ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು
ನಿಮ್ಮನ್ನೆಲ್ಲಾ ತುಂಬಾ ಕಾಯಿಸಿದೆ ಇನ್ಸ್ಟಾಲೇಷನ್ ಬಗ್ಗೆ ತಿಳಿಸ್ಲಿಕ್ಕೆ. ಕ್ಷಮೆಯಿರಲಿ. ನೀವಾಗಲೇ ಇನ್ಸ್ಟಾಲ್ ಮಾಡ್ಕೊಂಡಿದ್ರೆ ಬಹಳ ಚೆಂದ.ಇಲಾಂದ್ರೆ ಇಲ್ಲಿದೆ ನಿಮಗೆ ಇನ್ಸ್ಟಾಲೇಶನ್ ಬಗ್ಗೆ ಒಂದು ಪರಿಚಯ.
ಉಬುಂಟು ಇನ್ಸ್ಟಾಲೇಶನ್ ಎಲ್ಲಿಂದ ಪ್ರಾರಂಭ ?
ಉಬುಂಟು ಲಿನಕ್ಸ್ ಇನ್ಸ್ಟಾಲೇಶನ್ ಬೇರೆಲ್ಲಾ ಆಪರೇಟಿಂಗ್ ಸಿಸ್ಟಂಗಳಂತಲ್ಲ. ತುಂಬಾ ಸುಲಭ. ಇದುವರೆಗೆ ಅದರ ಲೈವ್ ಸಿ.ಡಿ ಬೂಟ್ ಮಾಡಿ ನೋಡಿದ್ರಿ ಅಲ್ವಾ ಅದರ ಡೆಸ್ಕ್ ಟಾಪ್ (Desktop environment) ಅನ್ನೇ ಇನ್ಸ್ಟಾಲೇಷನ್ ಗೆ ಉಪಯೋಗಿಸಬೇಕು. ಯಾವುದೇ ಸಾಫ್ಟ್ವೇರ್ ಇನ್ಸ್ಟಾಲೇಶನ್ಅದರಲ್ಲೂ ಆಪರೇಟಿಂಗ್ ಸಿಸ್ಟಂ ಇನ್ಸ್ಟಾಲೇಶನ್ ಯಾವ ಸಮಯದಲ್ಲಾದರೂ ತೊಂದರೆ ಕೊಡಬಹುದಾದ್ದರಿಂದ, ನಿಮ್ಮ ಎಲ್ಲ ಅವಶ್ಯಕ ಫೈಲುಗಳನ್ನ ಅಥವಾ ಡ್ರೈವ್ ನಲ್ಲಿನ ಡಾಟವನ್ನು ಬೇರೆಡೆ ಸಂಗ್ರಹ ಮಾಡಿಟ್ಟು ಕೊಂಡು ಮುಂದುವರೆಯುವುದು ಉತ್ತಮ. ನೀವು ಅನಿವಾರ್ಯವಾಗಿ ತೊಂದರೆಗೆ ಸಿಕ್ಕಿಕೊಂಡಾಗಳು ಗಡಿಬಿಡಿ ಯಾಗಬೇಕಿಲ್ಲ. ಉಬುಂಟು ವೆಬ್ ಸೈಟ್ ನಿಮಗೆ ಅನೇಕ ರೀತಿಯ ಸಹಾಯಹಸ್ತ ಗಳನ್ನ ನಿಮ್ಮೆಡೆಗೆ ಚಾಚುತ್ತದೆ. ಇದರಲ್ಲಿ ಉಬುಂಟು ಕಮ್ಯುನಿಟಿ ಫೋರಂ ತುಂಬಾ ಉಪಯೋಗಿ. ನಿಮಗೆ IRC (ಇಂಟರ್ನೆಟ್ ರಿಲೆ ಚಾಟ್ )ಬಗ್ಗೆ ತಿಳಿದಿದ್ದರಂತೂ ನಿಮಗೆ ಬಹಳ ಆರಾಮಾಗಿ ಸಲಹೆ ಸೂಚನೆಗಳು ಉಬುಂಟು ಕಮ್ಯುನಿಟಿಯ ಸದಸ್ಯರಿಂದ ದಿನದ ೨೪ ಗಂಟೆಗಳು ಸಿಗ್ತವೆ. irc.freenode.net ಸರ್ವರ್ ನಲ್ಲಿ #ubuntu ಮತ್ತು #ubuntu-in ಎನ್ನುವ ಚಾನೆಲ್ ಗಳನ್ನ ನೀವು ಸಂಪರ್ಕಿಸ ಬಹುದು.
