ಮುಂದೇನು??? ..............(ಕಥೆ)-ಭಾಗ -೧

ಮುಂದೇನು??? ..............(ಕಥೆ)-ಭಾಗ -೧

ಚಿತ್ರ

 
 ಸಮಯ ರಾತ್ರಿ ೭  :೪೫


  'ಬ್ಲೂ ಮೂನ್' ಬಾರ್ & ರೆಸ್ಟೋರಂಟ್-


ಮಂದ ಬೆಳಕಲ್ಲಿ  ಕಾಣುತ್ತಿದ್ದ  ಹೆಸರು ಓದಿ ಒಮ್ಮೆ ಸುತ್ತ -ಮುತ್ತ ನೋಡಿ ಯಾರೂ ತನ್ನ ಗಮನಿಸುತ್ತಿಲ್ಲ ಅಂತ ಕನ್ಫರ್ಮ್ ಮಾಡಿಕೊಂಡು   ಅನ್ಜನ್ಜುತ್ತ ಒಳಗಡಿ ಇಟ್ಟ ನಮ್ಮ ಕಥಾ ನಾಯಕ...

ಮೂರು ಅಂತಸ್ತಿನ  ಆ ಬಾರ್ ನಲ್ಲಿ ಅದಾಗಲೇ ಜನ ತುಂಬಿ ಸಿಗರೇಟು- ಬೀರು -ವಿಸ್ಕಿ- ಬ್ರಾಂಡಿ  ವಾಸನೆ ಬೆರೆತು  ಮೂಗಿಗೆ ಸವಾಲು ಹಾಕುವಂತ ಅಸಹನೀಯ ವಾತಾವರಣವಿತ್ತು!! 
ತುಂಬಿದ ಜನ ನೋಡಿ -ಒಳಗೆ ಬಂದ  ಆ ವ್ಯಕ್ತಿ  ಸುತ್ಲೂ ನೋಡಿ, ಜನ ಇಷ್ಟು ಹೊತ್ತಿಗೆ ಕುಡಿಯಲು ಶುರುಮಾಡ್ತಾರ? 
ಅಬ್ಬೋ!! ಈ ಜನ  ಈ ಸಂಖೆಲಿ ಇಲ್ಲಿ ಸೇರಿದ ಹಾಗೆ 'ಅಲ್ಲಿ' ಸೇರಿದ್ದರೆ ಲೋಕಪಾಲ್  ಬಿಲ್ಲು  ಪಾಸ್ ಆಗೇ ಬಿಟ್ಟಿರೋದು!!
  'ಖಾಲಿ' ಇರಬಹುದಾದ  ಟೇಬಲ್ ಗಾಗಿ ನೋಡುತ್ತಾ ಕೊನೆಗೆ ಮೂಲೆಯೊಂದರಲ್ಲಿ  ಖಾಲಿ ಇದ್ದ ಟೇಬಲ್ಬಳಿಗೋಗಿ ಚೇರ್ ಎಳೆದು ಕುಳಿತ…

 

ಒಳಗೆ ಧೈರ್ಯವಹಿಸಿ ಬಂದದ್ದು ಆಯ್ತು, ಆದರೆ ಈಗ ಬೇರರ್ ಗೆ ಏನು ಆರ್ಡರ್ ಮಾಡುವುದು?
ಯಾವುದು ಒಳ್ಳೆಯದ್ದು!!

ನನಗೆ ಸರಿ ಹೊಂದುವುದು?
ಇದೆ ಮೊದಲು ಬೇರೆ!!

ಏನಾರ ಹೆಚ್ಚು ಕಡಿಮೆ ಆಗಿ!!!
ಛೆ ಛೆ  ಇದ್ದುದರಲ್ಲಿ 'ಸಾಧಾರಣವಾಗಿರುವುದು ' ಏನಾರ ತೆಗೆದುಕೊಂಡರೆ ಆಯ್ತು...
ಅದು ಏನು?
ಯಾರಿಗ್ಗೊತ್ತು!
ಬೇರರ್ ನೆ ಕೇಳಿದರೆ ಆಯ್ತಪ್ಪ:())

 

ಬೇರರ್ ಬಂದು

ಸ್ಸಾರ್ ಏನು ಕೊಡಲಿ?
ನಮ್ ಕಥಾ ನಾಯಕನನ್ನ ಧಿಟ್ಟಿಸಿ ನೋಡುತ್ತಾ ಈ ವಯ್ಯನ್ನ  ನಾ ಯಾವತ್ತು ನೋಡಿಲ್ಲ,'ಹೊಸಬ'ನಿರಬೇಕು!!  ದಿನ ನಿತ್ಯ  ಹೊಸ ತಾಪತ್ರಯ ತೊಂದ್ರೆ  ಚಿಂತೆಗಳು  ಒತ್ತಡದಲ್ಲಿ

ಬಾರುಗಳಿಗೆ 'ನವ ಸದಸ್ಯರ' ಆಗಮನ ಹೊಸದೇನು ಅಲ್ಲವಲ್ಲ!!

