ನನ್ನವಳ ಅ೦ದ

ನನ್ನವಳ ಅ೦ದ

ಕವನ

ನಿನ್ನ ಸಿಹಿನುಡಿಯ ಕೇಳಿ ಕೋಗಿಲೆ
ಹಾಡದೆ ಮೂಕವಾಯಿತು,
ನಿನ್ನ ನಡೆಯನ್ನು ಕಂಡ ನವಿಲು
ನರ್ತಿಸದೆ ಸುಮ್ಮನಾಯಿತು,
ನಿನ್ನ ಅಂದವ ನೋಡಿ ಮೊಗ್ಗು
ಅರಳದೆ ಬಾಡಿ ಹೋಯಿತು.

ಬರಬೇಡಾ..........ಗೆಳತಿ ಬೆಳದಿಂಗಳಲಿ ನೀನು ಬರಬೇಡಾ
ಚಂದ್ರ, ಮರೆಯಾಗಿ... ಹೋದ
ಮೋಡಗಳ ಹಿಂದೆ, ನಿನ್ನ
ಹಾಲಂಥ ಮೈ ಬಣ್ಣ ನೋಡಿ..........

ನಗಬೇಡಾ........ಗೆಳತಿ ಮುಸ್ಸಂಜೆ ಹೊತ್ತಲಿ ನೀನು ನಗಬೇಡ
ಮಲ್ಲಿಗೆ, ತನಗೇನು ಕೆಲಸ ಎಂದು
ಅರಳದೆ ಹೋಯಿತು, ನಿನ್ನ
ಮುದ್ದಾದ ನಗುವ ನೋಡಿ.

ನಿನ್ನ ಮುಂಗುರಳ ಕಪ್ಪು ಕಂಡ
ಕತ್ತಲೆಯು ಸರಿದು ಹೋಯಿತು.
ನಿನ್ನ ಕೆಂದುಟಿಯ ಕೆಂಪು ಕಂಡ
ಮುಸ್ಸಂಜೆ ಸೂರ್ಯ ನಾಚಿತು.
ನಿನ್ನ ಕಣ್ಣಂಚಿನ ಮಿಂಚು ಕಂಡ
ಕಾರ್ಮೋಡ ಕರಗಿ ನೀರಾಯಿತು.

ಹೋಗದಿರು........ಗೆಳತಿ, ಹೂದೋಟಕೆ ನೀನು ಹೋಗದಿರು,
ಹೂವನ್ನೇ ಮರೆತ
ದುಂಬಿಗಳ ಹಿಂಡು, ಬಂದಾವು
ನಿನ್ನ ಹಿಂದೆ ಓಡಿ.

ಬಾರದಿರು..........ಗೆಳತಿ, ಕಡಲಿನ ತೀರಕೆ ನೀನು ಬಾರದಿರು, ನಿಂತಾವು ನಿಂತಲೇ
ಅಲೆಗಳು........ನಿನ್ನ
ವ್ಯೆಯಾರವನ್ನು ನೋಡಿ.

 

Comments