ಸೇನಾ ದಂಡ ನಾಯಕರ ವರ್ತನೆ

ಸೇನಾ ದಂಡ ನಾಯಕರ ವರ್ತನೆ

ಗಡ್ಡ ಎಳೆದವನಿಗೆ ಏನು ಶಿಕ್ಷೆ ಕೊಡಬೇಕು? ತನ್ನ ಕುಮಾರ ಸಲೀಂ ತನ್ನ ಗಡ್ಡ ಎಳೆದದ್ದಕ್ಕೆ ನಸುಗೋಪದಿಂದ ಅಕ್ಬರ್ ಕೇಳಿದ ಪ್ರಶ್ನೆಗೆ ಬೀರಬಲ್ಲ ಗಡ್ಡ ಎಳೆದ ಪೋರನ ತುಂಟತನ ಕ್ಕೆ ಮ್ಯಾಚ್ ಆಗೋ ಉತ್ತರ ಕೊಡುತ್ತಾನೆ. ನಮ್ಮ ಘನ ಕೇಂದ್ರ ಸರಕಾರಕ್ಕೆ ಇರುಸು ಮುರುಸು ಮಾಡುತ್ತಿರುವ ನಮ್ಮ ಭೂ ಸೇನಾ ದಂಡನಾಯಕ ವಿ. ಕೆ. ಸಿಂಗ್ ರಿಗೆ ಏನು ಶಿಕ್ಷೆ ಕೊಡಬೇಕು? ನಾವು ಸರಿಯಾಗಿ, ಬೇಕಾದ ರೀತಿಯಲ್ಲಿ ಯುದ್ಧ ಸನ್ನದ್ಧರಾಗಿಲ್ಲ ಎನ್ನುವ ಪ್ರಧಾನಿಗೆ ಬರೆದ ಪತ್ರದ ಸಾರಾಂಶವನ್ನು ಸೋರಿಸಿ ದೇಶದ ಶತ್ರುಗಳಿಗೆ ಪರೋಕ್ಷ ಸಹಾಯ ಮಾಡಿದ ಸೇನಾ ನಾಯಕನಿಗೆ ಏನು ಶಿಕ್ಷೆ ಕೊಡಬೇಕು ಎಂದು ಕೇಂದ್ರ ತಲೆ ಕೆರೆದು ಕೊಳ್ಳುತ್ತಿದೆ. ಪ್ರಧಾನಿ ತಲೆ ಮೇಲೆ ever present ಪೇಟ ಇರುವಾಗ ತಲೆ ಹೇಗೆ ತಾನೇ ಕೆರೆದು ಕೊಂಡಾರು?

ದೇಶದ ಮುಂದೆ ಇರುವ ಇಂಥ ಗಂಭೀರವಾದ ವಿಷಯದ ಬಗ್ಗೆ ಪ್ರಧಾನಿಗೆ ಬರೆದ ಸಿಂಗ್ ಈ ಪತ್ರದ ಸಾರಾಂಶವನ್ನು ಸೋರಿಸಿದ್ದಾದರೂ ಏಕೋ ಏನೋ? ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ, ದೇಶದ ಗಡೀ ಭದ್ರತೆಯ ಗುರುತರ ಜವಾಬ್ದಾರಿ ಹೊತ್ತ ಅಧಿಕಾರಿ ಈ ರೀತಿ ನಡೆದು ಕೊಂಡರೆ ನಾಡಿನ ಸ್ಥಿತಿ ಏನಾಗಬೇಡ? ಪ್ರಪಂಚವೇ "ಮತ್ಸರ"ದಿಂದ ನೋಡುವ ನೆರೆಹೊರೆಯವರನ್ನು ಪಾಕ್, ಚೀನಾದ ರೂಪದಲ್ಲಿ ದೇವರು ನಮಗೆ ದಯಪಾಲಿಸಿದ್ದಾನೆ. ನಮ್ಮ ಪ್ರಧಾನಿ ಅರುಣಾಚಲ ಪ್ರದೇಶಕ್ಕೆ ಹೋದರೆ ನಿನಗೇನೂ ಇಲ್ಲಿ ಕೆಲಸ ಎನ್ನುವ ಚೀನಾ, ಕಾಶ್ಮೀರಕ್ಕೆ ಹೋದರೆ ಮುಖ ಸಿಂಡರಿಸುವ ಪಾಕಿಸ್ತಾನ, ಈ ತೆರನಾದ ಶತ್ರುಗಳ ನಡುವೆ ದಿನ ಕಳೆಯುವ ನಮಗೆ ಸೇನಾ ದಂಡನಾಯಕರ ಈ ಕಹಿ ಔಷಧದ ಅವಶ್ಯಕತೆ ಖಂಡಿತಾ ಇರಲಿಲ್ಲ. ಇರುವ ಈ ಶತ್ರುಗಳು ಸಾಲದು ಎನ್ನುವಂತೆ ಮೊನ್ನೆ ಶ್ರೀಲಂಕಾ ವಿರುದ್ಧದ ವಿಶ್ವಸಂಸ್ಥೆಯ ನಿರ್ಣಯವೊಂದರ ಪರವಾಗಿ ಮತ ಚಲಾಯಿಸಿ ನಮ್ಮ shatru ಪಟ್ಟಿಗೆ ಮತ್ತೊಂದು ಹೆಸರನ್ನು ಸೇರಿಸಿ ಕೊಂಡಿದ್ದೇವೆ.

ಬಹಳ ದಿನಗಳಿಂದ ಸರಕಾರಕ್ಕೂ, ಭೂಸೇನೆಯ ಇಲಾಖೆಗೂ ಇರುವ ego clash ನ ಸುಳಿವು ನಮಗೆ ಇದೆ. ಆದರೆ ಅದು ಈ ಮಟ್ಟಕ್ಕೆ ಬಂದು ನಿಲ್ಲುತ್ತದೆ ಎನ್ನುವ ನಿರೀಕ್ಷೆ ನಮಗೆ ಇರಲಿಲ್ಲ. ಕೂಡಲೇ ಕೇಂದ್ರ ಸರಕಾರ ಇಂಥ ನಡವಳಿಕೆಗಳಿಗೆ ಕಡಿವಾಣ ಹಾಕಿ ದೇಶದ ಹಿತಾಸಕ್ತಿ ಬಂದಾಗ ಅದರ ನಿಜವಾದ ಜವಾಬ್ದಾರಿ ಯಾರದು ಎಂದು ಸ್ಪಷ್ಟ ಪಡಿಸಬೇಕು.    

Rating
No votes yet

Comments