 

ನಿಮ್ಮಲ್ಲಿ ಕ್ಯಾಟಲಾಗ್  ಇದೆಯಾ?

 

ಬೇರರ್ ತಬ್ಬಿಬ್ಬು!!

ಅಲ್ಲ -ಬಾರ್ ಗೆ ಬಂದು ಕ್ಯಾಟಲಾಗ್ ಕೇಳಿದ ಮೊದಲ - ಕೇಳುವ ಕೊನೆಯ ವ್ಯಕ್ತಿ -ಇವನೇ ಇರಬೇಕು!!

 

ಕ್ಯಾಟಲಾಗ್ ?

ಅದೇನೂ ಇಲ್ಲ ಸ್ಸಾರ್!!

ನೀವು ಇದುವರೆಗೂ ಏನೂ ಕುಡಿದಿಲ್ಲವೇ?

ಯಾಕಿಲ್ಲ?
ನಾ
ಪೆಪ್ಸಿ-
ಕೊಕ ಕೋಲ-
ಎಳನೀರು-
ನೀರೂ ಸಹಾ ಕುಡಿದಿರುವೆ- ನಮ್ಮ ಕಥಾ ನಾಯಕನ ಉತ್ತರ!!

ಹ್ಹಿ ಹೀ ಒಳ್ಳೆ ತಮಾಷೆ ಮಾಡ್ತೀರ ಸ್ಸಾರ್ ನೀವ್.. -ಬೇರರ್
ಈ ವಯ್ಯ ಹೊಸಬರು ಅನಿಸುತ್ತೆ,
ಬೀರ್ ಕೊಡಲ?

ಕಿಂಗ್ ಫಿಷರ್  ಚೆನ್ನಾಗಿರುತ್ತೆ!!

ಅದು ಕುಡಿದರೆ ನಶೆ ಹತ್ತಿ ತೂರಾಡೋಲ್ಲ ತಾನೇ?-ಕಥಾನಾಯಕ

ಛೆ ಛೆ ಹೊಸದು ಅಲ್ಲವ?

 ಮೊದಲಿಗೆ ಕಹಿ ಅನ್ನಿಸುತ್ತೆ-

  ವಸಿ  ಕುಡಿದು ಆದ ಮೇಲೆ  ಸ್ಸರಿ ಹೋಗುತ್ತೆ, ಜೊತೆಗೆ ಚಿಪ್ಸ್,ಮೊಟ್ಟೆ  ಇದ್ದರೆ ಹೊಂದಾಣಿಕೆ ಆಗುತ್ತೆ ಬಿಡಿ!!

 

ನಿಮಗಾಗಿ ಅದರಲ್ಲಿ ಎಕ್ಸ್ಪೋರ್ಟ್  ಪ್ರೀಮಿಯಂ ತರುವೆ ಸಾಧಾರಣವಾಗಿರುತ್ತೆ ಏನೂ ಆಗೋಲ್ಲ....

ಸ್ಸರಿ ಹಾಗೆ ೪ ಮೊಟ್ಟೆ  ಮಿರ್ಚಿ ಪೌಡರ್  ಸಾಲ್ಟ್ ಜೊತೆ ಹಾಗೆಯೆ ಚಿಪ್ಸ್ ಸಹಾ ತನ್ನಿ...

 

೫ ನಿಮಿಷಗಳ ನಂತರ ಬೇರರ್ ಬಂದು ಬಾಟಲ ಓಪನ್ಮಾಡಿ  ಚಿಪ್ಸ್ ಮೊಟ್ಟೆ ತಂದು ಇತ್ತು ದೂರ ಸರಿದು ನಿಂತ...

ಸ್ಸಾರ್ - ಸಿಗರೆಟ್ ಬೇಡವೇ?

