ಕೈದಿಯೊಬ್ಬ ಜೈಲು ಸೂಪರಿಂಟೆಂಡೆಂಟ್ ಆಗಿದ್ದು!... ಮ್ಯಾಜಿಸ್ಟ್ರೇಟರೂ ಆಗಿದ್ದು!!

4.666665

      ಸುಮಾರು ೩೭ ವರ್ಷಗಳ ಹಿಂದೆ ಅವನೊಬ್ಬ ಜೈಲಿನ ಕೈದಿಯಾಗಿದ್ದ. ಆರು ತಿಂಗಳು ಹಾಸನದ ಜೈಲಿನಲ್ಲಿದ್ದ. ಅವನ ಮೇಲೆ ಭಾರತ ರಕ್ಷಣಾ ಕಾಯದೆಯನ್ವಯ ಹಲವಾರು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದವು. ಅದೇ ವ್ಯಕ್ತಿ  ಜೈಲಿನಿಂದ ಹೊರಬಂದ  ಸುಮಾರು ನಾಲ್ಕು ವರ್ಷಗಳ ನಂತರ  ಒಂದು ಉಪಕಾರಾಗೃಹದ ಜೈಲು ಸೂಪರಿಂಟೆಂಡೆಂಟ್ ಆಗಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ. ಇದಾಗಿ ೧೦ ವರ್ಷಗಳ ನಂತರದಲ್ಲಿ ಅವನು ತಹಸೀಲ್ದಾರ್ ಮತ್ತು ತಾಲ್ಲೂಕು ದಂಡಾಧಿಕಾರಿಯಾದ. ಆ ಹುದ್ದೆಯಲ್ಲಿ ಸುಮಾರು ೧೨ ವರ್ಷಗಳ ಕಾಲ ಕೆಲಸ ಮಾಡಿದ. ಹೀಗೇ ಆಗಲು ಸಾಧ್ಯವೇ? ಒಬ್ಬ ಕೈದಿ ಜೈಲು ಸೂಪರಿಂಟೆಂಡೆಂಟ್ ಆಗುವುದು ಮತ್ತು ನಂತರ ತಾಲ್ಲೂಕು ಮ್ಯಾಜಿಸ್ಟ್ರೇಟರೂ ಆದನೆಂದರೆ ಯಾರೂ ನಂಬಲಾರರು. ಆದರೆ ಇದು ನಡೆದ ಸಂಗತಿ.

      ಅವನು ಕೆ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕಂದಾಯ ಇಲಾಖೆಯ ಸೇವೆಗೆ ಪ್ರಥಮ ದರ್ಜೆ ರೆವಿನ್ಯೂ ಇನ್ಸ್ ಪೆಕ್ಟರ್ ಆಗಿ ೧೯೭೩ರಲ್ಲಿ ಕೆಲಸಕ್ಕೆ ಸೇರಿದ್ದ. ಅವನು ಎರಡು ವರ್ಷ ಸೇವೆ ಸಲ್ಲಿಸಿಬಹುದು. ೧೯೭೫ರಲ್ಲಿ ಕರಾಳ ತುರ್ತು ಪರಿಸ್ಥಿತಿ ಜಾರಿಗೆ ಬಂದು ಆಗ ಆರೆಸ್ಸೆಸ್ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳನ್ನು ನಿಷೇಧಿಸಲಾಗಿತ್ತು. ಅವನನ್ನೂ ಆರೆಸ್ಸೆಸ್ ಕಾರ್ಯಕರ್ತನೆಂಬ ಕಾರಣದ ಮೇಲೆ ಬಂಧಿಸಿ ಭಾರತ ರಕ್ಷಣಾ ಕಾಯದೆಯಡಿಯಲ್ಲಿ ಮೊಕದ್ದಮೆ ದಾಖಲಿಸಿದಾಗ ಅವನನ್ನು ಸೇವೆಯಿಂದ ಅಮಾನತ್ತಿನಲ್ಲಿ ಇರಿಸಲಾಯಿತು. ಈ ಕಾರಣ ನೆಪಕ್ಕಾಗಿದ್ದು ನಿಜವಾದ ಕಾರಣ ಬೇರೆಯದೇ ಆಗಿತ್ತು. ಇದಕ್ಕಾಗಿ ಅವನು ಜಿಲ್ಲಾಧಿಕಾರಿಯವರೊಂದಿಗೆ ಜಗಳವಾಡಿದ. ಪರಿಣಾಮ, ಇನ್ನೂ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಅವನು ಆರೋಪಿಯಾಗಬೇಕಾಯಿತು. ಭಾರತ ರಕ್ಷಣಾ ಕಾಯದೆಯನ್ವಯ ಮೊಕದ್ದಮೆಗಳು ದಾಖಲಾಗಿದ್ದು, ಅವನೊಬ್ಬ ವಿಧ್ವಂಸಕ ಕೃತ್ಯಗಳನ್ನು ಎಸಗಿದ ಭಯೋತ್ಪಾದಕನೆಂದು ಬಿಂಬಿಸಲಾಗಿತ್ತು. ವಿಚಾರಣೆಯಿಲ್ಲದೆ ಎರಡು ವರ್ಷಗಳ ಕಾಲ ಬಂಧಿಸಿಡಲು ಅವಕಾಶವಿರುವ ಆಂತರಿಕ ಭದ್ರತಾ ಸಂರಕ್ಷಣಾ ಕಾಯದೆ   (M.I.S.A. - Maintenance of Inernal Security Act) ಪ್ರಕಾರ  ಜಿಲ್ಲಾ ಆರಕ್ಷಕ ಅಧಿಕಾರಿಯವರು ಅವನನ್ನು ಬಂಧಿಸಲು ಶಿಫಾರಸು ಮಾಡಿದ್ದರು. ಜೈಲಿನಿಂದ ಹೊರಗಿದ್ದಾಗ ಪ್ರತಿದಿನ ಪೋಲಿಸ್ ಠಾಣೆಗೆ ಹೋಗಿ ಹಾಜರಾತಿ ಹಾಕಬೇಕಾಗಿತ್ತು. ಸುಮಾರು ಒಂದೂವರೆ ವರ್ಷಗಳ ಕಾಲ ಅಮಾನತ್ತಿನಲ್ಲಿ ಕಳೆದ ಅವನನ್ನು ವಿಚಾರಣೆ ಕಾಯ್ದಿರಿಸಿ ಪುನರ್ನೇಮಕ ಮಾಡಿ ಗುಲ್ಬರ್ಗ ಜಿಲ್ಲೆಗೆ ವರ್ಗಾಯಿಸಿದ್ದರು.  ಮತ್ತೆ ನೌಕರಿ ಸಿಗುವ ಆಸೆಯನ್ನೇ ಅವನು ಕೈಬಿಟ್ಟಿದ್ದ. ಮುಂದೆ ಜೀವನ ನಿರ್ವಹಣೆಗೆ ಏನು ಮಾಡಬೇಕೆಂದು ಜೈಲಿನ ಗೋಡೆಗೆ ಒರಗಿ ಚಿಂತಿಸುತ್ತಿದ್ದ.  ತುರ್ತು ಪರಿಸ್ಥಿತಿ ಹಿಂತೆಗೆತವಾದ ಮೇಲೆ ಇತ್ಯರ್ಥವಾಗದೇ ಇದ್ದ ಪ್ರಕರಣಗಳನ್ನು ಸರ್ಕಾರ ವಾಪಸು ಪಡೆದದ್ದರಿಂದ ಅವನು ದೋಷಮುಕ್ತನಾದ. ನ್ಯಾಯಾಲಯದ ಆದೇಶದಂತೆ ಅವನನ್ನು ಪುನಃ ಹಾಸನಕ್ಕೆ ಮರುವರ್ಗಾಯಿಸಿದರು. ಬರಬೇಕಾಗಿದ್ದ ಬಾಕಿ ವೇತನವೂ ಸಿಕ್ಕಿತು. 

