ಪ್ರೀತಿ - ನನ್ನ ಮನದಾಳದ ಮಾತುಗಳು

ಪ್ರೀತಿ - ನನ್ನ ಮನದಾಳದ ಮಾತುಗಳು

ಕವನ

 

ಜೀವನವೆಂಬ ಸಾಗರವನ್ನು ಪ್ರೀತಿಯೆಂಬ

ದೋಣಿಯಲ್ಲಿ ನೋಡಲು ನಾ ಹೊರಟೆ,

ನೋಟವೆಂಬ ನಿನ್ನ ಮಾಟದಿಂದ ತೀರದಲ್ಲಿದ್ದ

ನನ್ನನ್ನು ಸೆಳೆದೊಯ್ದು ನಡುಕಡಲಿನಲ್ಲಿ ಮುಳುಗಿಸಿ ಬಿಟ್ಟೆಯಲ್ಲಾ.

ನೀ ಮುಳುಗಿಸಿದ್ದು ನೀರಿನಲ್ಲಾದರೆ ನಾ ಸಾಯುತ್ತಿದ್ದೆ,

ಆದರೆ ನೀ ಮುಳುಗಿಸಿದ್ದು ನೀರಿನಲ್ಲಲ್ಲ.ವೇಧನೆಗಳಲ್ಲಿ,

ಸಾವಿರ ವರುಷ ಕಂಡರೂ ಮುಗಿಯಲಾದ ಕನಸುಗಳಲ್ಲಿ.

ನೀ ಮುಳುಗಿಸುವಾಗ ನಿನ್ನ ಮನಸ್ಸು ನಿನ್ನಲ್ಲಿತ್ತು.

ಈಗ ನಿನ್ನ ಮನಸ್ಸು ನನ್ನಲ್ಲಿದೆ.

ನಿನ್ನ ಪ್ರೀತಿ ನನ್ನಲ್ಲಿದೆ, ನಿನ್ನ ಬಿಂಬ ನನ್ನ ಕಣ್ಣಲಿದೆ.

ಈ ಎಲ್ಲಾ ಭಾವನೆಗಳು ನನ್ನವು. ನನ್ನ ಮನದಾಳದವು.

 

Comments