ಅದು ಇದ್ದರೆ ಚೆನ್ನಾಗಿರುತ್ತೆ!!

ಸಿಗರೆಟ್?

ಇದುವರೆಗೂ ಸೇದಿಲ್ಲವಲ್ಲ!!

ಅದೂ ನೋಡೇ ಬಿಡುವ

 

ಓಕೆ ಯಾವ ಯಾವ ಸಿಗರೆಟ್ ಇದೆ?

ಅಹ್ಹ್!! –ಬೇರರ್

 

ಓಹೋ! ನೀವು ಸಿಗರೆಟ್ ಸಹಾ ಇಲ್ಲಿವರ್ಗೆ ಸೇದಿಲ್ಲ ಅನ್ಸುತ್ತೆ, ಅಯ್ಯೋ ಪಾಪ!!

ನೋಡಿ ಸ್ಸಾರ್

ಕಿಂಗ್ ಇದೆ,

ಸ್ಮಾಲ್ ಇದೆ,

ಮೆಂಥಾಲ್ ಇದೆ,

ಬ್ಲಾಕ್ ಇದೆ,

೫೫೫ ಇದೆ ಯಾವುದು ಬೇಕು?

ಹೌದ? ಅಸ್ಟೆಲ್ಲ ವಿಧದ ಸಿಗರೆಟ್ ಇದೆಯಾ?

ಒಹ್! ಮೈ ಗಾಡ್ ..

 

ಅದರಲ್ಲಿ ಕೆಮ್ಮು ಬರದಿರುವುದು  ಮೈಲ್ಡ್ ಆಗಿರುವುದು ಯಾವುದು?

ಮೆಂಥಾಲ್ ಇಲ್ಲ ಬ್ಲಾಕ್ ತೆಗೆದುಕೊಳ್ಳಿ  ಮಾಮೂಲು ಆಗಿರುತ್ತೆ!!

 

ಸ್ಸರಿ ಅದನೆ ತೆಗೆದುಕೊಂಡು ಬನ್ನಿ...

 

ಬೇರರ್  ಹೋದ ಮೇಲೆ ಒಮ್ಮೆ ಅತ್ತಿತ್ತ ನೋಡಿ  ಯಾರು ಪರಿಚಯಸ್ತರು ಇಲ್ಲ ಅಂತ ಕನ್ಫರ್ಮ್ ಮಾಡಿಕೊಂಡು ,ಬೀರ್ ನ ಸೀದಾ ಗ್ಲಾಸಿಗೆ ಬಗ್ಗಿಸಿದ ನಮ್ಮ ಕಥಾ ನಾಯಕ!!

'ತಡೆದು ಕೊಂಡು ಬಂದ ಮಳೆ ಜಡಿದುಕೊಂಡು ಬಂತು' ಅನ್ನುವುದನ್ನ ಪ್ರೂವ್ ಮಾಡಲೋ ಎಂಬಂತೆ 

ಅದುವರೆಗೂ ಬಾಟಲ ನಲ್ಲೆ ಮಿಸುಗಾಡುತ್ತಿದ್ದ  'ಗ್ಯಾಸ್' ಬುಸ್ಸನೆ ಹೊರಗೆ ಬಂದು ಮುಕ್ಕಾಲು ಬಾಟಲಿ ಬೀರು ಗ್ಲಾಸು ತುಂಬಿ ,ಟೇಬಲ್ಮೇಲೆ ಬುರುಗು-ನೊರೆ ಸಮೇತ ಹರಡಿತು!!

 

ಈ ಅನಿರೀಕ್ಷಿತ ಆಘಾತದಿಂದ  ನಮ್ ಕಥಾ ನಾಯಕ  ಬೆಪ್ ಆಗಿ  ಛೆ ಛೆ ಎಂಥ ಕೆಲಸ ಆಗೋಯ್ತು? ಬೀರ್ ಎಲ್ಲ ಹಾಳಾಯ್ತು..

