ಹೊಗೆಯ ಹಾದಿಯಲ್ಲಿ.. ಒಂದು ತನಿಖಾ ವರದಿ :)

ಹೊಗೆಯ ಹಾದಿಯಲ್ಲಿ.. ಒಂದು ತನಿಖಾ ವರದಿ :)


ಪರಿಚಿತನೊಬ್ಬನ ಮನೆಯ ಟೆರೇಸ್ ಮೇಲೆ,ಆತನೊಂದಿಗೆ ಕಾಫಿ ಕುಡಿಯುತ್ತಾ, ರಾಜಕೀಯದಿಂದ ಹಿಡಿದು ಕ್ರಿಕೆಟ್, ಸಿನೆಮಾ... ಬಗ್ಗೆ ಮಾತನಾಡುತ್ತಿದ್ದೆ. "ಈಗಲೂ ಇಷ್ಟು ಉದ್ದ ಹೊಗೆ ಕಾರುತ್ತಾ ಟ್ರೈನ್ ಹೋಗುತ್ತಿದೆಯಲ್ಲಾ?" ಎಂದು ಟೆರೆಸ್‌ನಿಂದ ದೂರದಲ್ಲಿ ಕಾಣಿಸುತ್ತಿದ್ದ ಹೊಗೆಯನ್ನು ನೋಡಿ ಹೇಳಿದೆ.


"ಅದು ಟ್ರೈನ್ ಅಲ್ಲವೋ, ಯಾವುದೋ ಫ್ಯಾಕ್ಟರಿ ಹೊಗೆ! ಕೆಲವೊಮ್ಮೆ ಕಿ.ಮೀ. ದೂರದವರೆಗೂ ಹೊಗೆ ಕಾಣಿಸುವುದು. ಅಲ್ಲಿಯ ಜನ ಹೇಗೆ ಇರುವರೋ?" ಅಂದನು.


ಅವನೊಂದಿಗೆ ಮಾತು ಮುಗಿದ ಮೇಲೆ, ಆ ಹೊಗೆ ಎಲ್ಲಿಂದ ಬರುತ್ತದೆ, ನೋಡೇ ಬಿಡೋಣ ಎಂದು ಬೈಕ್ ಸ್ಟಾರ್ಟ್ ಮಾಡಿ ಹೊಗೆಯ ದಿಕ್ಕಿನ ಕಡೆ ಹೊರಟೆ. ಹೇಸರ ಘಟ್ಟ ರಸ್ತೆಯಿಂದ, ರಾಜಾನು ಕುಂಟೆ ದಾರಿಯಾಗಿ ಇದೇ ಮೊದಲ ಬಾರಿಗೆ ಹೋದೆ.


*************


ಚಿನ್ನದಂತಹ ಬೆಳೆ ಬೆಳೆಯಬೇಕಿದ್ದ ಮಣ್ಣು , ಈಗ ಸೈಟ್, ರೋಡ್‌ಗಾಗಿ ಹಾಳಾಗುತ್ತಿದೆ. ಹಳೇ ಮನೆ ಒಡೆದು ಲಾರಿಯವನಿಗೆ ಸಾಗಿಸಲು ದುಡ್ಡುಕೊಡುವಿರಿ- ಅವೆಲ್ಲಾ ಎಲ್ಲಿ ರಾಶಿ ಬೀಳುತ್ತಿದೆ ನೋಡಿ-


*********


ಬಾಳೆ ತೋಟ,ತೆಂಗಿನ ತೋಟ, ಹೂವಿನ ತೋಟಗಳು ಇನ್ನೂ ಅಲ್ಲಲ್ಲಿ ತಮ್ಮ ಕೊನೆಯ ದಿನಗಳನ್ನು ನೆನಪಿಸಿಕೊಂಡು ಬದುಕಿದ್ದಾವೆ.


ಹಾಗೇ ಮುಂದೆ ಬರುತ್ತಾ ನೋಡಿದರೆ ಯಲಹಂಕ ಮೈನ್ ರಸ್ತೆಯಲ್ಲೇ ಹೊಗೆಯ ಮೂಲ ಸಿಕ್ಕಿತು!


