಜವೂ ಆಗಿ ವಿನೀತ ಕೆಲವೇ ದಿನಗಳಲ್ಲಿ ವಿನೋದ್ ಜೊತೆ ಸುತ್ತಾಡುತ್ತ ಅವರಿಬ್ಬರೂತುಂಬಾ ಕ್ಲೋಸ್ ಆಗಿ ಮನದಲ್ಲಿ ಇದ್ದುದನ ಹೇಳಲಾಗದೆ ನಮ್ ಕಥಾ ನಾಯಕ ಓದಿನ ಕಡೆ ಆಸಕ್ತಿಕಡಿಮೆ ಮಾಡಿಕೊಂಡು ಎಲ್ಲ ಕಿರು ಪರೀಕ್ಷೆ ಟೆಸ್ಟ್ ನಲ್ಲಿ ಪ್ರಥಮದಿಂದ ದ್ವಿತೀಯ-ತೃತೀಯ- ಕೊನೆಗೆ೨೦-೩೦ ತೆಗೆದುಕೊಂಡು ಲೆಕ್ಕ್ಸ್ಹರ್ ಗಳಿಂದ ಬುದ್ಧಿವಾದ ಹೇಳಿಸಿಕೊಂಡು ಸುಧಾರಿಸದೆ ಈ ವಿಷ್ಯ ಅವನ ಮನೆಯಲ್ಲೀ ಗೊತ್ತಾಗಿ ರಂಪಾಟ ಆಗಿ, ತಂದೆ ಬಯ್ದರು ಅಂತ ಸಿಟ್ ಆಗಿ ಮನೆಯಿಂದ ಆಚೆಬಂದು ಎಲ್ಲಿ ಹೋದರು ಕುಳಿತರೂ ನಿಂತರೂ ಸದಾ ಅವಳದೇ-ಅವನದೇ ಯೋಚನೆ ಆಗಿಅವರಿಬ್ಬರು ಸೇರಿ ನಲಿವ ಸೀನ್ ಕಣ್ಣ ಮುಂದೆ ಬಂದು ಮನ ವ್ಯಘ್ರ ಆಗಿ , ಹತಾಶಗೊಂಡ ಮನ ಆತ್ಮಹತ್ಯೆಗೆ ಪ್ರೇರೇಪಿಸಿ ,
ಹೇಗೆ ಸಾಯುವುದು?
ವಿಷ ಕುಡಿಯಲೇ?
ಅದೆಲ್ಲಿ ಸಿಗಬೇಕು?
ಸಿಕ್ಕರೂ ಅಸಲಿಯೋ!! ನಕಲಿಯೋ:((
ನೇಣು ಹಾಕಿಕೊಂಡರೆ?
ಅಬ್ಬಬ್!! ಅದು ನೆನಸಿಕೊಂಡ್ರೇನೆ ಭಯ ಆಗುತ್ತೆ!!
ಬ....ಗೆ ಲಾರಿಗೋ ಬಿದ್ದರೆ?
ಯಾವುದಾರು ಕಾಲಿಗೆ ಕ... ಕಟಿಕೊಂಡು ಬಾವಿಗೆ ಹಾರಲೇ?
ಬಾವಿ ಎಲ್ಲಿ ಹುಡುಕಲಿ?:(((
ಕೊನೆಗೆ ಹೊಳೆದದ್ದೇ ರೈಲ್ ಟ್ರಾಕು, ಅದೇ ಸರಿ ಮೈ ಮನ ಬಿಗಿ ಮಾಡಿ ಪಟ್ಟಾಗಿ ಮಲಗಿದರೆ ಸಾಕು ರೈಲು ತನ್ನ ಮೇಲೆ ಹಾದು ಹೋದ ಕೂಡಲೇ....
ಆದರೆ ಸಾಯೋಕು ಧೈರ್ಯ ಬೇಕು !!
ಹಾಗೆಲ್ಲ ಹೋಗಿ ಹಳಿ ಮೇಲೆ ಮಲಗಿಕೊಂಡರೆ ರೈಲು ಹತ್ತಿರ ಬರುವಾಗ ಹಳಿಗಳು ಗಡ ಗಡ ನಡುಗಿರೈಲು ಇಂಜಿನ್ ಶಬ್ಧಕ್ಕೆ ಭಯ ಆಗಿ,.....
ಅದ್ಕೆ ಧೈರ್ಯ ಬರಲು ಏನಾರ ಮಾಡಬೇಕು..
ತಲೆಯಲ್ಲಿ ಹಾದು ಹೋದದ್ದು ಎಣ್ಣೆ!!
ಅದೇ ಸ್ಸ ... , ಸ್ವಲ್ಪ ಏನಾರ ಕುಡಿದರೆ ಧೈರ್ಯ ಬರುತ್ತೆ ಆದ್ರೆ ಇದ್ವರ್ಗೂ ಕುಡಿದಿಲ್ಲ, ವಾಸನೆ ಸಹಾ ಆಗೋಲ್ಲ!
ಹೆಂಗೂ ಸಾಯೋದು ಖಾತ್ರಿ ಅದಕ್ಯಾಕೆ ಅನ್ಜಬೇಕು?