ಟಿಸ್ಸು ಪೇಪರ್ ತೆಗೆದುಕೊಂಡು  ಟೇಬಲ್ಮೇಲಿನ ನೊರೆ  ಅಳಿಸಿ  ಹತ್ತಿರ ಇದ್ದ ಡಸ್ಟ್   ಬಿನ್   ಪೂರ 

ಟಿಸ್ಸು  ಪೇಪರ್ ತುಂಬಿಸಿ  ಉಸ್ಸಪ್ಪ ಅಂತ ಕೂತ, ಅರ್ಧ ಉಳಿದಿದ್ದ ಬೀರ್ ಬಾಟಲ್ ತೆಗೆದುಕೊಂಡು  ಮೆತ್ತಗೆ ಗ್ಲಾಸಿಗೆ ಹಾಕಿಕೊಂಡು  ಬಾಯ್ ಹತ್ತಿರ ತಂದ,

ಯಾವುದೋ ವಿಚಿತ್ರ ವಾಸನೆ ಮೂಗಿಗೆ ಸೋಕಿ, ಮೈ ಕೈ ಎಲ್ಲ ನಡುಗಿ ಹೊಟ್ಟೆ ತೊಲಸಿದಂತೆ ಆಯ್ತು!!

ತತ್!! ಇದ್ಯಾಕೋ ಸ್ಸರಿಹೋಗಲ್ಲ ಅನ್ಸುತ್ತೆ- ಸ್ವಗತ

 

ಬೇರರ್ ಬಂದು  ಮೊಟ್ಟೆ ಚಿಪ್ಸ್ ಸಾಲಾಗಿ ಜೋಡಿಸಿ ಹೋದ.

ಮೊದಲು ೫-೬ ಚ್ಚಿಪ್ಸ್  ಪೀಸ್ ತಿಂದು  ಧೈರ್ಯ  ವಹ್ಸೀ ಗ್ಲಾಸ್ ಎತ್ತಿ ಒಂದೋ ಎರಡು ಗುಟುಕು

ಬಾಯಲ್ಲಿ ಹೋಯ್ತು!!  ಅದನ್ನ ಕುಡಿಯಲು ಆಗದೆ ಹೊರಗೆ ಉಗುಳಲು ಆಗದೆ  ಬಾಯನ್ನ ಉಫ್ಫ್  ಅಂತ ಉಬ್ಬಿಸಿಕೊಂಡು ಕೂತ!!

ಗ್ಯಾಸ್ ಬಾಯ್ ತುಂಬಿ ಮೂಗಿಂದ ಆಚೆ ಬರಲು ನೋಡಿ ಅದಕ್ಕೆ ಬಾಯ್ ಕೈ ಕೊಟ್ಟು ಉದರ ಸೇರಿತು!!

 

ಗಂಟಲಲ್ಲಿ ವಿಷ  ಪ್ರವೇಶಿಸಿದಂತೆ ಆಗಿ  ಅಲ್ಲಿಂದ ಅದು ನಾಳಗಳ ಗುಂಟ ಸಾಗಿ  ಉದರ ಪ್ರವೇಶಿಸಿ ಮೈನಲ್ಲಿ ಯಾವುದೋ ಅವ್ಯಕ್ತ ಶಕ್ತಿ ಹೊಕ್ಕಂತೆ ಆಯ್ತು!!

ಒಮ್ಮೆ ಮೈಕೈ ಎಲ್ಲ ಆದುರಿ  ಬೃ ಬ್ರ್ಯೂಇ  ಅಂದ!!

 

ಒಳಗೆ ಪ್ರವೇಶಿಸಿದ ಅಲ್ಪ ಸ್ವಲ್ಪ  ಬೀರು ತನ್ನ ಕೈ ಚಳಕತೋರಿಸಿ 

ಮೈ ಮನ ಕಂಟ್ರೋಲ್ ತೆಗೆದುಕೊಳ್ಳಲು ನೋಡಿತು, ಏನೋ ಆಗುತ್ತ್ತಿದೆ ಅಂತ ಅನ್ನಿಸುವ ಮೊದಲೇ ಕೈ ಸಿಗರೆಟ್ ಡಬ್ಬಿಗೆ ಹೋಗಿ ಬ್ಲಾಕ್ ಒಂದನ್ನ ತೆಗೆದುಕೊಂಡು ಬಾಯಿಗೆ ಇಟ್ಟುಕೊಂಡಿತು, ಕಡ್ಡಿ ಗೀರಿ ಹತ್ತಿಸಿಕೊಂಡ,

 ಅಯ್ಯೋ!!

ಅಯ್ಯಪ್ಪ!!

ಓಹ್ ಆಹ್ಹ್!!

 ಅಹಹ!!

ತುಟಿ ಸುಟ್ಟು ಬಾಯ್ ಬಾಯ್ ಬಡಿದುಕೊಳ್ಳುವಹಾಗಾಯ್ತು:())

ಇಸ್ತಕ್ಕು ಆಗಿದ್ದೇನು?

ಸಿಗರೆಟ್ ನ ಉಲ್ಟಾ ಇಟ್ಟುಕೊಂಡು ಕಡ್ಡಿ ಗೀರಿದ್ದು!! 

ಅರಳೆತುಂಬಿದ ಉಲ್ಟಾ ಭಾಗ ಸರ್ರನೆ ಬೆಂಕಿ ಹೊತ್ತಿಕೊಂಡು....!! :((

  ಬೇರರ್ನ  ಕೂಗಿ ಕರೆದು  ಬಿಲ್ಲು  ಕೇಳಿ ಬಿಲ್ಲು ಟಿಪ್ಸ್ ಸಹಾ ಕೊಟ್ಟು ಹೊರ  ನಡೆದ ,

ಛೀ ! 

ಥೂ  ಅಸಹ್ಯ !!

ದರಿದ್ರ!!

ವಯ್ಯಕ್ ವಯ್ಯಕ್ಕ್!!

ಬಾರ್ ನಿಂದ  ಆಚೆ ಬಂದು ರಸ್ತೆ ಬದಿ   ಬಗ್ಗಿ  ವಯ್ಯಕ್ ವಯ್ಯಕ್ಕ್... ಅಬ್ಬ!!

ಇದನ್ನ ಕುಡಿದರೆ' ಧೈರ್ಯ' ಬರುತ್ತೆ ಅಂತ  ಕುಡಿದರೆ!!

...ತಿ ಬರಬೇಕ?...:()))  :(((

 

ಅಲ್ಲಿಂದ ಅವನು ಹೊರಟಿದ್ದು ಒಂದು    .....ಲು    'ಪ್ರಶಸ್ತ 'ಜಾಗ ಹುಡುಕಿ ಕೊಂಡು....

ಒಂದು ಕಿಲೋ ಮೀಟರ್ ಉದ್ದಕ್ಕೆ ಹೋಗಿ ಹುಡುಕಿದರೂ  ಎಲ್ಲೆದ್ಯೂ ಜನವೋ ಜನ!!

ತತ್!! ಜನ   ...ಕು   ಬಿಡೋಲ್ಲವಲ್ಲ!!

ಅಂತ ಜಾಗ ಎಲ್ಲಿದೆಯಪ್ಪ?  ಹಾಗೆ ಹೋಗ್ತಾನೆ ಇದ್ದ...

 

 

 -----------------------------------------------------------------

 

 

 

 

ಸಮಯ ರಾತ್ರಿ ೮:೪೫   ಬೆಂಗಳೂರಿಂದ ಕೆಲ ಕಿಲೋಮೀಟರು ಗಳಲ್ಲಿ  ಇರುವ ರೈಲ್ವೆ ಹಳಿ, ಅದಾಗಲೇ ಸರಿಸುಮಾರು ಮೀಟರುಗಳನ್ನ 

ಕ್ರಮಿಸಿ 'ಪ್ರಶಸ್ಥವಾದ' ಜಾಗದ ಅನ್ವೇಷಣೆಯಲ್ಲಿ ತೊಡಗಿದ್ದ  ಅವನಿಗೆ 'ಇದೆ' ಸರಿಯಾದ 'ಜಾಗ ಅನ್ನಿಸಿತು,

ಹಳಿಗೆ ಒತ್ತಡ ತಡೆದುಕೊಳ್ಳುವ ಶಕ್ತಿಕೊಡುವ ಚಿಕ್ಕ ಚಿಕ್ಕ  ಕಲ್ಲುಗಳ ಜಲ್ಲಿ ದಾಟಿ  ಆ ಕಡೆ- ಈಕಡೆ ನೋಡಿ ಒಮ್ಮೆ ಹಳಿಗಳನ್ನ  ಪರೀಕ್ಷಿಸಿ'ಅಸಹನೀಯವಾದುದ್ದು

-ಅಸಹ್ಯಕರವಾದದ್ದು' ಏನೂ ಇಲ್ಲ ಅಂತ ಕನ್ಫರ್ಮ್ ಮಾಡಿಕೊಂಡು ಹಳಿಗೆ ಅಡ್ಡಲಾಗಿ ಮಲಗಿದ....

 

ಅದೇನು?

 ಅವನಿಗೆ ಮನೆಯಲಿ  ಮಲಗಲು ಜಾಗ ಇರಲಿಲ್ಲವೇ?