      ಉಪತಹಸೀಲ್ದಾರ್ ಆಗಿ ಬಡ್ತಿ ಹೊಂದಿದ ಆತ ಮೈಸೂರಿನಲ್ಲಿ ಒಂದು ವರ್ಷ ಕೆಲಸ ಮಾಡಿದ ನಂತರ ಅವನಿಗೆ ಹೊಳೆನರಸಿಪುರಕ್ಕೆ ವರ್ಗಾವಣೆಯಾಯಿತು. ಆಗ ಕರ್ನಾಟಕದಲ್ಲಿದ್ದ ಜೈಲುಗಳ ಪೈಕಿ ೨೧ ಉಪಕಾರಾಗೃಹಗಳ ಮೇಲ್ವಿಚಾರಣೆ ಹೊಣೆಯನ್ನು ಕಂದಾಯ ಇಲಾಖೆಯ ಉಪತಹಸೀಲ್ದಾರರಿಗೆ ವಹಿಸಿದ್ದು, ಆ ಪೈಕಿ ಹೊಳೆನರಸಿಪುರದ ಉಪಕಾರಾಗೃಹವೂ ಒಂದಾಗಿತ್ತು. ಹೀಗಾಗಿ ಉಪತಹಸೀಲ್ದಾರನಾಗಿದ್ದ ಅವನು ಪದನಿಮಿತ್ತ ಅಲ್ಲಿನ ಜೈಲು ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುವ ಅವಕಾಶವೂ ಲಭ್ಯವಾಯಿತು. ಕೈದಿಯಾಗಿ ಅವರ ಕಷ್ಟ-ನೋವುಗಳ ಅರಿವಿದ್ದ ಅವನು ಅಲ್ಲಿನ ಒಳ್ಳೆಯ ಜೈಲು ಸೂಪರಿಂಟೆಂಡೆಂಟ್ ಅನ್ನಿಸಿಕೊಂಡು ನಾಲ್ಕು ವರ್ಷ ಕಾರ್ಯ ನಿರ್ವಹಿಸಿದ. ಆಗ ಅಲ್ಲಿದ್ದ ಹಲವಾರು ಕೈದಿಗಳು ಈಗಲೂ ಅವನನ್ನು ಗೌರವದಿಂದ ಕಾಣುತ್ತಾರೆ.

      ನಂತರದ ಹತ್ತು ವರ್ಷಗಳು ಉಪತಹಸೀಲ್ದಾರ್ ಆಗಿದ್ದ ಅವನಿಗೆ ಬಡ್ತಿ ಸಿಕ್ಕಿ ತಹಸೀಲ್ದಾರನೂ ಆದ. ತಾಲ್ಲೂಕು ದಂಡಾಧಿಕಾರಿಯಾಗಿ ಕಾನೂನು-ಸುವ್ಯವಸ್ಥೆ, ಶಾಂತಿಪಾಲನೆಯ ಹೊಣೆಗಾರಿಕೆ ಇದ್ದು, ಅಪರಾಧಗಳು ಘಟಿಸುವ ಮುನ್ನ ಅದನ್ನು ತಡೆಯುವ ಜವಾಬ್ದಾರಿ ಅವನ ಮೇಲಿತ್ತು. ಅಶಾಂತಿ ನಿರ್ಮಿಸುವವರ ವಿರುದ್ಧ, ಕಾನೂನು-ಸುವ್ಯವಸ್ಥೆ ಸಮಸ್ಯೆ ಉಂಟು ಮಾಡುವವರ ವಿರುದ್ಧ ಕಠಿಣ ಮನೋಭಾವ ಹೊಂದಿದ್ದ ಆತ ಹಲವರನ್ನು ನ್ಯಾಯಾಂಗ ಬಂಧನಕ್ಕೂ ಒಳಪಡಿಸಿದ್ದ. ರಾಷ್ಟ್ರೀಯ ಉತ್ಸವಗಳ ಸಂದರ್ಭದಲ್ಲಿ ರಾಷ್ಟ್ರದ್ವಜವನ್ನು ಹಾರಿಸಿ, ದ್ವಜವಂದನೆ ಮಾಡುವ, ಧ್ವಜವಂದನೆ ಸ್ವೀಕರಿಸುವ ಅವಕಾಶ ಒದಗಿಸಿದ್ದಕ್ಕಾಗಿ ಅವನು ದೇವರಿಗೆ ಆಭಾರಿಯಾಗಿದ್ದ, ಮಾಡಿದ ಕೆಲಸಗಳಲ್ಲಿ ಆತ್ಮತೃಪ್ತಿ ಹೊಂದಿದ್ದ. ೧೨ ವರ್ಷಗಳ ಕಾಲ ಆ ಹುದ್ದೆಯಲ್ಲಿ ಕೆಲಸ ಮಾಡಿ ಸೇವೆಯಿಂದ ಸ್ವ ಇಚ್ಛಾ ನಿವೃತ್ತಿ ಹೊಂದಿದ.