ವಿಶೇಷ ಸೂಚನೆ: ಕನ್ನಡದಲ್ಲಿಯೂ ಕೂಡ ನಿಮ್ಮೆಲ್ಲರಿಗೆ ಟೆಕ್ನಿಕಲ್ ಸಲಹೆಗಳನ್ನ ನೀಡುವುದು #kannada ಎಂಬ ಚಾನೆಲ್ ನ ಪ್ರಯತ್ನ, ನಾನೂ (techfiz) ಅಲ್ಲಿರ್ತೇನೆ. ನೀವೂ ನಮ್ಮೊಂದಿಗೆ ಸೇರಿಕೊಳ್ಳಿ.
ಉಬುಂಟು ಇನ್ಸ್ಟಾಲೇಶನ್ ಸಿ.ಡಿ ಎಲ್ಲಿ ಸಿಗ್ತದೆ?
ಸಿ.ಡಿ ಯನ್ನ ಅನೇಕ ಮೂಲ ಗಳಿಂದ ಪಡೆಯಬಹುದು. ಉಬುಂಟು ವೆಬ್ ಸೈಟ್ ನ್ ಈ ಕೊಂಡಿ ನಿಮಗದನ್ನ ವಿವರಿಸ್ತದೆ ನೋಡಿ. ನೀವು ಉಬುಂಟು ಡೌನ್ ಲೋಡ್ ಮಾಡಿ ಕೊಂಡು ನಿಮ್ಮ ಡಿಸ್ಕ್ ನೀವೆ ತಯಾರು ಮಾಡಿ ಕೊಳ್ಳೋದಾದರೆ ಈ ಕೊಂಡಿ ನಿಮಗೆ ಉಪಯುಕ್ತ.
ಸಿ.ಡಿ ಇಂದ ನಿಮ್ಮ ಕಂಪ್ಯೂಟರ್ ಚಾಲನೆ / ಬೂಟ್ ಮಾಡುವುದು
ಉಬುಂಟು ಇನ್ಸ್ಟಾಲೇಶನ್ ಡಿಸ್ಕ್ ಗಳು ಬೂಟಬಲ್ ಡಿಸ್ಕ್ ಗಳು. ಅಂದರೆ, ಅವನ್ನ ಉಪಯೋಗಿಸಿ ಕೊಂಡು ಕಂಪ್ಯೂಟರ್ ಚಾಲನೆ ಮಾಡಬಹುದು. ನಿಮ್ಮ ಸಿ.ಡಿ ಡ್ರೈವ್ ನಲ್ಲಿ ಉಬುಂಟು ಡಿಸ್ಕ್ ಹಾಕಿ ನಿಮ್ಮ ಕಂಪ್ಯೂಟರ್ ರಿಸ್ಟಾರ್ಟ್ ಮಾಡಿದರಾಯಿತು. ಕಂಪ್ಯೂಟರ್ ರೀಬೂಟ್ ಅದಾಗ ನಿಮಗೆ ಬೂಟ್ ಮೆನು ಕಾಣಿಸ್ತದೆ ಅಲ್ಲಿ "ಸ್ಟಾರ್ಟ್ ಆರ್ ಇನ್ಸ್ಟಾಲ್ ಉಬುಂಟು" (start or install Ububntu) ಅನ್ನೂ ಆಯ್ಕೆ ಮೊದಲೇ ಆಯ್ಕೆಯಾಗಿರೋದನ್ನ ನೀವು ಕಾಣಬಹುದು. "Enter" ಕೀ ಪ್ರೆಸ್ ಮಾಡಿ ಈ ಆಯ್ಕೆಯನ್ನೇ ಬಳಸಿ. ಕಂಪ್ಯೂಟರ್ ರೀಬೂಟ್ ಮಾಡಿದಾಗ ಕೆಳಕಂಡ ಸ್ಕ್ರೀನ್ ನಿಮಗೆ ಕಾಣಿಸ್ಲಿಲ್ಲ ಅಂದರೆ,