ಅಥವಾ ಅವನಿಗೆ ಮನೆಯೇ ಇಲ್ಲವೇ?

ಸ0ಬಂಧಿಕರು?

ಅವನಿಗೆ ಮನೆಯೂ ಉಂಟು, ಮಾತಾ-ಪಿತ ಸಹೋದರ-ಸಹೋದರಿಯರು ಅಪಾರ ಬಂಧು ಮಿತ್ರರೂ ಇರುವರು....!!

ಆದರೂ ಇಸ್ಟೇ ಸಾಕು, ಈ ದರಿದ್ರ ಜೀವನ ಸಾಕು, ಇನ್ನೇನೂ ಉಳಿದಿಲ್ಲ,  'ಅವಳಿಲ್ಲದ' ತಾ ಬದುಕಿದ್ದೇನು ಸಾಧಿಸುವುದು?

 ಎಂಬ ಯೋಚನೆಗಳ ಸುರುಳಿಯಲ್ಲಿ ಅವನಿಗೆ ಇದೆಲ್ಲದರಿಂದ ಮುಕ್ತಿ- ಪರಿಹಾರ'ಆತ್ಮಹತ್ಯೆ' ಒಂದೇ ಎನ್ನುವುದು ತೋಚಿ 

ಸಾಯಲು ಪ್ರಶಸ್ತ  ಜಾಗ ಹುಡುಕಿ ಕೊನೆಗೆ ಇಲ್ಲಿ ಬಂದಿರುವನು!!..

 

ಮಲಗಿದವನಿಗೆ  ಒಮ್ಮೆ ಕಣ್ಣ ಮುಂದೆ ತಂದೆ ತಾಯಿ-ಸಹೋದರ ಸಹೋದರಿಯರು- ಬಂಧು ಬಳಗ

ಸ್ನೇಹಿತರು   ಎಲ್ಲರೂ ನೆನಪಿಗೆ ಬಂದರು-

ಹಾಗೆಯೇ'ಅವಳು'.....'ಅವನು'.....

 

ಮೈಮನ ಕೋಪದ ತೀವ್ರತೆಯಲ್ಲಿ ಹಲ್ಲು ಕಚ್ಚಿಕೊಂಡು ಅವನ ಸಿಟ್ಟಿನ ಪ್ರತಿರೂಪವಾಗಿ  ಅವನ ಕೆಳ  ತುಟಿ ಯಲ್ಲಿ ರಕ್ತ  ಒಸರಿತು...

ಇದಕ್ಕೆ ಕಾರಣ ಅವಳೇ!!
ಅವನೂ ಸಹಾ...

 

ಇತ್ತ ಕಡೆ ಬೆಂಗಳೂರಿನ  ಕೇಂದ್ರ ರೈಲ್ವೆ ನಿಲ್ದಾಣ -

ಉದ್ಘೋಷಕಿ  -ಪ್ರಯಾಣಿಕರೆ ಗಮನಿಸಿ  ಬೆಂಗಳೂರಿಂದ ಮುಮ್ಬೈಯಿಗೆ  ಹೊರಡುವ  ಉದ್ಯಾನ್ ಎಕ್ಸ್ಪ್ರೆಸ್ಸ್  ರೈಲು ಕೆಲ ಅನಿವಾರ್ಯ ಕಾರಣಗಳಿಂದ  ೩೦ ನಿಮಿಷ ತಡವಾಗಿ ಹೊರಡಲಿದೆ!!

 

ಮುಂದೇನು???

 

.................

 

ನಾಳೆ -ಮುಂದಿನ ಭಾಗ

 

ಚಿತ್ರ ಮೂಲ :  http://thumbs.dreamstime.com/thumblarge_267/1210356907x9V2Br.jpg

 --------------------------------------------------------------

            ಕಥೆ-ಪಾತ್ರಗಳು-ಪರಿಸರ-ಸನ್ನಿವೇಶ  -ಎಲ್ಲವೂ ಶುದ್ಧ ಕಲ್ಪನೆ:()))

 

೨ ನೆ ಭಾಗಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

http://sampada.net/blog/%E0%B2%AE%E0%B3%81%E0%B2%82%E0%B2%A6%E0%B3%87%E0%B2%A8%E0%B3%81-%E0%B2%AD%E0%B2%BE%E0%B2%97-%E0%B3%A8/25/03/2012/36112

 
 

Rating
No votes yet

Comments