ಅದ್ನೂ ನೋಡೇ ಬಿಡುವ ಅಂತ ಎದ್ದು ಹುಡುಕಾಡಿ 'ಬ್ಲೂ ಮೂನ್ ಬಾರ್' ಗೆ ಬಂದು ಎಣ್ಣೆ ಹಾಕಿಏನೇನೋ ಆಗಿ ಅದನ್ನೆಲ್ಲ ...ಕ್ಕಿ !!
ಹಳಿ ಮೇಲೆ ಬಂದು ಮಲಗಿದ್ದು ರೈಲು ಬರುವುದನ್ನೇ ಕಾಯ್ತಿದ್ದುದು...
ಹಳಿ ಮೇಲೆ ಬಿದ್ದು ಅರ್ಧ ಘಂಟೆ ಆದರೂ ಒಂದೂ ಟ್ರೇನ್ ಬರದಿರುವುದು ಅಚ್ಚರಿ ಆಗಿ ಆಮೇಲೆತನಸ್ತಕ್ಕೆ ತಾನೇ ನಕ್ಕು, ಇದೇನು 'ಅಮೆರಿಕವೇ' ಸಮಯಕ್ಕೆ ಸರಿಯಾಗಿ ಟ್ರೇನು ಬರಲು?ಕಾಯಲೇಬೇಕು, ಉಸ್ಸ್!! ಅಂತ ಉಸಿರು ಬಿಟ್ಟು ಮಲಗಿದ..
ಈಗ ಅವರಿಬ್ಬರೂ ಎಲ್ಲಿರಬಹುದು?
ಏನು ಮಾಡುತ್ತಿರಬಹುದು?
ನಾ ಹೇಳದೆ ಇದ್ದುದೇ ತಪ್ಪ?
ನನಲ್ಲಿ ಏನು ಕೊರತೆ ಇತ್ತು?
ನಾ ಯಾಕೆ ಅವಳಿಗೆ ಇಷ್ಟ ಆಗಲಿಲ್ಲ?
ಏನೆಲ್ಲಾ ಕನಸು ಕಂಡಿದ್ದೆನಲ್ಲ!!
ಅವಳು ಹೀಗೆ ಮಾಡಿದ್ದು ಸರಿಯೇ?
ಛೆ ಛೆ!! ಅವಳನ್ನ ಮರೆಯಲು -ಈ ನೋವ ಮರೆಯಲೇ ಅಲ್ಲವೇ
ತಾ ಇಲ್ಲಿ ತಲೆ ಹಾಕಿ ಮಲಗಿದ್ದು? ಮತ್ತೆ ಯಾಕೆ ಅವಳನ್ನ ನೆನೆದು ಸಾಯುವ ಮುಂಚ್ಚೆ ನೋವಿನಿ0ದ ಸಾಯೋದು?
ತಲೆ ಕೊಡವಿ ಶುಭ್ರವಾದ ಆಕಾಶ ನೋಡುತ್ತಾ ಮಲಗಿದ,ನಕ್ಚತ್ರಗಳು ಮಿನ್ಚುತ್ತಿದವಲದನ್ನು ನೋಡಿ,ಒಹ್! ಮೈ ಗಾಡ್
ನಕ್ಚತ್ರಗಳು!!
ವಾಹ್ವ್!! ಎಷ್ಟು 'ಸೊಗಸಾಗಿದೆ' ಈ ವಾತಾವರಣ, ಸಿಟಿ ಒಳಗಡೆ ಅಂತಸ್ತಿನ ಮನೆಗಳಲ್ಲಿ
ಆಕಾಶಕ್ಕೆ ಎಟುಕುವ ಹಾಗಿರುವ ಮನೆಗಳಲೀರುವ ನಮಗೆ ನಕ್ಷತ್ರ ನೋಡೋ 'ಭಾಗ್ಯವೂ 'ಇರಲಿಲ್ಲವಲ್ಲ ಅಂತಅನ್ನಿಸಿ :())..
ಅದೇ ಸಮಯಕ್ಕೆ ಕೇಂದ್ರ ರೈಲು ನಿಲ್ದಾಣದಲ್ಲಿ?????
ಮುಂದೇನು???.............
ಮೂರನೇ ಮತ್ತು ಕೊನೆಯ ಭಾಗದಲ್ಲಿ...
ಚಿತ್ರ ಮೂಲ:
http://www.livelifehappy.com
೧ ನೆ ಭಾಗಕಾಗಿ ಇಲ್ಲಿ ಕ್ಲಿಕ್ಕಿಸಿ
http://sampada.net/blog/%E0%B2%AE%E0%B3%81%E0%B2%82%E0%B2%A6%E0%B3%87%E0%B2%A8%E0%B3%81-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%A7/25/03/2012/36105
Comments
ಉ: ಮುಂದೇನು???.............(ಕಥೆ) ಭಾಗ -೨
ಉ: ಮುಂದೇನು???.............(ಕಥೆ) ಭಾಗ -೨
In reply to ಉ: ಮುಂದೇನು???.............(ಕಥೆ) ಭಾಗ -೨ by makara
ಉ: ಮುಂದೇನು???.............(ಕಥೆ) ಭಾಗ -೨
ಉ: ಮುಂದೇನು???.............(ಕಥೆ) ಭಾಗ -೨
In reply to ಉ: ಮುಂದೇನು???.............(ಕಥೆ) ಭಾಗ -೨ by padma.A
ಉ: ಮುಂದೇನು???.............(ಕಥೆ) ಭಾಗ -೨