ಇಷ್ಟು ಸಾಕು. ಇನ್ನು ಗೂಗ್‌ಲ್ ಸರ್ಚ್ ಮಾಡಿ ಫ್ಯಾಕ್ಟರಿ ಯಾವುದೆಂದು ನೋಡಿದರಾಯಿತು ಎಂದು ಮನೆಗೆ ಬಂದೆನು.


"NTPC"?


Yelahanka Diesel Power Station -ಯಲಹಂಕದಲ್ಲಿರುವ Diesel based power plant ಏ ಈ ಹೊಗೆಗೆ ಕಾರಣ ಇರಬಹುದು.  ಕೆಲವು ಕೊಂಡಿಗಳು-


http://en.wikipedia.org/wiki/List_of_power_stations_in_India


http://www.deccanherald.com/content/1543/stage-set-blores-largest-power.html


http://www.complaints-india.com/complaints/36442/AIR-POLLUTION-AT-YELAHANKA.html


"ಫ್ರಿಡ್ಜ್‌ನಿಂದ ಕೂಲ್ ಕೋಲಾ ತಾರೇ" ಎಂದು ನನ್ನಾಕೆಗೆ ಹೇಳಿ, ಎ.ಸಿ. ಆನ್ ಮಾಡಿ, ಟಿ.ವಿ.ಯಲ್ಲಿ IPL ಮ್ಯಾಚ್ ನೋಡುತ್ತಾ ಹಾಯಾಗಿ ಕುಳಿತೆ. ಕೆಲವರ ಮುಖ, ಬಟ್ಟೆ ಕಪ್ಪಾದರೇನು,ಆರೋಗ್ಯ ಹಾಳಾದರೇನು, ನಮಗೆ ೨೪ ಗಂಟೆ ಕರೆಂಟು ಸಿಗುತ್ತಿದೆಯಲ್ಲಾ ಥ್ಯಾಂಕ್ಸ್ ಟು "YDPS".



 



-ಗಣೇಶ.

Rating
No votes yet

Comments

Submitted by ಗಣೇಶ Tue, 03/12/2013 - 23:37

ಇದರ ಬಗ್ಗೆ ಒಂದು ವರದಿ ಮಾರ್ಚ್ ೯ರ TOI ನಲ್ಲಿ ಬಂದಿದೆ.ವರದಿ ಜತೆ ಪ್ರತಿಕ್ರಿಯೆಗಳನ್ನೂ ಗಮನಿಸಿ- http://articles.timesofindia.indiatimes.com/2013-03-09/pollution/37580580_1_power-plant-kpcl-cost-of-power-production

Submitted by Shreekar Wed, 03/13/2013 - 16:49

"ಕೈ" ಗೆ ಕೈ ಮಿಲಾಯಿಸಿ ರಾಜ್ಯದಲ್ಲಿ ವಾದ್ರಾನ ಅತ್ತೆ ಭಾವಂದಿರ ಸರಖಾರ ಬಂದರೆ ಸೂರ್ಯಶಕ್ತಿಯಿಂದ ವಿದ್ಯುತ್‌ ಪಡೆಯುವ ಅನೇಕ ಯೋಜನೆಗಳು ಕೈ ಗತವಾಗುತ್ತವೆ. ಹೀಗಾದಲ್ಲಿ ಡೀಸೆಲ್‌, ಕಲ್ಲಿದ್ದಲು, ನದಿನೀರು ಇತ್ಯಾದಿಗಳಿಂದ ವಿದ್ಯುತ್‌ ಪಡೆಯುವ ಯೋಜನೆಗಳು ಕಡಿಮೆಯಾಗಿ ಜನರೊ ಖುಶ್, ವಾದ್ರಾನೂ ಖುಶ್.

ಆದ್ದರಿಂದ ಕೈಗೆ ಕೈ ಕೊಡಿ.

Submitted by ಗಣೇಶ Wed, 03/13/2013 - 23:44

In reply to by Shreekar

ತಲೆಗೆ ತಾಗಿತು ತಲೆ-ಹೇನಿಗೆ ಸಿಕ್ಕಿತು ಹೊಸ ನೆಲೆ..ಎಂಬ ಜಾಹೀರಾತಿನಂತೆ---ಕೈಗೆ ಕೈ ಕೊಟ್ಟರೆ ವಾದ್ರಾಗೆ ಸಿಕ್ಕಿತು ಹೊಸ ನೆಲೆ. :)