ಮುಸ್ಸಂಜೆಯಾಯ್ತು....ಬಾ ಸಾಕಿ!!!
ಚಿತ್ರ
ಮನೆಯಲಿರುವ ಎಲ್ಲಾ,
ಕೋಣೆಗಳು ಮುಚ್ಚಿಕೊಂಡಿವೆ...!
ತವಕವಿಲ್ಲ...ತೆರೆದುಕೊೞಲು....
ತವಕದ ಆ ಮಧುರತೆ...
ಕಳೆದುಕೊಂಡಿವೆ...ಬಾಗಿಲುಗಳು...!!
ಕೋಣೆಗಳಿಗೆಲ್ಲಾ ನೆನಪಿನ ಚಿತ್ರಗಳಿಂದ
ಶಿಂಗರಿಸಿದ್ದೇನೆ...!
ಗಾಳಿಗೆ ಅತ್ತಿತ್ತ ಅಲುಗಾಡುತ್ತವೆ...
ಒಂಚೂರೂ ಹೆದರಿಕೆಯಿಲ್ಲ....,
ಒಮ್ಮೆಯೂ ಹಾಳಾಗುತ್ತೇನೆ ಎನ್ನುವ
ಭಯವಂತೂ ಕಾಡುವುದೇ ಇಲ್ಲ....
ಶಿಥಿಲವಾಗಿವೆ ಕೋಣೆಗಳು...
ರಿಪೇರಿಯ ಕನಸಂತೂ ಇಲ್ಲವೇ..ಇಲ್ಲ!!
ಎಂದೋ ಪಾಳು ಬಿದ್ದಿವೆ ಅಲ್ಲಿ ಹಗಲುಗಳು...
ಬಿರುಕು ಬಿಟ್ಟಿವೆ ನಿಂತಲ್ಲಿಯೇ ಗೋಡೆಗಳು....!!
ಸುಮ್ಮನೆ ಒಮ್ಮೊಮ್ಮೆ ಕಣ್ಣು ಹಾಯಿಸುತ್ತೇನೆ....
ದಟ್ಟವಾದ ಮೋಡವೊಂದು ಹಾಯ್ದುಹೋಗುತ್ತದೆ....
ನಿಜ...ಸುರಿಯಲಲ್ಲಿ ಮನಸ್ಸಿಲ್ಲ...
ಕಾರಣ..ತುಂಬಿದ ಕನಸುಗಳಿಲ್ಲ....!!!
Rating
Comments
ಉ: ಮುಸ್ಸಂಜೆಯಾಯ್ತು....ಬಾ ಸಾಕಿ!!!
ಉ: ಮುಸ್ಸಂಜೆಯಾಯ್ತು....ಬಾ ಸಾಕಿ!!!
ಉ: ಮುಸ್ಸಂಜೆಯಾಯ್ತು....ಬಾ ಸಾಕಿ!!!
ಉ: ಮುಸ್ಸಂಜೆಯಾಯ್ತು....ಬಾ ಸಾಕಿ!!!
In reply to ಉ: ಮುಸ್ಸಂಜೆಯಾಯ್ತು....ಬಾ ಸಾಕಿ!!! by hprithvi
ಡಾ.ಪ್ರುಥ್ವಿ...ಧನ್ಯವಾದಗಳು.
ಡಾ.ಪ್ರುಥ್ವಿ...ಧನ್ಯವಾದಗಳು.