     ಆ ವ್ಯಕ್ತಿ ಬೇರಾರೂ ಅಲ್ಲ. . . . . . . . .ನಾನೇ! ನನಗೆ ಇಂತಹ ಅಪರೂಪದ ಅವಕಾಶಗಳನ್ನು ನೀಡಿ, ಅನೇಕ ಅನುಭವಗಳನ್ನು ಹೊಂದುವಂತೆ ಮಾಡಿದ ಆ ದೇವರಿಗೆ ಋಣಿ ನಾನು. 

-ಕ.ವೆಂ.ನಾಗರಾಜ್.

*************************

    ಕೈದಿ >>>>>>>>>ಜೈಲು ಸೂಪರಿಂಟೆಂಡೆಂಟ್


[ಒಬ್ಬ ಕೈದಿಯಾಗಿ, ಜೈಲು ಸೂಪರಿಂಟೆಂಡೆಂಟ್ ಆಗಿ ನನ್ನ ಅನುಭವಗಳನ್ನು 'ಸೇವಾಯಾತ್ರೆ' ಶೀರ್ಷಿಕೆಯಲ್ಲಿ ದಾಖಲಿಸಿರುವೆ. ಅಸಕ್ತರು ಓದಬಹುದು. ಲಿಂಕ್ ಇಲ್ಲಿದೆ:  http://kavimana.blogspot.in/search/label/%E0%B2%B8%E0%B3%87%E0%B2%B5%E0%B2%BE%E0%B2%AF%E0%B2%BE%E0%B2%A4%E0%B3%8D%E0%B2%B0%E0%B3%86 ]


 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕವಿನಾಗರಾಜ್ ರವರೆ, ವಂದನೆಗಳು, <<ಸುಮಾರು ೩೭ ವರ್ಷಗಳ ಹಿಂದೆ ಅವನೊಬ್ಬ ಜೈಲಿನ ಕೈದಿಯಾಗಿದ್ದ. ಆರು ತಿಂಗಳು ಹಾಸನದ ಜೈಲಿನಲ್ಲಿದ್ದ. ಅವನ ಮೇಲೆ ಭಾರತ ರಕ್ಷಣಾ ಕಾಯದೆಯನ್ವಯ ಹಲವಾರು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದವು. ಅದೇ ವ್ಯಕ್ತಿ ಜೈಲಿನಿಂದ ಹೊರಬಂದ ಸುಮಾರು ನಾಲ್ಕು ವರ್ಷಗಳ ನಂತರ ಒಂದು ಉಪಕಾರಾಗೃಹದ ಜೈಲು ಸೂಪರಿಂಟೆಂಡೆಂಟ್ ಆಗಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ. ಇದಾಗಿ ೧೦ ವರ್ಷಗಳ ನಂತರದಲ್ಲಿ ಅವನು ತಹಸೀಲ್ದಾರ್ ಮತ್ತು ತಾಲ್ಲೂಕು ದಂಡಾಧಿಕಾರಿಯಾದ. ಆ ಹುದ್ದೆಯಲ್ಲಿ ಸುಮಾರು ೧೨ ವರ್ಷಗಳ ಕಾಲ ಕೆಲಸ ಮಾಡಿದ. ಹೀಗೇ ಆಗಲು ಸಾಧ್ಯವೇ? ಒಬ್ಬ ಕೈದಿ ಜೈಲು ಸೂಪರಿಂಟೆಂಡೆಂಟ್ ಆಗುವುದು ಮತ್ತು ನಂತರ ತಾಲ್ಲೂಕು ಮ್ಯಾಜಿಸ್ಟ್ರೇಟರೂ ಆದನೆಂದರೆ ಯಾರೂ ನಂಬಲಾರರು..