ಸಂಪದ ಪರಿವಾರಕ್ಕೆ ಸೇರಲು ಬಹಳ ಸಂತೋಷವಾಗುತ್ತಿದೆ

ಸಂಪದ ಪರಿವಾರಕ್ಕೆ ಸೇರಲು ಬಹಳ ಸಂತೋಷವಾಗುತ್ತಿದೆ

ಸಂಪದದ ಎಲ್ಲಾ ಕನ್ನಡ ಬಂಧುಗಳಿಗೆ ನಮಸ್ಕಾರಗಳು,

ನಾನು ಒಬ್ಬ ಕನ್ನಡ ಭಾಷೆಯ, ಕನ್ನಡ ಸಂಸ್ಕೃತಿಯ ಅಭಿಮಾನಿ. ನಾನು ಕೆಲವೇ ದಿನಗಳ ಹಿಂದಷ್ಟೇ ಸಂಪದಕ್ಕೆ ಸದಸ್ಯನಾಗಿದ್ದೇನೆ.  ನಾನು ಈ ತಾಣಕ್ಕೆ ಹರಿದಾಸ ಕೀರ್ತನೆಗಳನ್ನು ಗೂಗಲ್ ಮಾಡುತ್ತಾ ತಲುಪಿದೆ. ಇಲ್ಲಿಯವರೆಗೆ ನನಗೆ ಬೇಕಾದ ಬಹಳಷ್ಟು ದಾಸ ಸಾಹಿತ್ಯವನ್ನು ಹರಿದಾಸ ಸಂಪದ ಒದಗಿಸಿದೆ. ದಾಸರ ಪದಗಳ ಬಗ್ಗೆ ನನಗೆ ಎಲ್ಲರಂತೆ ಸಾಮಾನ್ಯವಾದ ತಿಳುವಳಿಕೆ ಮಾತ್ರ ಇತ್ತು. ಆದರೆ ಈಗ್ಗೆ ೨ ವರ್ಷಗಳಿಂದ ಶ್ರೀ ಮೈಸೂರು ರಾಮಚಂದ್ರಾಚಾರ್ ಅವರ ದಾಸ ವಾಣಿಯನ್ನು ಕೇಳುತ್ತಾ, ಅವರ ಅತ್ಯದ್ಭುತ ಕಂಠ ಸಿರಿಯ ಪ್ರಭಾವದಿಂದ ನನ್ನಲ್ಲಿ ದಾಸ ಸಾಹಿತ್ಯದ ಬಗ್ಗೆ ಹೆಚ್ಚಿನ ಆಸಕ್ತಿಯ ಕಿಡಿ ಹೊತ್ತಿತು. ಈ ಮೊದಲೇ ನಾನು ಹೇಳಿದಂತೆ ನನಗೆ ಬೇಕಾದ ದಾಸ ಸಾಹಿತ್ಯವನ್ನು ಬೇರೆಲ್ಲಾ ಅಂತರ್ಜಾಲ ತಾಣಗಳಿಗಿಂತ ಜಾಸ್ತಿ ಹೆಚ್.ಎಸ್.ನೆಟ್ ಒದಗಿಸಿದೆ.

ಹಾಗಾಗಿ ಈಗ ನಾನು, ಶ್ರೀ ರಾಮಚಂದ್ರಾಚಾರ್ ಅವರ ಹಾಡುಗಳನ್ನು ಕೇಳಿ ಬರೆದುಕೊಂಡ ಕೆಲವು ದಾಸರ ಕೀರ್ತನೆಗಳನ್ನು ಸಂಪದದಲ್ಲಿ ಪ್ರಕಟಿಸಲು ಉತ್ಸುಕನಾಗಿದ್ದೇನೆ. ದಾಸ ಸಾಹಿತ್ಯದ ದೊಡ್ಡ ಸಂಗ್ರಹವನ್ನು ಹೊಂದಿರುವ ಈ ತಾಣಕ್ಕೆ ಕೃತಜ್ಞತೆಯಿಂದ ಹಾಗು ಸಂತೋಷದಿಂದ ಈ ನನ್ನ ಚಿಕ್ಕ ಸಂಗ್ರಹವನ್ನು ಸೇರಿಸುತ್ತಿದ್ದೇನೆ.

- ಧನ್ಯವಾದಗಳು,

ಸು.ವಿಮ್



Comments