ದೇವ್ರೆ

ದೇವ್ರೆ



ಕೆಲವರನ್ನು ನೋಡುವಾಗ


ಎಲ್ಲರೊಳಗೆ ನೀನಿರುವೆ


ಎಂಬ ಮಾತು ನಿಜವೆನಿಸುತ್ತೆ


 


 


ಪ್ರಶ್ನೆ ಕಾಡುತ್ತೆ


ಸುಮ್ಮನಿರುವೆ ನೀನೆತಕ್ಕೆ?


 


ಹೆಚ್ಚಿರುವ ರಾವಣ ದುರ್ಯೋಧನ


ನಂಥವರ ಕಂಡಾಗ


 


 


ನನ್ನೊಳಗೆ


ಪಿಸುನುಡಿಯುವ


ಒಳನುಡಿಯು


ಹೇಳುವರು


ಅಂತರಾಳದಲಿದೆ


ಅಪರಿಮಿತ ಆನಂದ


ಅದ ಕಾಣೊ


ಶಕ್ತಿ ಯುಕ್ತಿಯ ತೋರೊ


 


 


ದೇವ್ರೆ


ನೀನೊಮ್ಮೆ


ಅವತರಿಸು


ಎದುರು ಗೋಚರಿಸು


 


 


ಹೇಳಿದ್ದೆ


ಸಂಭವಾಮಿ ಯುಗೆ ಯುಗೆ


Rating
No votes yet

Comments