>> ಅಂತಹ ಮಹಾನ್ ವ್ಯಕ್ತಿಗಳ ಅನುಭವ ಕಥಾನಕವನ್ನು ಓದುವ ಹಂಚಿಕೊಳ್ಳುವ ಸದವಕಾಶ ಒದಗಿಸಿದ ಸಂಪದಕ್ಕೆ ನಾನು ಚಿರಋಣಿ. ಕವಿನಾಗರಾಜ್ ರವರೆ ನಿಜಕ್ಕೂ ನಿಮ್ಮ ಸಾಧನೆಗೊಂದು ಸಲಾಂ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಂದನೆ, ನಾರಾಯಣ ಭಾಗ್ವತರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಗರಾಜ ಅವರೆ ನಮಸ್ಕಾರಗಳು. ಲೇಖನವನ್ನು ಓದುತ್ತಾ ....ಕ್ಲೈಮಾಕ್ಸ ಘಟ್ಟ ತಲುಪಿದೊಡನೆ ಮನಸ್ಸು ಆನಂದ ಪರವಶಗೊಂಡಿತು. ಕಾರಣ ಆ ಅದೃಷ್ಟಶಾಲಿ ವ್ಯಕ್ತಿ ಬೇರೆ ಯಾರು ಆಗಿರದೆ ಸ್ವತಃ ತಾವೆ ಎಂದು ಓದಿ. ಜೀವನದಲ್ಲಿ ಎಂಥಹ ತಿರುವು. You are simply great. Hats off to you.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇಂತಹ ಅಪರೂಪದ ಅವಕಾಶ ಕೊಟ್ಟ ದೇವರು ದೊಡ್ಡವನು. ನಿಮ್ಮ ಅಭಿನಂದನೆಗೆ ಕೃತಜ್ಞತೆಗಳು, ರಮೇಶ ಕಾಮತರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿಗಳೇ ಒಂದು ಒಳ್ಳೆಯ -ನಮಗೆ ಗೊತ್ತಿರದಿದ್ದ ಸಂಗತಿಯನ್ನ ಭಲೇ ರೋಚಕವಾಗಿ ಆರಂಭಿಸಿ ಕುತೂಹಲಕಾರಿ ........ಕ್ಕೆ ಅಂತ್ಯ ಗೊಳಿಸಿದ್ದೀರ.. ++++++++++++++++++++++ ನಿಮ್ಮದು ವಿಶೇಷ ಸಾಧನೆಯೇ ಸರಿ... ====================== ಜೊತೆಗಿನ ಫೋಟೋಗಳು ಬರಹದ ಕಳೆ ಹೆಚ್ಛ್ಸಿಸಿವೆ.. ಮತ್ತು ಬರಹಕ್ಕೆ ಪ್ರಾಮುಖ್ಯತೆ ತನ್ದಿತ್ತಿವೆ.. ನಿಮ್ಮ ಅನುಭವದ ಬುತ್ತೀಯಲ್ಲಿ ಇನ್ನೂ ಏನೇನೆಲ್ಲ 'ವಿಸ್ಮಯ ' ವಿಷ್ಯ ಇದೆಯೋ!!....... ಶುಭವಾಗಲಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

'ವಿಸ್ಮಯ'ವಲ್ಲದಿದ್ದರೂ ಬರೆಯುವಂತಹ ಸಂಗತಿಗಳು ಇವೆ. ಪ್ರತಿಕ್ರಿಯೆಗೆ ಧನ್ಯವಾದ, ವೆಂಕಟೇಶರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನೀವು ಇದನ್ನು ನಿಮ್ಮದೆಂದು ಹೇಳಿರದಿದ್ದರೂ ಮತ್ತು ಚಿತ್ರಗಳನ್ನು ಹಾಕಿರದಿದ್ದರೂ ನಾನೇ ಪ್ರಶ್ನಿಸುತ್ತಿದ್ದೆ.. ನಿಮ್ಮದೇ ಕಥೆಯಲ್ಲವೇ ಎಂದು! ನಿಮ್ಮ ಉಳಿದ ಬರಹಗಳಿಂದ ಸ್ಪಷ್ಟ ಚಿತ್ರಣ ಸಿಗುತ್ತದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಜ, ಸಂತೋಷ್. ಹಿಂದಿನ ಬರಹಗಳನ್ನು ಓದಿದವರಿಗೆ ಈ ಕುರಿತು ತಿಳಿದಿರುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿ ನಾಗರಾಜರೆ ಹಿಂದೊಮ್ಮೆ ತಮ್ಮ ಜೀವನದ ಅನುಭವಗಳ ಮಾಲಿಕೆಯಲ್ಲಿ ಇದನ್ನು ಓದುವಾಗ ತಿಳಿದಿದ್ದೆ ತುಂಬಾ ಕಡಿಮೆ ಜನರಿಗೆ ಈ ರೀತಿಯ ಅನುಭವ ಆಗುವ ಸಾದ್ಯತೆ ಇರುತ್ತದೆ ಕೈದಿಯಾಗಿ ಜೈಲಿನ ಸುಪೆರಿಟೆಂಡೆಟ್ ಆಗುವುದು, ಕೈದಿಯಾಗಿ ಪುನಃ ಅದೇ ದೇಶದ ಅಧ್ಯಕ್ಷನಾಗಿ ಅತ್ಯುತ್ತಮ ಪದವೇರುವುದು ಕೆಲವರ ಸಾದನೆಯಿಂದ . ದೈವದ ಕೃಪೆಯಿಂದ. ಅವರು ಧನ್ಯರು. ಜೀವನದಲ್ಲಿ ಮತ್ತೊಂದು ಮುಖವಿದೆ ದೇಶದ ಅಧ್ಯಕ್ಷರಾಗಿ ತಪ್ಪೆಸಗಿ ಜೈಲು ಸೇರುವುದು. ರಾಜ್ಯದ ಮುಖ್ಯಮಂತ್ರಿಯಾಗಿ , ಮಂತ್ರಿಯಾಗಿ , ಕೇಂದ್ರದ ಮಂತ್ರಿಯಾಗಿ, ಇಲ್ಲ ಅತಿ ಪ್ರಸಿದ್ದ ವ್ಯಕ್ತಿಯಾಗಿದ್ದರು ತಮ್ಮ ತಪ್ಪಿನಿಂದ ಜೈಲು ಸೇಋವುದು ಇವೆಲ್ಲ ಅನುಭವಗಳು, ಅವರ ಹೊಣಗೇಡಿತನದಿಂದ ಆಗುವುದು. ನಿಮ್ಮ ಜೀವನದ ಯಶಸ್ಸಿನ ಕತೆಗೆ ನಿಮಗೊಂದು ನಮನ *ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ವಿಮರ್ಶಾತ್ಮಕ ಪ್ರತಿಕ್ರಿಯೆಗೆ ವಂದನೆ, ಪಾರ್ಥರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿಗಳೆ, <<ಕೈದಿಯೊಬ್ಬ ಜೈಲು ಸೂಪರಿಂಟೆಂಡೆಂಟ್ ಆಗಿದ್ದು!... ಮ್ಯಾಜಿಸ್ಟ್ರೇಟರೂ ಆಗಿದ್ದು!!>> ಈ ರೀತಿಯ ಭಗವಂತನ ಲೀಲೆಯಲ್ಲಿ ನೀವು ಪಾತ್ರದಾರಿಗಳಾಗಿರುವುದು ನಿಜಕ್ಕೂ ವಿಸ್ಮಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನೀವು ಹೇಳಿರುವುದು ಸರಿ. ಇದು 'ಅವನ' ಲೀಲೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿಗಳೇ ನಿಮ್ಮ ಬರಹಗಳನ್ನು ಓದುವಾಗ ಒ೦ದು ರೀತಿಯ ಕುತೂಹಲ ಇರುತ್ತದೆ. ಏಕೆ೦ದರೆ ಎಲ್ಲವೂ ಸತ್ಯ ಘಟನೆಗಳು