ಲಿನಕ್ಸಾಯಣ ಭಾಗ ೪ ಇದರ ಬಗ್ಗೆ ಮತ್ತಷ್ಟು ಸಲಹೆಯನ್ನ ನಿಮಗೆ ನೀಡ್ತದೆ. ಓದಿಲ್ಲದಿದ್ದರೆ, ಒಮ್ಮೆ ಕಣ್ಣಾಯಿಸಿ. ಅಥವಾ ಉಬುಂಟು ಹೆಲ್ಪ್ ಪೇಜ್ ಕೂಡ ಇಲ್ಲಿದೆ.
ಲೈವ್ ಸಿ.ಡಿ :
ಉಬುಂಟು ಬೂಟ್ ಆದಾಗ (ಇದು ಸ್ವಲ್ಪ ಸಮಯ ತಗೋ ಬಹುದು )ಇದು ಸಂಪೂರ್ಣ ಉಬುಂಟು ಸಿಸ್ಟಂ ಅನ್ನೇ ನಿಮ್ಮ ಮುಂದಿಡುತ್ತದೆ . ಈಗ ನೀವು ಉಬುಂಟು ಇನ್ಸ್ಟಾಲ್ ಮಾಡ್ದೇನೆ ಅದು ಹೇಗೆ ಕೆಲಸ ಮಾಡುತ್ತೆ ಅನ್ನೂದನ್ನ , ಸ್ವಲ ಕಾಲ ಉಬುಂಟು ವನ್ನ ಹಾಗೆ ಬಳಸಿ ನೋಡ ಬಹುದು. ಜ್ಯಾಸ್ತಿ ಹೊತ್ತು ನಿಮಗೆ ಸಿ.ಡಿ ಇಂದಾನೆ ವರ್ಕ್ ಮಾಡಿ ನೋಡ್ತೀನಿ ಅಂದ್ರೆ ಪೈಲ್ ಮತ್ತಿತರೆ ಯನ್ನ ಸೇವ್ ಮಾಡ್ಬೇಕಾಗಬಹುದಲ್ವಾ ಇದರ ಬಗ್ಗೆ ಇನ್ನಷ್ಟು ಮಾಹಿತಿ ನಿಮಗೆ ಬೇಕಿದ್ದರೆ ಈ ಕೊಂಡಿ ಸಂಪರ್ಕಿಸಿ.
ಉಬುಂಟು ಲೈವ್ ಸಿ.ಡಿ ಪರಿಸರ ಹೀಗೆ ಕಾಣಿಸ್ತದೆ.
ಇನ್ಸ್ಟಾಲ್ ಮಾಡಿ ನೋಡೋಣ್ವಾ?
ನಿಮಗೆ ಲೈವ್ ಸಿ.ಡಿ ಇಸ್ಟ ಆಗಿ ಇನ್ಸ್ಟಾಲ್ ಮಾಡೋಣ ಅನ್ಸಿದ್ರೆ "install" ಐಕಾನ್ ಮೇಲೆ ಡಬಲ್ ಕ್ಲಿಕ್ ಮಾಡಿ. ಇದು ಉಬುಂಟುವಿನ ಗ್ರಾಫಿಕಲ್ ಇನ್ಸ್ಟಾಲರ್ ಅನ್ನು ನಿಮ್ಮ ಮುಂದಿಡುತ್ತದೆ.
ಭಾಷೆ
ಮೊದಲ ಸ್ರ್ಕೀನ್ ಭಾಷೆಯನ್ನ ಆಯ್ಕೆ ಮಾಡಿ ಕೊಳ್ಲಿಕ್ಕೆ . ನಿಮ್ಮ ಇನ್ಸ್ಟಾಲೇಶನ್ ಗೆ ಬೇಕಿರೋ ಭಾಷೆ ಆಯ್ಕೆ ಮಾಡ್ಕೊಂಡು "Forward" ಬಟನ್ ಪ್ರೆಸ್ ಮಾಡಿ. (ಇಲ್ಲಿ ಕನ್ನಡವೂ ಒಂದು ಆಪ್ಶನ್ ಆಗಿ ಬರೋದು ನಿಮಗಿಷ್ಟಾನೇ ? ಚರ್ಚಿಸಿ.)
ಟೈಮ್ ಜೋನ್
ಈಗ ನೀವು ಯಾವ ಟೈಮ್ ಜೋನ್ ಗೆ ಸೇರಿದವರು ಅನ್ನೂದನ್ನ ನಿಮ್ಮ ಇನ್ಸ್ಟಾಲೇಶನ್ ಗೆ ತಿಳಿಸೋ ಸಮಯ. ನೀವು "ಕಲ್ಕತ್ತ" ಸಿಟಿಯನ್ನ ಮ್ಯಾಪ್ ಮೇಲೆ ಕ್ಲಿಕ್ಕಿಸ ಬಹುದು ಇಲ್ಲಾ, "Selected City" ಬಾಕ್ಸ್ ನಲ್ಲಿ ಅದನ್ನ ಆಯ್ಕೆ ಮಾಡಿಕೊಳ್ಳಬಹುದು ಸಹ.
"Set Time" ಬಟನ್ ನಿಮಗೆ ಟೈಮ್ ಸೆಟ್ ಮಾಡ್ಲಿಕ್ಕೆ ಸಹಾಯ ಮಾಡ್ತದೆ. ಇದಾದ ನಂತರ "Forward" ಕ್ಲಿಕ್ ಮಾಡಿ.
ಕೀ ಬೋರ್ಡ್ ಲೇಔಟ್
ನಿಮ್ಮ ಕೀ ಬೋರ್ಡ್ ಲೇಔಟ್ ಅನ್ನ ನೀವು ಆಯ್ಕೆ ಮಾಡ್ಕೊ ಬೇಕು.ನಂತರ ಅದು ಸರಿಯೇ ಎಂದು ಕೂಡ ಬಾಕ್ಸ ನಲ್ಲಿ ಟೈಪ್ ಮಾಡಿ ಈಗಲೇ ಪರೀಕ್ಷಿಸಿ ಬಿಡಿ. ಇದಾದ ನಂತರ ಮತ್ತೆ "Forward" ಕ್ಲಿಕ್ ಮಾಡಿ.
ನೀವ್ಯಾರು?
ನಿಮ್ಮ ಹೆಸರು, ನೀವು ಬಳಸಬೇಕು ಅನ್ಕೊಂಡಿರೋ ಲಾಗಿನ್ ಹೆಸರು ಮತ್ತು ಪ್ರವೇಶ ಪದ ಮತ್ತು ನಿಮ್ಮ ಕಂಪ್ಯೂಟರ್ ಗೆ ಒಂದು ನಾಮಕರಣ ಕೂಡ ಇಲ್ಲೇ ಮಾಡಿಬಿಡಿ.
