ಒಲವೇ

ಒಲವೇ

ಕವನ

ಒಲವೇ ನನ್ನೊಲುಮೆಯ ಹೂವೇ,
ಕೊಡುವೆ ಈ ಜೀವವ ಕೊಡುವೇ.
ನಿನ್ನ ಪ್ರೀತಿಯ ಸವಿ ಇರದಾ ನನ್ನೀ ಜೀವನವೇಕೆ?

ನಿನ ಒಂದು ನೋಟಕಾಗಿ ನಾ ನೂರು ಜನ್ಮ ಕಾಯುವೆ,
ನಿನ ಒಂದು ನಗುವಿಗಾಗಿ ನಾ ಪ್ರಾಣವನ್ನೇ ಕೊಡುವೆ.
ನಾ ಕಾಣೋ ಪ್ರತಿ ಕನಸು ನಿಂದೇನೆ.. ನಿಂದೇನೆ.

ನನ್ನ ಎದೆಗೆ, ಪ್ರೀತಿ ಗೂಡಿಗೆ,
ಪ್ರೇಮ ಪಕ್ಷಿಯಂತೆ ನೀನು ಬರಬಾರದೆ?
ನನ್ನ ಮನಸುನು, ನನ್ನ ಮನೆಯನು,
ಬೆಳ್ಳಿ ದೀಪದಂತೆ ನೀನು ಬೆಳಗಬಾರದೆ?

ನೀ ದೂರವಾದ ಆ ಕ್ಷಣ,
ನನ ಸಾವು ಖಂಡಿತ ಮರುಕ್ಷಣಾ...

ನೀನಿಲ್ಲದೆ ಏನಿಲ್ಲಾ,
ನೀನಗಾಗೆ ಬದುಕೆಲ್ಲಾ...

ಹೃದಯ ಬಡಿತವು, ನಾಡಿ ಮಿಡಿತವು,
ಪ್ರತಿ ಕ್ಷಣ ನಿನ್ನ ಹೆಸರ ಹೇಳುತಲಿದೆ,
ನನ್ನ ತನು ಮನ, ನನ್ನ ಜೀವನ,
ಪ್ರತಿ ದಿನ ನಿನಗಾಗಿ ಕಾಯುತಲಿದೆ.

ನೀನೊಮ್ಮೆ ನೋಡಿ ನಕ್ಕರೆ,
ನನ್ನ ಬಾಳು ಹಾಲು ಸಕ್ಕರೆ...

ನೀ ಹೆಜ್ಜೆ ಇಡುವಲ್ಲಿ,
ಹೂವಾಗಿ ನಾ ಬರುವೆ...

ಒಲವೇ ನನ್ನೊಲುಮೆಯಹೂವೇ,
ಕೊಡುವೆ ಜೀವವ ಕೊಡುವೇ.
ನಿನ್ನಪ್ರೀತಿಯಸವಿಇರದಾನನ್ನೀಜೀವನವೇಕೆ?

ನಿನ ಒಂದು ನೋಟಕಾಗಿ ನಾ ನೂರು ಜನ್ಮ ಕಾಯುವೆ,
ನಿನ ಒಂದು ನಗುವಿಗಾಗಿನಾ ಪ್ರಾಣವನ್ನೇಕೊಡುವೆ.
ನಾ ಕಾಣೋ ಪ್ರತಿ ಕನಸು ನಿಂದೇನೆ.. ನಿಂದೇನೆ.

Comments