ಗಜಲ್
ಕವನ
ಬರೆಯುತ್ತವೆ ಕೆಲವು ಲೇಖನಿಯಂತೆ ಕಣ್ಣಂಚಿನ ನೋಟಗಳು
ಮರೆಯಾಗಿದ್ದು ಬದುಕೆಲ್ಲಾ ಆಳುತ್ತವೆ ಕಣ್ಣಂಚಿನ ನೋಟಗಳು.
ಮೊಗ್ಗುಗಳೆಲ್ಲಾ ಅರಳುತ್ತವೆ ಫಕ್ಕನೊಮ್ಮೊಮ್ಮೆ ಮಿಂಚಂತೆ
ತೀಡುತ್ತವೆ ತಂಗಾಳಿಯಂತೆ ನೋವುಗಳನ್ನು ಕಣ್ಣಂಚಿನ ನೋಟಗಳು.
ಬಿಸಿಯಾದ ಭಾರವಾದ ಉಸಿರೆಲ್ಲಾ ಹೊರಹಾಕುತ್ತವೆ
ಮರಗಟ್ಟಿದ ಅಧರಗಳನ್ನು ಒಮ್ಮೊಮ್ಮೆ ಅಲಗಿಸುತ್ತವೆ ಕಣ್ಣಂಚಿನ ನೋಟಗಳು.
ಕಡಲ ದಂಡೆಗೆ ಮುಖ ಮಾಡಿ ನಡ್ಯೆಯುತ್ತವೆ ಉದಾಸೀನತೆಯಿಂದ
ಅಲ್ಲಿನ ಮುಸ್ಸಂಜೆಗಳನ್ನು ಸುಂದರವಾಗಿಸುತ್ತವೆ ಕಣ್ಣಂಚಿನ ನೋಟಗಳು.
ಉಯ್ಯಾಲೆಯಾಡುವ ಚಣಗಳನ್ನು ಬಂಧಿಸುತ್ತವೆ ಸೊಗಸಾಗಿ
ಸೋತು ಹೆಗಲಿಗೆ ಹಗಲಾಗಿ ನಿಲ್ಲುತ್ತವೆ ಕಣ್ಣಂಚಿನ ನೋಟಗಳು.
Comments
ಉ: ಗಜಲ್
ಉ: ಗಜಲ್
In reply to ಉ: ಗಜಲ್ by mmshaik
ಉ: ಗಜಲ್
ಉ: ಗಜಲ್