ಡಿಸ್ಕ್ ನ ಆಯ್ಕೆ
ಉಬುಂಟು ಡಿಟೆಕ್ಟ್ ಮಾಡಿರೂ ಹಾರ್ಡ್ ಡ್ರೈವ್ ಗಳನ್ನ ಸ್ರ್ಕೀನ್ ನಿಮಗೆ ಈಗ ರತೋರಿಸ್ತಿದೆ. ಈ ಆಯ್ಕೆಗಳ ಬಗ್ಗೆ ಸ್ವಲ್ಪ ಯೋಚಿಸಿ ನಿರ್ಧಾರ ತಗೋ ಬೇಕು. ಉಬುಂಟು ನಿಮಗೆ ಇದರ ಬಗ್ಗೆ ಗೈಡ್ ಮಾಡ್ಬೇಕು ಅನ್ನಿಸಿದರೆ, "Forward" ಕ್ಲಿಕ್ ಮಾಡಿ ಮುಂದೆ ಹೋಗಿ.
ಕೆಳಗಿನ ಎರಡು ಆಯ್ಕೆ ಗಳು, ನಿಮ್ಮ ಡಿಸ್ಕ್ ನಲ್ಲಿರೋ ಹೆಚ್ಚಿನ ಫ್ರೀ ಸ್ಪೇಸ್ ಅನ್ನ ಬಳಸಿಕೊಳ್ಳಲಿಕ್ಕೆ ಮತ್ತು ಪಾರ್ಟೀಷನ್ ಗಳನ್ನ ನಾವೇ ನಿರ್ದರಿಸಲಿಕ್ಕೆ ಬೇಕಾದ ಆಯ್ಕೆಯನ್ನ ನಮಗೆ ನೀಡ್ತದೆ. ಫ್ರೀ ಸ್ಪೇಸ್ ಅಂತಂದ್ರೆ, ಹಾರ್ಡ್ ಡಿಸ್ಕ್ ನಲ್ಲಿ ಯಾವುದೇ ಡ್ರೈವ್ (ಪೈಲ್ ಗಳನ್ನ ಸ್ಟೋರ್ ಮಾಡಲಿಕ್ಕೆ ಉಪಯೋಗಿಸೂ C: ನಿಮ್ಮ ವಿಂಡೋಸ್ ನಲ್ಲಿ)ಗೆ ಬಳಸಿ ಕೊಳ್ಳದೇ ಬಿಟ್ಟಿರುವ ಒಂದು ಖಾಲಿ ಸ್ಥಳ ಅಂತ ಹೇಳಬಹುದು. ಇಂತಹ ಸ್ಥಳವನ್ನ ನೀವು ಉಬುಂಟು ಸಿ.ಡಿ ಬೂಟ್ ಮಾಡ್ಕೊಳ್ಳೋಕಿಂತ ಮುಂಚೆಯೆ ನಿಮ್ಮ ಹಾರ್ಡಿಸ್ಕ್ ನಲ್ಲಿ ಮಾಡಿಟ್ಟು ಕೊಂಡಿರಬೇಕು. ಹೊಸ ಹಾರ್ಡಿಸ್ಕ್ (hard disk) ನಲ್ಲಿ ಉಬುಂಟು ಇನ್ಸ್ಟಾಲ್ ಮಾಡ್ತಿರೋದಾದ್ರೆ, ನೀವಿದರ ಬಗ್ಗೆ ಚಿಂತೆ ಮಾಡ್ಬೇಕಿಲ್ಲ.
ಮೊದಲ ಆಯ್ಕೆಗಳಲ್ಲಿ ಡ್ರೈವ್ ಅನ್ನ ಸೆಲೆಕ್ಟ್ ಮಾಡಿದ್ದೇ ಆದ್ರೆ, ಮುಂದಿನ ಸ್ಕ್ರೀನ್ ನಿಮಗೆ ಯಾವ ರೀತಿ ಫ್ರೀ ಸ್ಪೇಸ್ ಮಾಡಿ ಕೊಳ್ಳೋದು ಅನ್ನೂ ಆಯ್ಕೆ ಗಳನ್ನ ನಿಮ್ಮ ಮುಂದಿಡುತ್ತದೆ.
