ಯಾರು ಕರೆದರೋ ಅವನನ್ನು
ಯಾರು ಕರೆದರೋ ಅವನನ್ನು
ನನ್ನ ಜೊತೆಗಾರನೆಂದು?
ಗುಳಿಬಿದ್ದ ಆವನ ಕಣ್ಣಗಳು
ಸುಕ್ಕುಗಟ್ಟಿದ ಮುಖ
ಪ್ರಪಂಚದ ಚಿಂತೆಯನ್ನೆಲ್ಲಾ
ತಲೆಯಮೇಲೆ ಹೊತ್ತು
ನಡೆವಂತ ಅವನ ಮೌನವನ್ನು
ಅವನನ್ನು ಯಾರೂ
ಜೊತೆಯಾಗಲು ಬಯಸುತ್ತಿರಲಿಲ್ಲ
ಅವನ ದೀನ ಸ್ಥಿತಿ
ಅವ್ಯಕ್ತ ಭಾವ
ಪೇಲವಗೊಂಡ ಮುಖ
ಜನರಿಂದ ದೂರವೇ ಇಟ್ಟಿದ್ದರು?
ನನಗೆ ಜೊತೆಗಾರನಾಗಿದ್ದ
ಅವನಲ್ಲೂ ಗರಿಗೆದರುವ ಆಸೆಗಳಿತ್ತು
ಕನಸು ಕಾಣುವ ಕಣ್ಣುಗಳಿತ್ತು
ನಿಂತ ನೆಲದಲ್ಲೇ
ಚಿಗುರುಮೂಡಿಸುವ ಛಲವಿತ್ತು
ಏನಿದ್ದರೂ ಅವನು ಮೂಕನಂತಿದ್ದ
ಅವನ ಬದುಕಲ್ಲಿ ವಿಷಾದವಿತ್ತು
ಬಿಡಿಸಲಾಗದ ವ್ಯಥೆಯಿತ್ತು
ಒಂಟಿತನದ ಭಾವವಿತ್ತು
ನಿಶ್ಚಲದ ಛಾಯೆಯಿತ್ತು
ಆದರೂ
ಅವನಲ್ಲಿ ಸೂರ್ಯಕಾಂತಿಯಂತೆ
ಅರಳುವ ನಗುವಿತ್ತು
ನನ್ನ ಬೆನ್ನುತಟ್ಟುವ ಮಾತುಗಳು
ಅವನಿಗೆ ಸ್ವಲ್ಪವೂ ಹಿಡಿಸುತ್ತಿರಲಿಲ್ಲ
ಏಕೋ ಏನೋ !
ಅವನ ನೆನಪುಗಳು
ಮತ್ತೆ ಮತ್ತೆ ಜೊತೆಯಾಗುತ್ತವೆ
ಒಟ್ಟಿಗೆ ಕೂಡಿ ನಡೆಯುತ್ತವೆ
ಒಂಟಿಯಾಗಿದ್ದಾಗ
ಚಿತ್ರಬರೆಯಲು ಕುಳಿತಾಗ
ಕವನ ಕಟ್ಟಲು ಯೋಚಿಸುವಾಗ
ಒಬ್ಬಳೆ ದಾರಿಯಲ್ಲಿ ನಡೆವಾಗ
ಎಲ್ಲವೂ ಮರುಕಳಿಸುತ್ತದೆ
ಯಾರು ಕರೆದರೋ ಅವನನ್ನು
ನನ್ನ ಜೊತೆಗಾರನೆಂದು?
ಸೂಚನೆ: ಚಿತ್ರಕೃಪೆ ಅಂತರಜಾಲ
Comments
ಉ: ಯಾರು ಕರೆದರೋ ಅವನನ್ನು
In reply to ಉ: ಯಾರು ಕರೆದರೋ ಅವನನ್ನು by harishsharma.k
ಉ: ಯಾರು ಕರೆದರೋ ಅವನನ್ನು
ಉ: ಯಾರು ಕರೆದರೋ ಅವನನ್ನು
In reply to ಉ: ಯಾರು ಕರೆದರೋ ಅವನನ್ನು by venkatb83
ಉ: ಯಾರು ಕರೆದರೋ ಅವನನ್ನು