ಆದ್ದರಿ೦ದ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದ, ಜಯಂತ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+1 ನಿಮ್ಮ ಅನುಭವ ಸಾರ ನಮ್ಮಂಥವರಿಗೆ ಮಾರ್ಗದರ್ಶನವಾಗಲಿ... ಬರೆಯುತ್ತಿರಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:) ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿ ನಾಗರಾಜರೆ, ಜೀವನದ ಗುರಿ ಸಾಧಕರ ಏಳು ಬೀಳುಗಳು, ಅನುಭವಗಳು ರೋಚಕವೆನಿಸುತ್ತದೆ. ಸುಖ ದುಃಖಗಳು ನಮಗೊದಗುವ ಅವಸ್ಥೆಗಳೇ ಹೊರತು ಅವೇ ನಾವಲ್ಲ. ನಾವು ನಾವಾಗಿದ್ದು ಅನುಭವಿಸಿದಾಗ ಎಲ್ಲವು ಸುಂದರವಾಗಿಯೇ ಕಾಣುತ್ತದೆ. ಎಂಬ ಅನುಭವಿಕರ ಮಾತು ಸತ್ಯವೆನಿಸುತ್ತದಲ್ಲವೆ ? ಸತ್ಯಂ ಶಿವಂ ಸುಂದರಂ ತಾನೇ ? ನಿಮ್ಮ ಜೀವನದ ಈ ಘಟ್ಟಗಳನ್ನು ಚೆನ್ನಾಗಿ ದಾಖಲಿಸಿ ಮನಮುಟ್ಟುವಂತೆ ಬರೆದಿದ್ದೀರಿ. ಅಭಿನಂದನೆಗಳು. - ಸದಾನಂದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆನಂದಕರ ಪ್ರತಿಕ್ರಿಯೆ ನೀಡಿರುವ ಸದಾನಂದರಿಗೆ ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿನಾಗರಾಜರೆ, >>>ನನಗೆ ಇಂತಹ ಅಪರೂಪದ ಅವಕಾಶಗಳನ್ನು ನೀಡಿ, ಅನೇಕ ಅನುಭವಗಳನ್ನು ಹೊಂದುವಂತೆ ಮಾಡಿದ ಆ ದೇವರಿಗೆ ಋಣಿ ನಾನು. -ಸಣ್ಣ ಸಣ್ಣ ತೊಂದರೆಗೂ "ದೇವರೇ. ನನಗೇ ಯಾಕೆ ಈ ಕಷ್ಟ" ಎಂದು ಗೋಳಾಡುವವರೇ ಹೆಚ್ಚು. ಇಂದಿನ ಯುವಕರಿಗೆ ಮಾರ್ಗದರ್ಶಿ ನಡವಳಿಕೆ ತಮ್ಮದು. ನ್ಯಾಯ, ನೀತಿ, ಉತ್ತಮ ನಡವಳಿಕೆಗೆ ಇಂದಲ್ಲ ನಾಳೆ ಮನ್ನಣೆ ಸಿಕ್ಕೇ ಸಿಗುವುದು. ತಮಗೆ ನನ್ನದೂ ಒಂದು ಗ್ರ್ಯಾಂಡ್ ಸಲ್ಯೂಟ್. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:)) ಸಲ್ಯೂಟ್ ಕೊಟ್ಟು, ತೆಗೆದುಕೊಂಡು ಅಬ್ಯಾಸವಿರುವ ನಾನು, ನಿಮ್ಮ ಗ್ರ್ಯಾಂಡ್ ಸಲ್ಯೂಟ್ ಅನ್ನೂ ಸ್ವೀಕರಿಸಿ, ಮರುನೀಡಿರುವೆ. ದನ್ಯವಾದಗಳು, ಗಣೇಶರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಿನಿಮಾಗಳಲ್ಲಿ ಆದರ್ಶದೊಂದಿದೆಗೆ ಬದುಕಿದ `ಹಿರೋ`ಗಳನ್ನು, ಅವರು ಪಟ್ಟಕಷ್ಟಗಳನ್ನು ನೋಡಿ, ಕೆಲವೊಮ್ಮೆ ಅವರ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ನಾನೆ ಅದೆಂದು ಕೊಂಡು ಸಂತೋಷ ಪಟ್ಟಿರುವುದೋ ಉಂಟು. ತಮ್ಮ ಜೀವನಾಮ್ಱತ ಅನುಭವವನ್ನು ನೋಡಿದರೆ ಮಾತು ಗಂಟಲಲ್ಲಿಯೆ ಉಳಿಯುತ್ತಿದೆ. ತಮಂಥವರ ಸಂತತಿ ಕೋಟಿ ಕೋಟಿಗಳಾಗಲಿ, ಅನ್ಯಾಯದ ವಿರುದ್ಧ ಕುಳಿತು ಚರ್ಚಿಸಿ ಮರೆತು ಬಿಡುತ್ತೇವೆ. ಆದ್ರೆ ಅದೆ ವ್ಯವಸ್ಥೆಯಲ್ಲಿ ದರ್ಮದ ಪರ ಕೆಲಸಮಾಡಿ ಸಾಧಿಸುವುದು ಬಹಳ ಕಷ್ಟ, ನಿಜಕ್ಕೂ ನಿಮ್ಮ ಬದುಕು ಮಾದರಿಯ ಪುಸ್ತಕ. ದನ್ಯವಾದಗಳು ಮೂಢ ಕವಿಗಳಿಗೆ, ತಮ್ಮವ, ರಾಮಮೋಹನ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ರಾಮಮೋಹನರೇ, ಹೊಗಳಿಕೆಗೆ ಉಬ್ಬುವುದು ಸಾಮಾನ್ಯರ ಲಕ್ಷಣ. ಸಾಮಾನ್ಯನಾದ ನನಗೂ ನಿಮ್ಮ ಪ್ರತಿಕ್ರಿಯೆಯಿಂದ ಸಂತೋಷವಾಗಿದೆ. ಧನ್ಯವಾದಗಳು. -ನಾಗರಾಜ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಿಸ್ಮಯಗಳು ತುಂಬಿರುವ " ಕಣಜ" ನಿಮ್ಮ ಜೀವನದ ಅನುಭವ ನಾಗರಾಜ್ ರವರೇ ನಿಮ್ಮ ಸಾಧನೆಗೆ ನನ್ನ ಹೃದಯ ತುಂಬಿದ ನಮನ ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:) ಧನ್ಯವಾದ, ಸತೀಶರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿ ನಾಗರಾಜ ರವರಿಗೆ ವಂದನೆಗಳು ಮಾನ್ಯರೆ ನಿಮ್ಮ ಲೇಖನ '‍‍‍‍ಓದಿದೆ, ಬಹಳ ಸ್ವಾರಸ್ಯಪೂರ್ಣವಾಗಿ ಬರೆದಿದ್ದೀರಿ, ಇದು ನಿಮ್ಮದೆ ಅನುಭವದ ಕಥಾನಕವೆನ್ನುವುದು ಕೊನೆಗೆ ತಿಳಿಯುತ್ತದೆ. ಅದು ನಿಮ್ಮ ಸತ್ಯಸಂಧತೆಗೆ ಸಂದ ಗೌರವ ಎಂದು ನನ್ನ ಅನಿಸಿಕೆ, ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಅನಿಸಿಕೆಗೆ ಕೃತಜ್ಞತೆಗಳು, ಹನುಮಂತ ಪಾಟೀಲರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.