ಇಲ್ಲಿ ನಿಮ್ಮ ಡಿಸ್ಕ್ ನಲ್ಲಿರೂ ಪಾರ್ಟೀಶನ್ ಅನ್ನ ಹೇಗೆ ರೀ ಸೈಜ್ ಮಾಡೋದು (ಅದರಲ್ಲಿರೂ ಫ್ರೀ ಸ್ಪೇಸ್ ಬಳಸಿ ಹೊಸ ಪಾರ್ಟೀಶನ್ ಮಾಡೋದು)ಅಂತ ನೋಡಿ. ಸ್ಲೈಡರ್ ಅನ್ನ ಉಪಯೋಗಿಸಿದರಾಯಿತು. ನಿಮ್ಮ ಡಿಸ್ಕ್ ನಲ್ಲಿರೋ ಎಲ್ಲಾ ಪಾರ್ಟೀಶನ್ ಗಳನ್ನೂ ಕಿತ್ತಾಕಲಿಕ್ಕೆ ಇಲ್ಲಿ ಆಪ್ಶನ್ ಇದೆ. ಇದು ನಿಮ್ಮ ಬೇರೆಲ್ಲಾ ಡಾಟ ಕಿತ್ತಾಕೋದ್ರಿಂದ ಇದನ್ನ ಬಳಸೂ ಮುಂಚೆ ಯೋಚನೆ ಮಾಡಿ ನಿರ್ಧಾರ ತಗೋಳಿ.
ಅಬ್ಬಾ ! ಎಲ್ಲಾ ಮುಗೀತು.
ನೀವು ಸೆಲೆಕ್ಟ್ ಮಾಡಿದ ಎಲ್ಲ ಆಯ್ಕೆಗಳನ್ನ ಕೊನೆಯ ಬಾರಿಗೆ ಪರೀಕ್ಷಿಸಲಿಕ್ಕಿರೋ ಕೊನೇ ಅವಕಾಶವನ್ನ ಈ ಕಡೆಯ ಸ್ಕ್ರೀನ್ ನಿಮಗೆ ನೀಡ್ತದೆ. ಅದಾದ ನಂತರ "install" ಕ್ಲಿಕ್ ಮಾಡಿ.
ಇನ್ಸ್ಟಾಲಿಂಗ್
ಇನ್ಸ್ಟಾಲರ್ ನಿಮ್ಮ ಡಿಸ್ಕ್ ಪಾರ್ಟೀಶನ್ ಗಳಿಗೆಡಿ ಬೇಕಾದ ಬದಲಾವಣೆಗಳನ್ನ ಮಾಡಿ, ಉಬುಂಟು ಇನ್ಸ್ಟಾಲ್ ಮಾಡ್ತದೆ. ಇವು ಕೊಂಚ ಸಮಯ ತಗೋಳ್ತದೆ. ನೀವು ಪಾರ್ಟೀಶನ್ ರೀ ಸೈಜ್ ಮಾಡಿದ್ದೇ ಆದ್ರೆ , ಡಾಟ ಅದೇ ಪಾರ್ಟೀಶನ್ ನ ಬೇರೆಡೆಗೆ ವರ್ಗಾವಣೆ ಯಾಗೋದ್ರಿಂದ ಅದು ಮತ್ತಷ್ಟು ಸಮಯ ತಗೋ ಬಹುದು. ಇಂಡಿಕೇಟರ್ ನಿಮಗೆ ಇನ್ಸ್ಟಾಲೇಶನ್ ನ ಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತೆ.
ಇನ್ಸ್ಟಾಲೇಶನ್ ಮುಗೀತಾ?
ಮುಗಿದಾದ್ರೆ, ಲೈವ್ ಸಿ.ಡಿ ಉಪಯೋಗಿಸೋದನ್ನ ಮುಂದು ವರೆಸ ಬಹುದು, ಇಲ್ಲಾ ನಿಮ್ಮ ಕಂಪ್ಯೂಟರ್ ರಿ ಸ್ಟಾರ್ಟ್ ಮಾಡ ಬಹುದು.
ನಿಮ್ಮ ಕಂಪ್ಯೂಟರ್ ರೀಸ್ಟಾರ್ಟ್ ಅದಾಗ, ನಿಮ್ಮ ಕಂಪ್ಯೂಟರ್ ನಲ್ಲಿ ಉಬುಂಟು ಮಾತ್ರ ಇದ್ರೆ ಅದು ಲೋಡಾಗ್ಲಿಕ್ಕೆ ಶುರು ಮಾಡತ್ತೆ ಇಲ್ಲ ನಿಮ್ಮ ಇತರೆ ಆಪರೇಟಿಂಗ್ ಸಿಸ್ಟಂಗಳನ್ನ ತನ್ನ ಮೊದಲನೇ ಸ್ಕ್ರೀನ್ ನಲ್ಲಿ ಅದು ನಿಮ್ಮ ಮುಂದಿಡುತ್ತದೆ.
ಈಗ ನೀವು ನಿಮ್ಮ ಲಾಗಿನ್ ಹೆಸರು ಮತ್ತು ಪ್ರವೇಶ ಪದ ಬಳಸಿ ಕೊಂಡು (ನೆನಪಿಟ್ಟು ಕೊಂಡಿದ್ದೀರಾ ತಾನೆ?) ಲಾಗಿನ್ ಆಗಿ. ಉಬುಂಟು ಹೇಗೆ ಉಪಯೋಗಿಸ ಬೇಕು ಅನ್ನೋದನ್ನ ಉಬುಂಟು ತನ್ನ ಸಿಸ್ಟಂ ಮೆನು ನಲ್ಲಿ ಅಡಗಿಸಿಟ್ಟು ಕೊಂಡಿದೆ. System->Help->System Documentation ನೋಡಿ ಅಥವಾ ಆನ್ಲೈನ್ ಕೂಡ ಇದು ಲಭ್ಯ ವಿದೆ.
ಇಲಾಂದ್ರೆ ಹೇಗೆ ಸಹಾಯ ಪಡೆಯೋದು ಅಂತ ಮೊದಲೇ ಹೇಳಿದೆನಲ್ಲಾ. ನಿಮ್ಮ ಸಹಾಯಕ್ಕೆ ನಾವು ಯಾವಗ್ಲೂ ಇದ್ದೇವೆ. ಕಾಮೆಂಟ್ ಹಾಕಿ, ಇಲ್ಲ ಐ.ಆರ್.ಸಿ ನಲ್ಲಿ ಸಿಗಿ. ಇಲ್ಲ ಮೈಲ್ ಹಾಕಿ. ಒಟ್ನಲ್ಲಿ ಲೈನಕ್ಸ್ ಗೆ ಒಂದು ಕೈಹಾಕಿ.
ನಿಮಗೆ ಉಬುಂಟು ಹೆಲ್ಪ್ ಪೇಜಗಳ ಪರಿಚಯ ಆಗ್ಲಿ ಅದನ್ನ ನೀವೇ ಉಪಯೋಗಿಸುವಂತಾಗಲಿ ಅಂತ ಉಬುಂಟುವಿನ Graphical install ಇಂಗ್ಲೀಷ ಪೇಜನ್ನ ಇಲ್ಲಿ ಕನ್ನಡದಲ್ಲಿ ಅನುವಾದಿಸಿದ್ದೇನೆ. ಚಿತ್ರಗಳೂ ಸಹ ಉಬುಂಟು ವಿನ ಕೊಡುಗೆ.
Comments
ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು
In reply to ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು by ASHOKKUMAR
ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು
ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು
In reply to ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು by prasannasp
ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು
In reply to ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು by prasannasp
ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು
ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು
In reply to ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು by prasannasp
ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು